Home ಜಿಲ್ಲೆ ಕಲಬುರಗಿ ನಿವೃತ್ತ ಅಧೀಕ್ಷಕ ಅಭಿಯಂತರ ಮಾಣಿಕ್ ಕನಕಟ್ಟೆ ಮನೆ ಮೇಲೆ ಲೋಕಾ ದಾಳಿ

ನಿವೃತ್ತ ಅಧೀಕ್ಷಕ ಅಭಿಯಂತರ ಮಾಣಿಕ್ ಕನಕಟ್ಟೆ ಮನೆ ಮೇಲೆ ಲೋಕಾ ದಾಳಿ

ಕಲಬುರಗಿ,ಜೂ.16-ಆದಾಯ ಮೀರಿದ ಆಸ್ತಿ ಗಳಿಕೆಗೆ ಸಂಬಂಧಿಸಿದಂತೆ ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆಯ ಕಲಬುರಗಿ ವೃತ್ತದ ನಿವೃತ್ತ ಅಧೀಕ್ಷಕ ಅಭಿಯಂತರ ಮಾಣಿಕ್ ಕನಕಟ್ಟೆ ಅವರ ಮನೆಗಳು, ಕಾಂಪ್ಲೆಕ್ಸ್‍ಗಳು ಹಾಗೂ ತೋಟದ ಮನೆಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ ಬೆಳ್ಳಂಬೆಳಿಗ್ಗೆ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ.
ಕಲಬುರಗಿ ಲೋಕಾಯುಕ್ತ ಎಸ್‍ಪಿ ಸಿ.ಸಿದ್ಧರಾಜು ಮಾರ್ಗದರ್ಶನದಲ್ಲಿ ಅಧಿಕಾರಿಗಳ ಐದು ತಂಡಗಳು ದಾಳಿ ನಡೆಸಿ, ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿವೆ. ಕಲಬುರಗಿಯ ಗೋದುತಾಯಿ ನಗರದ ಎರಡು ಮನೆಗಳು, ಬೀದರ್ ಜಿಲ್ಲೆಯ ಹಳ್ಳಿಖೇಡ (ಬಿ) ಗ್ರಾಮದ ಮನೆ, ತೋಟಗಳು ಹಾಗೂ ಹುಮನಾಬಾದ್‍ನಲ್ಲಿರುವ ಎರಡು ಕಾಂಪ್ಲೆಕ್ಸ್‍ಗಳ ಮೇಲೆ ದಾಳಿ ನಡೆದಿದೆ ಎಂದು ಮೂಲಗಳು ತಿಳಿಸಿವೆ.