
ಗುರುಮಠಕಲ್: ತಾಲೂಕಿನ ಅಜಲಾಪುರ, ಜೈಗ್ರಾಮ ಗ್ರಾಮ ಪಂಚಾಯಿತಿಗಳಿಗೆ ಜಿಲ್ಲಾ ಪಂಚಾಯಿತಿಯ (ಡಿಆರ್ ಡಿ ಎ) ಯೋಜನಾ ನಿರ್ದೇಶಕರಾದ ಮಾನ್ಯ ಶ್ರೀ ಸಿ ಬಿ ದೇವರಮನಿ ಅವರು ಭೇಟಿ ನೀಡಿದರು. ಕರವಸೂಲಿಗಾರರ ದಿನ ವಸೂಲಿ ರೆಜಿಸ್ಟರ್ ಬ್ಯಾಂಕಿಗೆ ಚಾಲನ್ ತುಂಬಿದ ರೆಜಿಸ್ಟರ್ ಪರಿಶೀಲಿಸಿದರು. ಎನ್ ಆರ್ ಎಲ್ ಎಮ್ ರೆಜಿಸ್ಟರ್ ಗಳು ತಪಾಸಣೆ ನಡೆಸಿದರು. ಕರ ವಸೂಲಿಗಾರರು ಕಟ್ಟಬೇಕಿದ್ದ ಬಾಕಿ ಮೊತ್ತ ಕಟ್ಟುವಂತೆ ತಿಳಿಸಿದರು. ವಿಬಿ-ಜಿ ರಾಮ್ ಜಿ ಯೋಜನೆಯಡಿ ಯುಕ್ತದಾರ್ ಪೋರ್ಟಲ್ ನಲ್ಲಿ ಕಾಮಗಾರಿಗಳನ್ನು ನಮೂದಿಸುವುದು. ಶೀಘ್ರವೇ ಎನ್ ಎಮ್ ಆರ್ ತೆಗೆದು ಹೆಚ್ಚಿನ ಸಂಖ್ಯೆಯಲ್ಲಿ ಕೂಲಿಕಾರರಿಗೆ ಕೆಲಸ ಕೊಡುವುದು ಸೇರಿದಂತೆ ಇನ್ನಿತರ ವಿಷಯಗಳ ಕುರಿತು ತಿಳಿಸಿದರು. ಈ ಸಂದರ್ಭದಲ್ಲಿ ಗುರುಮಠಕಲ್ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಮಾನ್ಯ ಶ್ರೀ ಅಂಬರೀಶ್ ಪಾಟೀಲ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಉಮೇಶ್ , ಕಾರ್ಯದರ್ಶಿ ಸೈಯ್ಯದ್ ಅಲಿ ಸಿದ್ದಯ್ಯ ಸ್ವಾಮಿ, ಕರ ವಸೂಲಿಗಾರರಾದ ಮಲ್ಲಿಕಾರ್ಜುನ, ರಮೇಶ್, ಡಿಇಓ ಮಹೇಶ್, ರಾಮು ಹಾಗೂ ಟಿಸಿ ಮುಜಾಮಿಲ್, ಟಿಎಂಐಎಸ್ ತಮ್ಮಾರೆಡ್ಡಿ, ಟಿಐಇಸಿ ರಾಘವೇಂದ್ರ, ಟಿಎಇ ರಾಜು ರೆಡ್ಡಿ, ಬಿ ಎಫ್ ಟಿ ಯಂಕಣ್ಣ ಮಾಳಪ್ಪ, ಎನ್ ಆರ್ ಎಲ್ ಎಮ್ ಸಿಬ್ಬಂದಿ ವರ್ಗದವರು ಮತ್ತು ಗ್ರಾಮ ಪಂಚಾಯತಿ ಸಿಬ್ಬಂದಿ ವರ್ಗದವರು ಹಾಜರಿದ್ದರು.





























