Home ಜಿಲ್ಲೆ ಬೆಂಗಳೂರು ಪ್ರಧಾನಿ ಮೋದಿಯವರ ಜನ್ಮದಿನದ ಅಂಗವಾಗಿ ವಿಶೇಷ ಪೂಜೆ

ಪ್ರಧಾನಿ ಮೋದಿಯವರ ಜನ್ಮದಿನದ ಅಂಗವಾಗಿ ವಿಶೇಷ ಪೂಜೆ

oplus_0

ಕನಕಪುರ: ಸೆ. ೧೭: ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟು ಹಬ್ಬದ ಅಂಗವಾಗಿ ಕನಕಪುರ ನಗರದ ಶ್ರೀ ಕೋದಂಡ ರಾಮಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಚನ್ನಬಸಪ್ಪವೃತ್ತದಲ್ಲಿ ಇರುವ ಅವರ ಎತ್ತರದ ಭಾವಚಿತ್ರಕ್ಕೆ ಪುಷ್ಪಾಚಾರಣೆ ಮಾಡಿ ಹಾಲಿನ ಅಭಿಷೇಕವನ್ನು ಮಾಡಲಾಯಿತು.


ಕನಕಪುರ ತಾಲೂಕು ಘಟಕದ ಅಧ್ಯಕ್ಷ ಕೆ.ಪಿ. ಕುಮಾರ್ ಮತ್ತು ನಗರ ಮಂಡಲದ ಅಧ್ಯಕ್ಷ ಚೂಡಾಮಣಿ ಚಂದ್ರು ನೇತೃತ್ವದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.


ನಗರದ ಚನ್ನಬಸಪ್ಪ ವೃತ್ತದ ಬಳಿ ಪ್ರಧಾನಿ ನರೇಂದ್ರ ಮೋದಿಯವರ ಬೃಹತ್ ಗಾತ್ರದ ಕಟೌಟ್‌ಗೆ ಕ್ಷೀರಾಭಿಷೇಕ ನಡೆಸಿ ಪುಷ್ಪವನ್ನು ಅರ್ಪಿಸಿದರು. ಇದೇ ಸಂದರ್ಭದಲ್ಲಿ ನಗರಸಭೆಯ ಮುಂಭಾಗ ಇರುವ ಪುಟ್‌ಬಾತ?ನಲ್ಲಿ ನೂರಾರು ಜನ ಸಾರ್ವಜನಿಕರಿಗೆ ಟೀ ವಿತರಿಸಲಾಯಿತು. ಹಾಗೆಯೇ ನಗರಸಭೆಯ ಸಿಬ್ಬಂದಿಗಳನ್ನು ಗೌರವಿಸಿ ಸನ್ಮಾನಿಸಲಾಯಿತು.


ಚನ್ನಬಸಪ್ಪವೃತ್ತದಲ್ಲಿ ಸಂಚರಿಸುವ ಜನರಿಗೆ ಸಿಹಿ ಕೂಡ ವಿತರಿಸಿ ಜೈ ಶ್ರೀರಾಮ್ ಘೋಷಣೆಯ ಮೂಲಕ ತಮ್ಮ ಸಂತಸವನ್ನು ವ್ಯಕ್ತಪಡಿಸಿದರು.


ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿಗಳಾದ ಮದನ್, ಅಡನಕುಪ್ಪೆ ಪಾಲಾಕ್ಷ, ಆಶ್ವತ್ ನಾರಾಯಣ್, ಜಿಲ್ಲಾಸಮಾಜಿಕ ಜಾಲತಾಣದ ಅಧ್ಯಕ್ಷ ಡಿ.ಕೆ. ಭರತ್ ಕುಮಾರ್, ಜಿಲ್ಲಾಕಾರ್ಯದರ್ಶಿಗಳಾದ ಮಮತಾ, ಪವಿತ್ರ, ಕೋಟೆ ಕೃಷ್ಣಪ್ಪ, ಉಪಾಧ್ಯಕ್ಷರುಗಳಾದ ಮರಿಗೌಡ, ಕೆಂಪೇಗೌಡ, ಭಗತ್ ರಾಮು, ಪುಟ್ಟಸ್ವಾಮಿ ಮೊದಲಾದವರು ಉಪಸ್ಥಿತರಿದ್ದರು.