Home ಜಿಲ್ಲೆ ಕಲಬುರಗಿ ಸಿಎಂಗೆ ಮುತ್ತಿಗೆ ಹಾಕಲು ಯತ್ನ; ಎಸ್‍ಎಫ್‍ಐ ಕಾರ್ಯಕರ್ತರು ವಶಕ್ಕೆ

ಸಿಎಂಗೆ ಮುತ್ತಿಗೆ ಹಾಕಲು ಯತ್ನ; ಎಸ್‍ಎಫ್‍ಐ ಕಾರ್ಯಕರ್ತರು ವಶಕ್ಕೆ

ಕಲಬುರಗಿ,ಸೆ.17-ಕಲ್ಯಾಣ ಕರ್ನಾಟಕದ ಸರ್ಕಾರಿ ಶಾಲೆಗಳಲ್ಲಿ ಶೈಕ್ಷಣಿಕ ಹಾಗೂ ಮೂಲಸೌಕರ್ಯ ಸಮಸ್ಯೆಗಳು ತೀವ್ರವಾಗಿದ್ದು, ರಾಜ್ಯ ಸರ್ಕಾರ ತಕ್ಷಣ ಅವುಗಳನ್ನು ಪರಿಹರಿಸಬೇಕು ಎಂದು ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‍ಎಫ್‍ಐ) ಕಲಬುರಗಿ ಜಿಲ್ಲಾ ಸಮಿತಿ ವತಿಯಿಂದ ಗುರುವಾರ ನಗರದ ಸರ್ದಾರ್ ವಲ್ಲಭ ಭಾಯಿ ಪಟೇಲ್ ವೃತ್ತದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮುತ್ತಿಗೆ ಹಾಕಲು ಯತ್ನಿಸಿದ ವೇಳೆ ಅವರನ್ನು ಪೆÇಲೀಸರು ವಶಕ್ಕೆ ಪಡೆದಿರುವ ಘಟನೆ ನಡೆಯಿತು.
ರಾಜ್ಯ ಸರ್ಕಾರದ ಅಂಕಿ ಅಂಶಗಳ ಪ್ರಕಾರ ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ 8,706 ಸರ್ಕಾರಿ ಶಾಲಾ ಕೊಠಡಿಗಳು ಶಿಥಿಲಗೊಂಡಿವೆ. ಈ ಪೈಕಿ 7,419 ಪ್ರಾಥಮಿಕ ಹಾಗೂ 1,287 ಪ್ರೌಢಶಾಲಾ ಕೊಠಡಿಗಳು ಅಸುರಕ್ಷಿತ ಸ್ಥಿತಿಯಲ್ಲಿವೆ. ಶಿಥಿಲ ಕಟ್ಟಡಗಳಲ್ಲಿಯೇ ತರಗತಿಗಳು ನಡೆಯುತ್ತಿರುವುದರಿಂದ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಸುರಕ್ಷತೆ ಕುರಿತು ಗಂಭೀರ ಆತಂಕವಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾವಾರು ಅಂಕಿಅಂಶದಂತೆ ಕಲಬುರಗಿಯಲ್ಲಿ 2,334, ಯಾದಗಿರಿಯಲ್ಲಿ 1,451, ಬೀದರ್‍ನಲ್ಲಿ 1,315, ವಿಜಯನಗರದಲ್ಲಿ 1,075, ಕೊಪ್ಪಳದಲ್ಲಿ 1,036, ಬಳ್ಳಾರಿಯಲ್ಲಿ 756 ಹಾಗೂ ರಾಯಚೂರಿ
756 ಹಾಗೂ ರಾಯಚೂರಿನಲ್ಲಿ 739 ಶಾಲಾ ಕೊಠಡಿಗಳು ಶಿಥಿಲಗೊಂಡಿವೆ ಎಂದು ಅವರು ತಿಳಿಸಿದರು.

371(ಜೆ) ಸಮರ್ಪಕವಾಗಿ ಜಾರಿಗೊಳಿಸಲು ಆಗ್ರಹ
ಎಸ್‍ಎಫ್‍ಐ ಕೇಂದ್ರ ಸಮಿತಿ ಸದಸ್ಯೆ ಸುಜಾತ ವೈ. ಮಾತನಾಡಿ, ಸಂವಿಧಾನದ 371(ಜೆ) ಅಡಿಯಲ್ಲಿ ಕಲ್ಯಾಣ ಕರ್ನಾಟಕಕ್ಕೆ ನೀಡಿರುವ ವಿಶೇಷ ಕಲ್ಯಾಣ ಕರ್ನಾಟಕಕ್ಕೆ ನೀಡಿರುವ ವಿಶೇಷ ಸ್ಥಾನಮಾನದ ಉದ್ದೇಶ ಈ ಭಾಗದ ವಿದ್ಯಾರ್ಥಿಗಳು ಹಾಗೂ ಯುವಜನರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ವಿಶೇಷ ಅವಕಾಶಗಳನ್ನು ಖಾತ್ರಿಪಡಿಸುವುದಾಗಿದೆ.
ಆದರೆ 371(ಜೆ) ಅನುಷ್ಠಾನದಲ್ಲಿನ ಹಲವು ಸಮಸ್ಯೆಗಳಿಂದಾಗಿ ವಿದ್ಯಾರ್ಥಿಗಳು ತಮ್ಮ ಹಕ್ಕಿನ ಅವಕಾಶಗಳನ್ನು ಪಡೆಯಲು ಪರದಾಡುವಂತಾಗಿದೆ ಎಂದು ಆರೋಪಿಸಿದರು.
ಎಸ್‍ಎಫ್‍ಐ ಜಿಲ್ಲಾಧ್ಯಕ್ಷ ಸರ್ವೇಶ್ ಪಿ. ಮಾವಿನಕರ್ ಮಾತನಾಡಿ, ಕಲ್ಯಾಣ ಕರ್ನಾಟಕದಲ್ಲಿ ಸರ್ಕಾರಿ ಶಾಲಾ-ಕಾಲೇಜುಗಳ ಮೂಲಸೌಕರ್ಯ ಕೊರತೆ, ಶಿಕ್ಷಕರು ಮತ್ತು ಉಪನ್ಯಾಸಕರ ಖಾಲಿ ಹುದ್ದೆಗಳ ಹುದ್ದೆಗಳು, ಹಾಸ್ಟೆಲ್‍ಗಳ ಕೊರತೆ, ವಿದ್ಯಾರ್ಥಿವೇತನ ವಿಳಂಬ ಹಾಗೂ ಸಾರಿಗೆ ಸಮಸ್ಯೆಗಳು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅಡ್ಡಿಯಾಗುತ್ತಿವೆ ಎಂದರು.
ಸರ್ಕಾರ ಕೂಡಲೇ ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಕಲ್ಯಾಣ ಕರ್ನಾಟಕ ಬಂದ್‍ಗೆ ಕರೆ ನೀಡಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಎಸ್‍ಎಫ್‍ಐ ಕೇಂದ್ರ ಸಮಿತಿ ಸದಸ್ಯೆ ಸುಜಾತ ವೈ, ಜಿಲ್ಲಾಧ್ಯಕ್ಷ ಸರ್ವೇಶ್ ಪಿ. ಮಾವಿನಕರ್, ರಾಜ್ಯ ಸಮಿತಿ ಸದಸ್ಯ ಇಮಾಮ್‍ಸಾಬ್ ನದಾಫ್, ಜಿಲ್ಲಾ ಸಮಿತಿ ಸದಸ್ಯ ಮಂಜುನಾ
ಸದಸ್ಯ ಮಂಜುನಾಥ್, ಮುಖಂಡರಾದ ಬೃಂದಾ ಎಸ್. ಧನ್ನಿ, ತಾಯಣ್ಣ ಟೋಕಪೂರ್, ಪ್ರದೀಪ್ ಮ್ಯಾಗಡಿ, ಬಾಬಾಸಾಹೇಬ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.