Home ಮುಖಪುಟ ಸುದ್ದಿ ಹೋರಾಟಕ್ಕೆ ಮಣಿದು ಉದ್ಯಾನವನ ತಿದ್ದುಪಡಿ ವಾಪಸ್

ಹೋರಾಟಕ್ಕೆ ಮಣಿದು ಉದ್ಯಾನವನ ತಿದ್ದುಪಡಿ ವಾಪಸ್

ಬೆಂಗಳೂರು, ಸೆ. ೪- ಬೆಂಗಳೂರಿನ ಜನರ ವಿರೋಧದ ಕಾರಣಕ್ಕಾಗಿ ಅದರಲ್ಲೂ ಹಿರಿಯ ನಾಗರಿಕರು ದೊಡ್ಡ ಪ್ರಮಾಣದ ಹೋರಾಟ ಮಾಡಿದ ಪರಿಣಾಮವಾಗಿ ಸರ್ಕಾರ ತಾತ್ಕಾಲಿಕವಾಗಿ ಉದ್ಯಾನವನ ತಿದ್ದುಪಡಿ ಮಸೂದೆಯನ್ನು ವಾಪಸ್ ತೆಗೆದುಕೊಂಡಿದ್ದಾರೆ ಎಂದು ಕೇಂದ್ರ ಸಚಿವೆ ಶೋಭ ಕರಂದ್ಲಾಜೆ ಹೇಳಿದರು.


ಬೆಂಗಳೂರಿನಲ್ಲಿಂದು ಸುದ್ಧಿಗಾರರೊಂದಿಗೆ ಮಾತನಾಡಿದ ಅವರು ಸಾರ್ವಜನಿಕರ ಅಭಿಪ್ರಾಯ ಕೇಳಿ ನಂತರ ಸದನದಲ್ಲಿ ಇದನ್ನ ಮತ್ತೆ ವಾಪಸ್ ತೆಗೆದುಕೊಂಡು ಮಂಡಿಸುತ್ತೇವೆ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ. ಇನ್ನೊಬ್ಬರು ಸೂಪರ್ ಸಿಎಂ ಪ್ರಿಯಾಂಕ್ ಖರ್ಗೆ ಇದರಲ್ಲಿ ಫುಲ್ ಸ್ಟಾಪ್ ಕೂಡ ಚೇಂಜ್ ಮಾಡದೇ ವಾಪಸ್ ತರ್ತೀವಿ ಅಂತ ಹೇಳಿದ್ದಾರೆ. ಇವರಲ್ಲಿ ದ್ವಂದ್ವವಿದೆ ಎಂದು ಲೇವಡಿ ಮಾಡಿದರು. ಈಗಿರುವ ಪ್ರಕಾರದ ಸುರಂಗ ಮಾರ್ಗ ರಸ್ತೆ ಬೇಡ ಆದರೆ ಬೆಂಗಳೂರಿನ ಟ್ರಾಫಿಕ್ ಸ್ಟಡಿ ಆಗ್ಬೇಕು. ಮೆಟ್ರೋ, ಟನಲ್ ಒಟ್ಟಿಗೆ ಹೋದ್ರೆ ಸುರಕ್ಷತೆ ಎಲ್ಲಿದೆ ಎಂದು ಪ್ರಶ್ನಿಸಿದರು.


ಟನಲ್ ರೋಡ್ ಬಗ್ಗೆ ಯಾವುದೇ ಅಧ್ಯಯನ ನಡೆದಿಲ್ಲ. ಬೆಂಗಳೂರಿನ ಟನಲ್ ರೋಡ್ ನ ಮೊದಲ ಹಂತದ ಅಂದಾಜಿನ ಪ್ಯಾಕೇಜ್ ೫೪೮೪ ಕೋಟಿ ರೂ. ಅದನ್ನು ೧೦೭೩೪ ಕೋಟಿ ಯನ್ನು ಹೆಚ್ಚು ಮಾಡಿದ್ದಾರೆ. ಎರಡನೇ ಪ್ಯಾಕೇಜ್ ೧೧,೨೬೩ ಪ್ಯಾಕೇಜ್ ಒಟ್ಟು ಎರಡು ಸೇರಿ ೨೨,೫೦ ಲಕ್ಷ ಟೆಂಡರ್ ರೆಡಿ ಆಗಿದೆ.


ಈ ೯೭% ಹೇಗೆ ಜಾಸ್ತಿ ಆಯ್ತು ಟೆಂಡರ್ ಪ್ರೀಮಿಯಮ್ ನ ೫% ಕ್ಕಿಂತ ಜಾಸ್ತಿ ಆಗ್ಬಾರ್ದು ಅಂತ ಸರ್ಕಾರ ಸುತ್ತೋಲೆ ಹೊರಡಿಸಿತ್ತು. ಇದರಲ್ಲಿ ೧೦ ಸಾವಿರ ಕೋಟಿ ಲೂಟಿ ಹೊಡೆಯಲಿದ್ದಾರೆ ಎಂದು ಆರೋಪಿಸಿದರು. ೧೦ ಸಾವಿರ ಕೋಟಿಯನ್ನ ರಾಹುಲ್ ಗಾಂಧಿ ಬಿಡ್ಡಿಂಗ್ ಕರೆದಿರಬೇಕು.


ಕರ್ನಾಟಕದ ಹಣವನ್ನು ಕಾಂಗ್ರೆಸ್ ಲೂಟಿ ಮಾಡಲು ಹೊರಟಿದೆ. ಫೀಸಿಬಿಲಿಟಿ ಸರ್ವೇಯ ರಿಪೋರ್ಟ್ ಕೊಡಿ
ಟೆಕ್ನಿಕಲ್ ರಿಪೋರ್ಟ್,ಟ್ರಾಫಿಕ್ ಕಡಿಮೆ ಆಗುವ ರಿಪೋರ್ಟ್ ಎಲ್ಲಿದೆ. ಯಾವುದೇ ರಿಪೋರ್ಟ್ ಕೂಡ ಇವರ ಬಳಿ ಇಲ್ಲ ಎಂದು ವಾಗ್ದಾಳಿ ನಡೆಸಿದರು.


ಹೈಕೋರ್ಟ್ ಟೆಕ್ನಿಕಲ್ ರಿಪೋರ್ಟ್ ಕೊಡಿ ಅಂತ ಕೇಳಿದೆ. ಯಾವುದೇ ಪೂರ್ವ ತಯಾರಿ ಇಲ್ಲದೆ, ವೈಜ್ಞಾನಿಕ ವರದಿ ಇಲ್ಲದೆ ತರಾತುರಿಯಲ್ಲಿ ಟೆಂಡರ್ ಕೊಟ್ಟಿದ್ದಾರೆ ಎಂದು ದೂರಿದರು. ನಮ್ಮ ಪಾರ್ಕ್, ಕೆರೆಗಳನ್ನು ತೆಗೆದುಕೊಂಡು ನೀವು ರಿಯಲ್ ಎಸ್ಟೇಟ್ ಮಾಡುವುದು ಬೇಕಾಗಿಲ್ಲ. ಇನ್ನು ನೀವು ಇರೋದು ಒಂದು ವರ್ಷ ಅಷ್ಟರಲ್ಲಿ ಕರ್ನಾಟಕವನ್ನು ಹಾಳು ಮಾಡ್ಬೇಡಿ.


ಪ್ರತಿ ತಿಂಗಳು ನೀರಿನ ಬಿಲ್,ಕರೆಂಟ್ ಬಿಲ್,ಕಸದ ಬಿಲ್ ಎಲ್ಲವೂ ಜಾಸ್ತಿ ಆಗ್ತಿದೆ. ದುಡ್ಡಿನ ಭೂತ ಹಿಡಿದಿದೆ ಎಂದು ಟೀಕಿಸಿದರು. ನಿಮಗೆ ಬಿಜೆಪಿ ಯವರು ನಮ್ಮ ಅಭಿವೃದ್ಧಿ ಸಹಿಸಲ್ಲ ಎಂಬ ಡಿಕೆ ಶಿವಕುಮಾರ್ ಹೇಳಿಕೆ ಪ್ರತಿಕ್ರಿಯಿಸಿದ ಅವರು
ನಾವು ಅಭಿವೃದ್ಧಿ ವಿರೋಧಿಗಳಲ್ಲ. ಆದರೆ ಕಾಂಗ್ರೆಸ್ ದುಡ್ಡು ಮಾಡುವ ಅಭಿವೃದ್ಧಿ ನಾವು ಸಹಿಸಲ್ಲ.


ಈ ದುಡ್ಡು ಯಾರಿಗೆ ತಲುಪುತ್ತೆ ನಿಮ್ಗೆ ಉಳಿದಿರೋ ಒಂದು ವರ್ಷದಲ್ಲಿ ನೀವು ಬೆಂಗಳೂರಿನ ಹಾಳು ಮಾಡಿ ಹೋಗಬೇಡಿ. ಇವತ್ತು ಕೃಷ್ಣ ಜನ್ಮಾಷ್ಟಮಿ ಆ ಭಗವಂತನಿಗೆ ಪ್ರಾರ್ಥನೆ ಮಾಡ್ತಿವಿ ಎಂದರು.

ರಾಜ್ಯ ಸರಕಾರ ಕೆರೆ ಸಂರಕ್ಷಣಾ ತಿದ್ದುಪಡಿ ವಿಧೇಯಕಕ್ಕು ವಿರೋಧ ವ್ಯಕ್ತಪಡಿಸಿದ ಸಚಿವೆ ಶೋಭಾ ಕರಂದ್ಲಾಜೆ ಅವರು
ಈಗಾಗಲೇ ರಿಯಲ್ ಎಸ್ಟೇಟ್ ಗೆ ಕೆರೆಗಳನ್ನ ತಿಂದಿದ್ದಾರೆ. ಎಲ್ಲಾ ಕೆರೆಗಳನ್ನ ಲೇಔಟ್ ಮಾಡಿ ಕಾಂಪ್ಲೆಕ್ಸ್ ಮಾಡಿದ್ದಾರೆ


ಹೀಗಾಗಿ ಮಳೆ ಬಂದ್ರೆ ಬೆಂಗಳೂರು ಕೆರೆಯಂತಾಗುತ್ತದೆ. ರಾಜ್ಯದಲ್ಲಿ ಯಾವುದು ಕೃಷಿಗೆ ನೀರು ಕೊಡ್ತಿದೆ,ಕುಡಿಯುವ ನೀರು ಕೊಡ್ತಿದ್ಯೋ ಎಲ್ಲದಕ್ಕೂ ರಿಯಲ್ ಎಸ್ಟೇಟ್ ಮಾಫಿಯಾ ಕೈ ಹಾಕಲಿದೆ. ಹೆಬ್ಬಾಳ ಕೆರೆಯಲ್ಲಿ ಯಾರಿಗೂ ಹೇಳದೇ ಕಾಮಗಾರಿ ಶುರು ಮಾಡಿದ್ದಾರೆ ಎಂದು ದೂರಿದರು.