Home ಸುದ್ದಿ ರಾಷ್ಟ್ರೀಯ ಪರಮ್ ಪ್ರಜ್ಞಾ ಎಐ ಸೂಪರ್ ಕಂಪ್ಯೂಟಿಂಗ್ ಸೌಲಭ್ಯಕ್ಕೆ ಚಾಲನೆ

ಪರಮ್ ಪ್ರಜ್ಞಾ ಎಐ ಸೂಪರ್ ಕಂಪ್ಯೂಟಿಂಗ್ ಸೌಲಭ್ಯಕ್ಕೆ ಚಾಲನೆ

ನವದೆಹಲಿ, ಆ.8:- ಐಐಟಿಯ 57ನೇ ಘಟಿಕೋತ್ಸವದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ರಾಷ್ಟ್ರಪತಿ ಅವರ ಚಿನ್ನದ ಪದಕ, ನಿರ್ದೇಶಕರ ಚಿನ್ನದ ಪದಕ, ಶಂಕರ್ ದಯಾಳ್ ಶರ್ಮಾ ಚಿನ್ನದ ಪದಕ ಮತ್ತು ಪರ್ಫೆಕ್ಟ್ ಟೆನ್ ಚಿನ್ನದ ಪದಕ ಸೇರಿದಂತೆ ಐಐಟಿಯ ಉನ್ನತ ಗೌರವಗಳನ್ನು ಪ್ರಧಾನಿ ನರೇಂದ್ರ ಮೋದಿ ಪ್ರದಾನ ಮಾಡಿದರು.
ಬಳಿಕ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ವಿದ್ಯಾರ್ಥಿಗಳು ಪದವಿಗಿಂತ ಹೆಚ್ಚಿನ ಪದವಿಯೊಂದಿಗೆ ಹೊರಡುತ್ತಿದ್ದಾರೆ, ಕನಸುಗಳು ಮತ್ತು ದೇಶಕ್ಕೆ ಕೊಡುಗೆ ನೀಡುವ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ ಎಂದು ಹೇಳಿದರು.


“ನೀವು ಕೇವಲ ಪದವಿಯನ್ನು ಗಳಿಸುತ್ತಿಲ್ಲ. ಆದರೆ ನೀವು ದೇಶಕ್ಕಾಗಿ ಬಹಳಷ್ಟು ಮಾಡುವ ಕನಸುಗಳೊಂದಿಗೆ ಹೊರಡುತ್ತಿದ್ದೀರಿ” ಎಂದು ಅವರು ಹೇಳಿದರು. ನಿರಂತರ ಕಲಿಕೆಯ ಮಹತ್ವವನ್ನು ಒತ್ತಿ ಹೇಳಿದ ಪ್ರಧಾನಿ, ಜಗತ್ತು ಮತ್ತು ಉದ್ಯಮವು ಬದಲಾಗುತ್ತಲೇ ಇರುತ್ತದೆ, ಆದರೆ ಕಲಿಯುತ್ತಲೇ ಇರುವವರು ಮುಂದೆ ಏನಾಗುತ್ತದೆ ಎಂಬುದಕ್ಕೆ ಸಿದ್ಧರಾಗಿರುತ್ತಾರೆ ಎಂದು ಹೇಳಿದರು.


ಸವಾಲುಗಳಿಗಳಿಗೆ ಪರಿಹಾರಗಳನ್ನು ಕಂಡುಹಿಡಿಯಲು ಮತ್ತು ನಾವೀನ್ಯತೆಯನ್ನು ಹೆಚ್ಚಿಸಲು ಅವಕಾಶಗಳಾಗಿ ಎದುರು ನೋಡುವಂತೆ ವಿದ್ಯಾರ್ಥಿಗಳನ್ನು ಒತ್ತಾಯಿಸಿದ ಅವರು, ಪದವಿಯು ಕಠಿಣ ಸಮಸ್ಯೆಗಳನ್ನು ನಿಭಾಯಿಸುವ ಸಾಮಥ್ರ್ಯವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.
ಪರಮ ಪ್ರಜ್ಞಾ ಎಐ ಸೂಪರ್ ಕಂಪ್ಯೂಟಿಂಗ್ ಸೌಲಭ್ಯಕ್ಕೆ ಚಾಲನೆ
ಐಐಟಿ ದೆಹಲಿಯ ಸೋನಿಪತ್ ಕ್ಯಾಂಪಸ್ ನಲ್ಲಿ ಸ್ಥಾಪಿಸಲಾದ ಎಐ-ಚಾಲಿತ ಹೈ-ಪರ್ಫಾರ್ಮೆನ್ಸ್ ಸೂಪರ್ ಕಂಪ್ಯೂಟಿಂಗ್ ಸೌಲಭ್ಯವಾದ ಪರಮ್ ಪ್ರಜ್ಞಾವನ್ನು ಪ್ರಧಾನಿ ಮೋದಿ ಉದ್ಘಾಟಿಸಿದರು.


ಈ ಸೌಲಭ್ಯವು ಸಂಸ್ಥೆಯಲ್ಲಿ ಸುಧಾರಿತ ಕಂಪ್ಯೂಟಿಂಗ್ ಮತ್ತು ಕೃತಕ ಬುದ್ಧಿಮತ್ತೆ ಸಾಮಥ್ರ್ಯಗಳನ್ನು ಬಲಪಡಿಸುವ ಮತ್ತು ಉದಯೋನ್ಮುಖ ತಂತ್ರಜ್ಞಾನಗಳಲ್ಲಿನ ಸಂಶೋಧನೆಯನ್ನು ಬೆಂಬಲಿಸುವ ಗುರಿಯನ್ನು ಹೊಂದಿದೆ.
57 ನೇ ಘಟಿಕೋತ್ಸವ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಶಿಕ್ಷಣ ಸಚಿವ ಪ್ರಲ್ಹಾದ್ ಜೋಶಿ, ಪ್ರಧಾನಿ ಮೋದಿ ಅವರ ದೂರದೃಷ್ಟಿಯಡಿಯಲ್ಲಿ ಭಾರತದ ಶಿಕ್ಷಣ ಪರಿಸರ ವ್ಯವಸ್ಥೆಯ ಪರಿವರ್ತನೆಯನ್ನು ಬಿಂಬಿಸುತ್ತದೆ


“ಪ್ರಧಾನಿ ಮೋದಿಯವರ ದೂರದೃಷ್ಟಿಯು ನಮ್ಮ ಶಿಕ್ಷಣ ಪರಿಸರ ವ್ಯವಸ್ಥೆಯನ್ನು ಕಲಿಯುವ ಕೇಂದ್ರಿತ, ಸಂಶೋಧನೆ-ಚಾಲಿತ ಮತ್ತು ಭವಿಷ್ಯಕ್ಕೆ ಸಿದ್ಧಗೊಳಿಸಿದೆ” ಎಂದು ಜೋಶಿ ಹೇಳಿದರು.
ಪ್ರಧಾನಿಯವರು ಭಾರತದ ಶಿಕ್ಷಣ ಸಂಸ್ಥೆಗಳಲ್ಲಿ ಹೊಸ ವಿಶ್ವಾಸವನ್ನು ತುಂಬಿದ್ದಾರೆ ಮತ್ತು ಕ್ಯಾಂಪಸ್ ಗಳು ಈಗ ಪದವೀಧರರನ್ನು ಮಾತ್ರವಲ್ಲದೆ ನಾವೀನ್ಯಕಾರರು, ಸಂಶೋಧಕರು ಮತ್ತು ರಾಷ್ಟ್ರ ನಿರ್ಮಾತೃಗಳನ್ನು ರೂಪಿಸುವ ಸಾಮಥ್ರ್ಯವನ್ನು ಹೊಂದಿವೆ ಎಂದು ಅವರು ಹೇಳಿದರು.