
ಕಲಬುರಗಿ,ಸೆ.10: ನಗರದ ಅಡ್ವೋಕೇಟ್ ಕಾಲನಿಯ ನೂತನ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ನಾಳೆ ( ಸೆ.
11, ಶುಕ್ರವಾರ ) ಸಂಜೆ 6.30 ಗಂಟೆಗೆ ಡೆಸ್ಕ್ ಇಂಡಿಯಾ ಸಂಸ್ಥೆಯ ನಿರ್ದೇಶಕ ಡಾ. ಪ್ರಭಾಕರ ಜೋಶಿ
ಅವರಿಂದ “ರಾಷ್ಟ್ರೀಯ ರಂಗಭೂಮಿಯಲ್ಲಿ ಧರ್ಮದ ಪಾತ್ರ ” ವಿಷಯ ಕುರಿತ ಉಪನ್ಯಾಸ ಏರ್ಪಡಿಸಲಾಗಿದೆ. ಈ ಕಾರ್ಯಕ್ರಮದ ಪ್ರಯೋಜನವನ್ನು ಕಲಬುರಗಿ ನಿವಾಸಿಗಳು ಪಡೆದು ಕೊಳ್ಳಬೇಕೆಂದು ಶ್ರೀ ಮಹಾಲಕ್ಷ್ಮಿ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಮಂಜುನಾಥ ಜೇವರ್ಗಿ,ಕಾರ್ಯದರ್ಶಿ ಹಾಗೂ ಸಮಿತಿಯ ಸದಸ್ಯರು ಮನವಿ ಮಾಡಿದ್ದಾರೆ.































