
ಕಲಬುರಗಿ: ಎಲ್ಲರೂ ಎಲ್ಲೆಡೆ ಗಿಡಗಳನ್ನು ನೆಟ್ಟು ಪೋಷಿಸಿ ಬೆಳೆಸೋಣ, ಪರಿಸರವನ್ನು ಉಳಿಸುವುದು ಪ್ರಕೃತಿಯನ್ನು ಸಂರಕ್ಷಿಸುವುಲ್ಲದೇ ನಮ್ಮ ಬದುಕನ್ನು ಮತ್ತು ಮುಂದಿನ ಪೀಳಿಗೆಯ ಭವಿಷ್ಯವನ್ನು ಉಳಿಸುವ ಮಹಾ ಯಜ್ಞವಾಗಿದೆ ಎಂದು ಉಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ್ವರ ಶ್ರೀ ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಚಾರ್ಯ ಭಗತ್ಪಾದರು ನುಡಿದರು.
ಅವರು ನಗರದ ಸೊಗಸನಕೇರಿಯ ಶ್ರೀ ಗುರುಶಾಂತಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ಸಿದ್ಧಾಂತ ಶಿಖಾಮಣಿ ವಚನ ಸಾಹಿತ್ಯ ಸಮನ್ವಯಾತ್ಮಕ, ಆಧ್ಯಾತ್ಮಿಕ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಪರಿಸರವಾದಿ ಶೈಲೇಂದ್ರ ಕವಡಿಯವರು ಪ್ರತಿ ವರ್ಷ ಸಸಿಗಳನ್ನು ವಿತರಿಸುತ್ತಿದ್ದು ಅವರ ನಿಸ್ವಾರ್ಥ ಸೇವೆಯು ಅನುಕರಣೆಯಾಗಿದೆ ಎಂದರು.
ಆಳಂದ ಮಾಜಿ ಶಾಸಕರಾದ ಸುಭಾಷ ಗುತ್ತೇದಾರರವರ ಅಧ್ಯಕ್ಷತೆಯಲ್ಲಿ ಬೀದರ ಜಿಲ್ಲೆಯ ಪರಿಸರವಾದಿ ಶೈಲೇಂದ್ರ ಕವಡಿಯವರ ಉಪಸ್ಥಿತಿಯಲ್ಲಿ ಕೋಟಿ ಬಿಲ್ವವೃಕ್ಷದ ಆಂದೋಲನದ ಅಡಿಯಲ್ಲಿ ರೈತರಿಗೆ ಸಸ್ಯಗಳು ವಿತರಿಸಲಾಯಿತು.
ಕಡಗಂಚಿಯ ವೀರಭದ್ರ ಶಿವಾಚಾರ್ಯ ಸ್ವಾಮಿಗಳ ಹಾಗೂ ಕೇದಾರನಾಥ ಎಸ್. ಕುಲಕರ್ಣಿ ನೇತೃತ್ವದಲ್ಲಿ ಕಾಯಕಯೋಗಿ ಸೇವಾ ಸಂಸ್ಥೆಯ ಅಡಿಯಲ್ಲಿ ರಕ್ತದಾನ ಶಿಬಿರದಲ್ಲಿ ಅನೇಕ ಜನರು ರಕ್ತದಾನ ಮಾಡಿದರು.
ಪಾಳಾದ ಡಾ. ಗುರುಮೂರ್ತಿ ಶಿವಾಚಾರ್ಯರು, ಚಂದನಕೇರಾದ ರಾಚೋಟೇಶ್ವರ ಶಿವಾಚಾರ್ಯರು, ಚಿಣಮಗೇರಿ ವೀರಮಹಾಂತ ಶಿವಾಚಾರ್ಯರು, ಶಿವಲಿಂಗೇಶ್ವರ ಶಿವಾಚಾರ್ಯರು, ಸಿದ್ದನಕೇರಾದ ಹೊನ್ನಲಿಂಗೇಶ್ವರ ಸ್ವಾಮಿಗಳು, ಮುದ್ನಾಳದ ಮುರುಗೇಂದ್ರ ದೇವರು, ಸುಲೇಪೇಟ, ಕಡಗಂಚಿಯ ಶ್ರೀಗಳು, ಕಪನೂರಿನ ಮಲ್ಲಕಾರ್ಜುನಸ್ವಾಮಿ ಟೇಂಗಳಿ ಉಪಸ್ಥಿತರಿದ್ದರು.
ಶ್ರೀಮತಿ ಗೌರಿ ಚಿಂಚಕೋಟಿ ಬಿ.ಜೆ.ಪಿ. ಮಹಿಳಾಮೋರ್ಚಾ ಅಧ್ಯಕ್ಷರು, ಆನಂದರಾವ ಪಾಟೀಲ, ಚಂದ್ರಕಾಂತ ಭೂಸನೂರ, ನಾಗಯ್ಯಸ್ವಾಮಿ, ಶರಣಬಸಪ್ಪ ಬೆಣ್ಣೂರ, ಜಗದೀಶ ಬಿರಾದಾರ, ಆನಂದರಾವ ಪಾಟೀಲ ಕೊರಳ್ಳಿ, ಶಿವಾನಂದ ಅವರಳ್ಳಿ, ಬಿ.ಜಿ. ಸ್ವಾಮಿ ಗೋಳಾ, ಶಿವಾನಂದ ಮಠಪತಿ ಇದ್ದರು.
ಬೆಳಿಗ್ಗೆ ಲಿಂಗದೀಕ್ಷೆ ಅಯ್ಯಾಚಾರದಲ್ಲಿ ನೂರಾರು ಜನರು ದೀಕ್ಷಾ ಸಂಸ್ಕಾರ ಪಡೆದುಕೊಂಡರು. ಶ್ರೀ ಉಜ್ಜಯಿನಿ ಪೀಠದ ಗುರುಕುಲ ಸಾಧಕರಿಂದ ವೇದಘೋಷ ಜರುಗಿತು. ಮಾಜಿ ನಿದೇರ್ಶಕರಾದ ಈ.ಕ.ರ.ಸಾ.ಸಂಸ್ಥೆಯ ಮಲ್ಲಿಕಾರ್ಜುನ ತಡಕಲ್ ಸರ್ವರನ್ನು ಸ್ವಾಗತಿಸಿದರು. ಕಲಾವಿದರಿಂದ ಸಂಗೀತ ಜರುಗಿತು. ಯುವಸಾಹಿತಿ ಶಿವಯ್ಯ ಮಠಪತಿ ನಿರೂಪಿಸಿದರು.































