Home ಜಿಲ್ಲೆ ಪ್ರಬಂಧ ಸ್ಪರ್ಧೆ ವಿಜೇತ ಮಕ್ಕಳಿಗೆ ಪುರಸ್ಕಾರ ವಿತರಣೆ

ಪ್ರಬಂಧ ಸ್ಪರ್ಧೆ ವಿಜೇತ ಮಕ್ಕಳಿಗೆ ಪುರಸ್ಕಾರ ವಿತರಣೆ

ಬೀದರ್: ನಗರದ ಭೀಮನಗರದಲ್ಲಿರುವ ಶ್ರೀ ಜಗದಂಬಾ ಭವಾನಿ ಮಾತಾ ಮಂದಿರದಲ್ಲಿ ಕಸ್ತೂರಿಬಾಯಿ ಟ್ರಸ್ಟ್ ಬೀದರ್ ವತಿಯಿಂದ ಮಕ್ಕಳಿಗಾಗಿ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಪುರಸ್ಕಾರ ವಿತರಿಸಲಾಯಿತು.

ಕರ್ನಾಟಕ ಮಹಾವಿದ್ಯಾಲಯದ ಸೇವಾ ನಿವೃತ್ತ ಪ್ರಾಂಶುಪಾಲರಾದ ಡಾ. ಕಲ್ಪನಾ ವಿನಾಯಕರಾವ ದೇಶಪಾಂಡೆ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಿವೃತ್ತ ಮಾಜಿ ಸೈನಿಕ ನಂದಕುಮಾರ ಕಾಂಬಳೆ ಅವರು ಮಕ್ಕಳಿಗೆ ಪುರಸ್ಕಾರ ವಿತರಿಸಿದರು.

ಟ್ರಸ್ಟ್ ಅಧ್ಯಕ್ಷ ಯೋಗೇಶ ವೈ. ಢಗೆ ಮಾತನಾಡಿ, ಮಕ್ಕಳ ಶೈಕ್ಷಣಿಕ ಹಾಗೂ ಸವಾರ್ಂಗೀಣ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ರೂಪಿಸಲಾಗಿದ್ದು, ಅವುಗಳ ಮಹತ್ವವನ್ನು ವಿವರಿಸಿದರು.

ಪ್ರಬಂಧ ಸ್ಪರ್ಧೆಯಲ್ಲಿ ಒಟ್ಟು 50 ಮಕ್ಕಳು ಭಾಗವಹಿಸಿದ್ದು, ಅವರಲ್ಲಿ 13 ಮಕ್ಕಳನ್ನು ಆಯ್ಕೆ ಮಾಡಿ ಪುರಸ್ಕರಿಸಿ ಸನ್ಮಾನಿಸಲಾಯಿತು.

ಕಾರ್ಯಕ್ರಮವನ್ನು ಕುಮಾರಿ ಅಣವಿತಾ ಹಾಗೂ ವಿವೇಕ ಪಾಟೀಲ ಅಚ್ಚುಕಟ್ಟಾಗಿ ನಿರ್ವಹಿಸಿದರು.