ನಗರದ ಕಮಲಾ ನಗರದಲ್ಲಿರುವ ಗೌತಮ್ ಪಬ್ಲಿಕ್ ಶಾಲೆಯಲ್ಲಿ ಇಂದು ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಯಿತು. ಮಕ್ಕಳು ಶ್ರೀಕೃಷ್ಣ -ರಾಧೆ ವೇಷತೊಟ್ಟು ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಶಾಲೆಯ ಸಂಸ್ಥಾಪಕ ಅಧ್ಯಕ್ಷ ಡಾ. ಎ.ಟಿ.ಎಸ್. ಗಿರಿ, ಪ್ರಾಂಶುಪಾಲರಾದ ಲೀಲಾವತಿ ಹಾಗೂ ಶಾಲೆಯ ಶಿಕ್ಷಕಿಯರು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.