
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜೂ.16:ಲೋಕಸಭಾ ಸದಸ್ಯ ಈ. ತುಕಾರಾಂ ವಿರುದ್ಧ ಜಿಲ್ಲೆಯ ಬಿಜೆಪಿ ನಾಯಕರು ಸಿಡಿದೆದ್ದು ನಗರದ ಗಡಗಿ ಚೆನ್ನಪ್ಪ ವೃತ್ತದಲ್ಲಿ ಇಂದು ಮಾನವ ಸರಪಳಿ ರಚಿಸಿ ತುಕಾರಾಂ ಅವರ ಪ್ರತಿಕೃತಿ ಧಹಿಸಿ ಅಕ್ರೋಶ ವ್ಯಕ್ತಪಡಿಸದರು.
ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ಕಳಪೆ ಆಗಿದೆಂದು ಡಣಾಪುರ ಬಳಿ ವ್ಯಕ್ತಿಯೋರ್ವ ವೀಡಿಯೋ ಮಾಡಿ ಪ್ರಶ್ನೆ ಮಾಡಿದ್ದಕ್ಕಾಗಿ ಆತನಿಗೆ ಅಶ್ಲೀಲ ಪದ ಬಳಕೆ ಮಾಡಿ ಬೈದೊರುವುದನ್ನು ಖಂಡಿಸಿ ಈ ಪ್ರತಿಭಟನೆ ನಡೆಸಲಾಯ್ತು.
ಕಳಪೆ ಕಾಮಗಾರಿ ಬಗ್ಗೆ ಪ್ರಶ್ನೆ ಮಾಡಿ ವೀಡಿಯೋ ಮಾಡಿದ್ದ ಯುವಕನ ಬಗ್ಗೆ ಕಳ್ಳಮುಂಡೆ ಮಕ್ಕಳು ಏನೇನೂ ಮಾಡ್ತಾರೆ, ಎಚ್ಚರಿಕೆಯಿಂದ ಕೆಲಸ ಮಾಡಬೇಕು ಎಂದಿದ್ದರು. ಅಲ್ಲದೇ ವಿಡಿಯೋ ಮಾಡಿದ ಯುವಕನನ್ನು ಕರೆಸಿ ಬೈದಿದ್ದರಂತೆ ತುಕಾರಾಂ ಅವರು.
ಅದಕ್ಕಾಗಿ ತುಕಾರಾಂ ವಿರುದ್ದ ಘೋಷಣೆಕೂಗಿ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮತ್ತು ಅವಾಚ್ಯ ಶಬ್ದ ಬಳಸಿದ ಅವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಆಹ್ರಹೊಸಲಾಯ್ತು.
ರಾಜ್ಯ ಬಿಜೆಪಿ ಕಾರ್ಯದರ್ಶಿ ಕೆ.ಎಸ್.ದಿವಾಕರ್,ಜಿಲ್ಲಾ ಅಧ್ಯಕ್ಷ ಅನಿಲ್ ನಾಯ್ಡು, ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಎಸ್. ಗುರುಲಿಂಗನಗೌಡ, ಡಾ.ಅರುಣಾ ಕಾಮಿನೇನಿ ಮೊದಲಾದವರು ಪಾಲ್ಗೊಂಡಿದ್ದರು.


























