Home ಮುಖಪುಟ ಸುದ್ದಿ ಪಥ ಸಂಚಲನ ಅನುಮತಿ ಕೇಳದ ಆರ್ ಎಸ್ ಎಸ್ ವಿರುದ್ಧ ಪ್ರಿಯಾಂಕ್ ಕಿಡಿ

ಪಥ ಸಂಚಲನ ಅನುಮತಿ ಕೇಳದ ಆರ್ ಎಸ್ ಎಸ್ ವಿರುದ್ಧ ಪ್ರಿಯಾಂಕ್ ಕಿಡಿ

ಬೆಂಗಳೂರು ಅ. ೨೧ ಆರ್‌ಎಸ್‌ಎಸ್ ಸಂಘಟನೆಯ ವಿರುದ್ಧ ರಾಜ್ಯದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಆರ್‌ಎಸ್‌ಎಸ್ ನಡೆಸುತ್ತಿರುವ ಪಥಸಂಚಲನ ಮತ್ತು ಮೋಹನ್ ಭಾಗವತ್ ಅವರ ’ರೆಜಿಮ್ ಚೇಂಜ್’ ಕುರಿತ ಹೇಳಿಕೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಅವರು ಪ್ರಶ್ನೆಗಳನ್ನು ಎತ್ತಿದ್ದಾರೆ. ಪಥಸಂಚಲನ ಮಾಡಬೇಕಾದರೆ ಮಾಹಿತಿಗಾಗಿ ಮಾತ್ರ ಕೊಡುತ್ತಿದ್ದಾರೆ. ದಯವಿಟ್ಟು ಮಾಹಿತಿಗಾಗಿ ಅಲ್ಲ, ಅನುಮತಿ ಕೇಳಿ.

ಪೊಲೀಸ್ ಇಲಾಖೆ ಆರ್‌ಎಸ್‌ಎಸ್ ನ ಆಳು ಮಕ್ಕಳಲ್ಲ. ಮಾಹಿತಿ ಕೊಟ್ಟು ’ಮೇಕ್ ನೆಸೆಸರಿ ಅರೇಂಜ್ಮೆಂಟ್ಸ್’ ಎಂದು ಹೇಳುವುದು ಸರಿಯಲ್ಲ. ಹಬ್ಬದ ವಾತಾವರಣದಲ್ಲಿ ಅನೇಕ ಜನರು ಆಚರಣೆ ಮಾಡುತ್ತಾರೆ. ನೀವು ಅನುಮತಿ ಕೇಳಿ, ಸೂಕ್ತ ಅನಿಸಿದರೆ ಅನುಮತಿ ನೀಡುತ್ತೇವೆ. ಗಣೇಶ ಮೆರವಣಿಗೆ ಮಾಡುವಾಗ ಮಾಹಿತಿ ಕೇಳುತ್ತೀರಾ ಅಥವಾ ಅನುಮತಿ ಕೇಳುತ್ತೀರಾ? ಮನೆ ಕಾರ್ಯಕ್ರಮ ಮಾಡಬೇಕಾದರೆ ರಸ್ತೆಯ ಮೇಲೆ ಪೆಂಡಾಲ್ ಹಾಕಿದಾಗ ಏನು ಮಾಡುತ್ತೀರೋ ಅದೇ ನಿಯಮ ಆರ್‌ಎಸ್‌ಎಸ್ ಗೂ ಅನ್ವಯಿಸುತ್ತದೆ. ಆರ್‌ಎಸ್‌ಎಸ್ ಕಾನೂನು ಮತ್ತು ಸಂವಿಧಾನಕ್ಕಿಂತ ಮೇಲಲ್ಲ, ಎಂದು ಹೇಳಿದರು.

“ರೆಜಿಮ್ ಹೇಗೆ ಚೇಂಜ್ ಮಾಡಲು ಸಾಧ್ಯ? ಮುಖ್ಯ ಚುನಾವಣಾ ಆಯುಕ್ತರು, ಇವಿಎಂ, ವೋಟರ್ ಲಿಸ್ಟ್, ಫಾರ್ಮ್ ೬ ಮತ್ತು ಫಾರ್ಮ್ ೭ ಎಲ್ಲವೂ ಅವರದ್ದೇ ಆಗಿವೆ. ಇದು ಶಾಶ್ವತ ಅಧಿಕಾರದಲ್ಲಿ ಇರಲು ಮಾಡುತ್ತಿರುವ ಸಂಚು. ಜನರು ಈಗ ಬೀದಿಗಿಳಿಯುತ್ತಿರುವುದೇ ಇದಕ್ಕೆ ಸಾಕ್ಷಿ. ಎಂದರು

ನೂರು ವರ್ಷದ ಇತಿಹಾಸದಲ್ಲಿ ಆರ್‌ಎಸ್‌ಎಸ್ ಯಾವ ಪ್ರತಿಭಟನೆ ಮಾಡಿದೆ ಅವರು ಬ್ರಿಟಿಷರ ಗುಲಾಮರು, ಪೆನ್ಷನ್ ತೆಗೆದುಕೊಳ್ಳುವವರ ಬಳಿ ನಾವು ಕಲಿಯಬೇಕೇ ಅವರ ನಾಯಕ ಸಾವರ್ಕರ್ ಅವರು ಬ್ರಿಟಿಷರಿಂದ ೬೦ ರೂಪಾಯಿ ಪೆನ್ಷನ್ ತೆಗೆದುಕೊಳ್ಳುತ್ತಿದ್ದರು. ಆರ್‌ಎಸ್‌ಎಸ್ ಸಾಮಾಜಿಕ ಅಥವಾ ರಾಜಕೀಯ ಸಂಘಟನೆಯೇ ಸ್ಪಷ್ಟಪಡಿಸಬೇಕು. ಎಲ್ಲದರ ಬಗ್ಗೆ ಮಾತನಾಡುತ್ತಾರೆ ಆದರೆ ಸಾಂಸ್ಕೃತಿಕ ಸಂಘಟನೆ ಎಂದು ಹೇಳುತ್ತಾರೆ. ನಾವು ಬಿಜೆಪಿಯ ರಾಜಕೀಯ ಮಾರ್ಗದರ್ಶಕರು ಎಂದು ಹೇಳಿಬಿಡಿ,” ಎಂದು ಪ್ರಿಯಾಂಕ ಪ್ರಶ್ನಿಸಿದರು.

ಮುಖ್ಯ ಚುನಾವಣಾ ಆಯುಕ್ತರಿಗೆ ನ್ಯಾಯಾಂಗ ವಿನಾಯಿತಿ ಏಕೆ ಬೇಕು ಎಂಬುದಕ್ಕೆ ಉತ್ತರವಿಲ್ಲ. ಚುನಾವಣಾ ಆಯೋಗವನ್ನೇ ಕ್ಯಾಪ್ಚರ್ ಮಾಡಿದ್ದೇವೆ ಎಂದು ಅವರು ಹೇಳುತ್ತಿದ್ದಾರೆ,” ಎಂದು ಆರೋಪಿಸಿದರು.

ಫ್ರಾನ್ಸ್, ಅಲ್ಬೇನಿಯಾ ವಿಚಾರ:

ಫ್ರಾನ್ಸ್ ಮತ್ತು ಅಲ್ಬೇನಿಯಾದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ಬೆಲೆ ಏರಿಕೆ ಮತ್ತು ಶಿಕ್ಷಣದ ಪರವಾಗಿವೆ. ಆದರೆ ಇಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ಚುನಾವಣಾ ಆಯೋಗದ ವಿರುದ್ಧವಾಗಿವೆ. ಇವೆರಡರ ನಡುವೆ ಯಾವ ಸಂಬಂಧವೂ ಇಲ್ಲ,” ಎಂದು ಅವರು ಸ್ಪಷ್ಟಪಡಿಸಿದರು.