
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಅ.21:ದೇಶದ ಆಂತರಿಕ ಭದ್ರತೆ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಯಾವುದೇ ಪ್ರಕರಣದ ತನಿಖೆಯನ್ನು ಕೈಗೊಂಡಾಗ ನ್ಯಾಯಾಂಗಕ್ಕೆ ಪೊಲೀಸರಿಂದ ಕ್ವಾಂಟಿಟಿತಯ ನಿಕಾ ವರದಿ ಬೇಕಾಗಿಲ್ಲ, ಕ್ವಾಲಿಟಿಯ ತನಿಖಾ ವರದಿ ಬೇಕು ಎಂದು ಜಿಲ್ಲಾ ನ್ಯಾಯಾಧೀಶ ಸಿದ್ದಲಿಂಗ ಪ್ರಭು ಹೇಳಿದರು.
ಅವರು ಇಂದುದೇಶದ ಆಂತರಿಕ ಭದ್ರತೆ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಸಂದರ್ಭದಲ್ಲಿ ತಮ್ಮ ಪ್ರಾಣವನ್ನು ಅರ್ಪಿಸಿದ ಪೊಲೀಸ್ ಸಿಬ್ಬಂದಿಯ ತ್ಯಾಗ ಮತ್ತು ಸೇವೆಯನ್ನು ಸ್ಮರಿಸುವ ಹುತಾತ್ಮ ದಿನಾಚರಣೆ ಇಂದು ಬಳ್ಳಾರಿಯ ಜಿಲ್ಲಾ ಸಶಸ್ತ್ರ ಪೊಲೀಸ್ ಪಡೆ ಮೈದಾನದಲ್ಲಿ ನಡೆಯಿತು. ಅವರು ಹುತಾತ್ಮರ ಸ್ಮಾರಕಕ್ಕೆ ಪುಷ್ಪಗುಚ್ಚವಿರಿಸಿ ಗೌರವ ಸಲ್ಲಿಸಿ ಮಾತನಾಡುತ್ತಿದ್ದರು
ಪೊಲೀಸ್ ಇಲಾಖೆ ಮತ್ತು ನ್ಯಾಯಾಂಗ ಇಲಾಖೆ ಒಬ್ಬರಿಗೊಬ್ಬರು ಪೂರಕವಾಗಿ ನಡೆದರೆ. ಈ ದೇಶದ ಶಾಂತಿಯನ್ನು ಕಾಪಾಡುವುದು ಮತ್ತೆ ರೂಲ್ ಆಫ್ ಲಾ ನ ಎತ್ತಿಹಿಡಿಯಬಹುದು ಎಂದರು.
ಎಸ್ಪಿ ಸುಮನ್ ಡಿ.ಪೆನ್ನೇಕರ್ ಮಾತನಾಡಿ, ಚೀನಾ ಸೈನಿಕರ ದಾಳಿಗೆ 1959ರ ಅಕ್ಟೋಬರ್ 21ರಂದು ಲಡಾಖ್ನ ಹಾಟ್ ಸ್ಪ್ರಿಂಗ್ಸ್ ಪ್ರದೇಶದಲ್ಲಿ 10 ಮಂದಿ ಭಾರತೀಯ ಪೊಲೀಸ್ ಸಿಬ್ಬಂದಿ ಹುತಾತ್ಮರಾದರು.9 ಮಂದಿ ಜವಾನರನ್ನು ಸೆರೆಹಿಡಿದಿರು.
ಈ ಘಟನೆಯ ಸ್ಮರಣಾರ್ಥವಾಗಿ ಅಕ್ಟೋಬರ್ 21ರಂದು ಪೊಲೀಸ್ ಹುತಾತ್ಮ ದಿನವನ್ನು ಆಚರಿಸಲಾಗುತ್ತದೆ.
ಈ ವರ್ಷ ದೇಶದಲ್ಲಿ 154 ಜನ ರಾಜ್ಯದಲ್ಲಿ ಐದು ಜನ ಪೊಲೀಸ್ ಅಧಿಕಾರಿಗಳು ಹಾಗು ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಅದರಲ್ಲಿ ಕರ್ನಾಟಕದ ಐವರು ಸೇರಿದ್ದಾರೆ.
ಪೊಲೀಸರು ದಿನ ನಿತ್ಯ ಅನೇಕ ಸವಾಲುಗಳನ್ನು ಎದುರಿಸುವಂತಹ ಪರಿಸ್ಥಿತಿಗಳು ಬರುತ್ತಿವೆ. ಹೆಚ್ಚು ಸಂಘರ್ಷಗಳು ಆಗಿಂದಾಗ್ಗೆ ನಾವು ನೋಡ್ತಾ ಇದ್ದೇವೆ. ಹೆಚ್ಚು ಪ್ರೊಟೆಸ್ಟ್ಗಳನ್ನು ನೋಡ್ತಾ ಇದ್ದೇವೆ. ಕರ್ತವ್ಯದ ಅವಧಿಯಲ್ಲಿ ಹೆಚ್ಚು ಸಿಬ್ಬಂದಿಗಳು, ಅಧಿಕಾರಿಗಳು ತಮ್ಮ ಪ್ರಾಣತ್ಯಾಗವನ್ನು ಮಾಡ್ತಾ ಇದ್ದಾರೆ ಅವರನ್ನು ಈ ವೇಳೆ ಸ್ಮರಿಸುವುದಾಗಿ ಹೇಳಿದರು.
ಹಿರಿಯ ಸಿವಿಲ್ ನ್ಯಾಯಾಧೀಶ ರಾಜೇಶ್ ಹೊಸಮನಿ, ಎಸ್ಪಿ ಡಾ.ಸುಮನ್ ಡಿ.ಪನ್ನೇಕರ್, ಜಿಲ್ಲಾ ಪಂಚಾಯ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹಾರೀಸ್ ಸುಮೇರ್, ಎಡಿಸಿ ಮಹಮ್ಮದ್ ಝುಬೇರ್, ಹೆಚ್ಚುವರಿ ಎಸ್ಪಿ ನವೀನ್ ಕುಮಾರ್ ಎನ್. ನಗರ ಡಿವೈಎಸ್ಪಿ ಗೋವಿಂದರಾಜು, ಗ್ರಾಮೀಣ ಡಿವೈಎಸ್ಪಿ ಮಲತೇಶ್ ಕೂನಬೇವು, ಅಗ್ನಿ ಶಾಮಕ, ಅರಣ್ಯ ಇಲಾಖೆ, ನಿವೃತ್ತ ಪೊಲೀಸ್ ಅಧಿಕಾರಿಗಳು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ಎನ್.ವೀರಭದ್ರಗೌಡ ಮೊದಲಾದವರು ಹುತಾತ್ಮರ ಸ್ಮಾರಕಕ್ಕೆ ಹೂ ಗುಚ್ಚವಿರಿಸಿ ಗೌರವ ನಮನ ಸಲ್ಲಿಸಿದರು. ಗಾಳಿಯಲ್ಲಿ ಮೂರು ಸುತ್ತು ಕುಶಾಲ ತೋಪು ಹಾರಿಸಿ ಮಾನಾಚರಣೆ ಸಲ್ಲಿಸಲಾಯ್ತು.
g3























