Home ಜಿಲ್ಲೆ ಪ್ರೊ. ಎ.ಎಚ್. ಕೊಳಮಲಿ ಅತ್ಯುತ್ತಮ ಮುಖ್ಯೋಪಾಧ್ಯಾಯ ಪ್ರಶಸ್ತಿಗೆ ಆಯ್ಕೆ

ಪ್ರೊ. ಎ.ಎಚ್. ಕೊಳಮಲಿ ಅತ್ಯುತ್ತಮ ಮುಖ್ಯೋಪಾಧ್ಯಾಯ ಪ್ರಶಸ್ತಿಗೆ ಆಯ್ಕೆ

ವಿಜಯಪುರ, ಸೆ. 15:
ಮುದ್ರಣ ನಗರಿ ಗದಗದಲ್ಲಿ ನಡೆಯುವ ರಾಜ್ಯಮಟ್ಟದ ಶಿಕ್ಷಕರ ಸಮ್ಮೇಳನದಲ್ಲಿ ಐತಿಹಾಸಿಕ ನಗರ ವಿಜಯಪುರದ ಸಾಹಿತಿ, ಸಂಪನ್ಮೂಲ ಶಿಕ್ಷಕ, ವಿಜಯಪುರದ ಚೇತನಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಸಾಹಿತಿ, ಪೆÇ್ರ. ಎ.ಎಚ್. ಕೊಳಮಲಿಯವರಿಗೆ ಅತ್ಯುತ್ತಮ ಮುಖ್ಯೋಪಾಧ್ಯಾಯ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಈ ಪ್ರಶಸ್ತಿಯನ್ನು ಗದಗ – ಕಳಸಾಪುರದ ಕಪ್ಪತ್ತಗಿರಿ ಸಾಹಿತ್ಯ ಫೌಂಡೇಶನ್ ರಾಜ್ಯ ಘಟಕದಿಂದ ನೀಡಲಾಗುತ್ತಿದೆ.
ಶೈಕ್ಷಣಿಕ ಕ್ಷೇತ್ರದಲ್ಲಿನ ಅಪಾರ ಅನುಭವ, ಮಕ್ಕಳ ಬಗ್ಗೆ ಅಪಾರ ಕಾಳಜಿ, ಶಿಕ್ಷಣ ಕ್ಷೇತ್ರದ ಉತ್ತಮ ಆಡಳಿತದ ಅನುಭವದ ಹಿನ್ನೆಲೆಯಲ್ಲಿ ಪೆÇ್ರ. ಎ.ಎಚ್. ಕೊಳಮಲಿಯವರಿಗೆ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
ಸೆಪ್ಟೆಂಬರ್ 20 ರಂದು ರಾಜ್ಯದ ಅನೇಕ ಗಣ್ಯರ ಸಮ್ಮುಖದಲ್ಲಿ ಗದಗದಲ್ಲಿ ನಡೆಯುವ ರಾಜ್ಯಮಟ್ಟದ ಶಿಕ್ಷಕರ ಸಮ್ಮೇಳನದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದು ಕಪ್ಪತ್ತಗಿರಿ ಸಾಹಿತ್ಯ ಫೌಂಡೇಶನ್ ದ ಅಧ್ಯಕ್ಷೆ, ಸಮ್ಮೇಳನ ಸಂಘಟನೆಯ ಮುಖ್ಯಸ್ಥೆ ಚಂದ್ರಕಲಾ ಇಟಗಿಮಠ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಮುಂಚೆ ಕೊಳಮಲಿಯವರಿಗೆ ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರದ ಸಾಧನೆಗೆ ಕರ್ನಾಟಕ ಅಚೀವರ್ಸ್ ಪ್ರಶಸ್ತಿ, ಹೆಮ್ಮೆಯ ಕನ್ನಡಿಗ ಪ್ರಶಸ್ತಿ, ಬಸವಭೂಷಣ ಪ್ರಶಸ್ತಿ, ಉತ್ತಮ ಉಪನ್ಯಾಸಕ ಪ್ರಶಸ್ತಿ,ಉತ್ತಮ ಶಿಕ್ಷಕ ಪ್ರಶಸ್ತಿಗಳು ಲಭಿಸಿವೆ.