
ಹುಮನಾಬಾದ: ಕೈಗಾರಿಕೆ ಗಳಿಂದಾಗುತ್ತಿರುವ ಪರಿಸರ ಹಾನಿ ಹಾಗೂ ಜನ-ಜಾನುವಾರುಗಳ ಮೇಲಿನ ದುಷ್ಪರಿಣಾಮಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದ್ದು, ಈಗಾಗಲೇ 4 ಕಾರ್ಖಾನೆಗಳನ್ನು ಮುಚ್ಚಲು ಆದೇಶಿಸಲಾಗಿದೆ. ಮುಂದಿನ 15 ದಿನಗಳಲ್ಲಿ ಈ ಭಾಗದ ಜನರಿಗೆ ಶಾಶ್ವತ ಪರಿಹಾರ ಕಲ್ಪಿಸುವ ಪ್ರಾಮಾಣಿಕ ಕೆಲಸ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಭರವಸೆ ನೀಡಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಹಾಗೂ ಜಿಲ್ಲಾಧಿಕಾರಿ ಆಗಮಿಸಿ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕೆಂದು ಪ್ರತಿಭಟನಕಾರರು ಪಟ್ಟು ಹಿಡಿದು ಹೋರಾಟ ಮುಂದುವರಿಸಿದರು.
ಕೈಗಾರಿಕೆಗಳಿಂದಬಿಡುಗಡೆಯಾಗುತ್ತಿರುವ ಕಲುಷಿತ ತ್ಯಾಜ್ಯವು ಗುರುಗಂಗಾ ಹಾಗೂ ಮಾಂಜ್ರಾ ನದಿಗಳನ್ನು ಸೇರಿ ನೀರು ಕಪ್ಪು ಬಣ್ಣಕ್ಕೆ ತಿರುಗಿ ದುರ್ವಾಸನೆ ಬೀರುತ್ತಿದೆ. ಇದರಿಂದ ಮಾಣಿಕನಗರ, ಗಡವಂತಿ, ಹುಮನಾಬಾದ್, ಮೊಳಕೇರಾ ಸೇರಿದಂತೆ ಹಲವು ಗ್ರಾಮಗಳ ಕುಡಿಯುವ ನೀರು ವಿಷಪೂರಿತಗೊಂಡು ಜನರ ಆರೋಗ್ಯಕ್ಕೆ ಗಂಭೀರ ಬೆದರಿಕೆ ಎದುರಾಗಿದ್ದು, ಸರ್ಕಾರದ ಗಮನಕ್ಕೆ ಬಂದಿದೆ. ಮಾಲಿನ್ಯ ನಿಯಂತ್ರಣ ಮಂಡಳಿ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, 15 ದಿನಗಳ ಒಳಗಾಗಿ ಸಮಗ್ರ ವರದಿ ತರಿಸಿ ತಪ್ಪಿತಸ್ಥ ಕಾರ್ಖಾನೆ ಗಳನ್ನು ಬಂದ್ ಮಾಡಿಸುವ ಭರವಸೆ ನೀಡಿದರು.
ಅದಾಗ್ಯೂ ಕಾರ್ಖಾನೆಗಳು ಜನರಿಗೆ ಹಾಗೂಸರ್ಕಾರಕ್ಕೆಮೋಸಮಾಡಿ, ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ, ವಾಯು, ಜಲ ಹಾಗೂ ಪರಿಸರದ ಕಾಯ್ದೆಗಳನ್ನು ಉಲ್ಲಂಘನೆ ಮಾಡಿ ಕೈಗಾರಿಕೆಗಳನ್ನು ಪ್ರಾರಂಭಿಸಿದ್ದೆಯಾದಲ್ಲಿ ಅಂಥವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಿ ಜೈಲಿಗಟ್ಟು ವಂತೆ ಸ್ಥಳದಲ್ಲಿದ್ದ ಎಸ್‍ಪಿ ಪ್ರದೀಪ ಗುಂಟಿ ಅವರಿಗೆ ಸಚಿವ ಈಶ್ವರ ಖಂಡ್ರೆ ಸೂಚನೆ ನೀಡಿದರು.
ವಿವಿಧ ಕೈಗಾರಿಕಾ ಘಟಕಗಳಿಂದ
ಉಂಟಾಗುತ್ತಿರುವ ತೀವ್ರ ಪರಿಸರ ಹಾನಿ ಹಾಗೂ ಸಾರ್ವಜನಿಕರ ಆರೋಗ್ಯದ ಮೇಲಾಗುತ್ತಿರುವ ದುಷ್ಪರಿಣಾಮ ಖಂಡಿಸಿ ಮಂಗಳವಾರ ವಿವಿಧ ಗ್ರಾಮಸ್ಥರು ಬೀದರ-ಕಲಬುರ್ಗಿ ಮುಖ್ಯ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಮಾಣಿಕನಗರ, ಗಡವಂತಿ, ಮೋಳಕೇರಾ, ಬಸವಂತಪುರ ಹಾಗೂ ಹುಮನಾಬಾದ್ ಸುತ್ತಮುತ್ತಲಿನ ನೂರಾರು ಸಾರ್ವಜನಿಕರು, ಮಹಿಳೆಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಆನಂದರಾಜ ಪ್ರಭು, ಗುಂಡುರೆಡ್ಡಿ ಕಮಲಾಪೂರೆ, ಗಜೇಂದ್ರ ಕನಕಟ್ಟಕರ್, ಓಂಕಾರ ತುಂಬಾ, ಚೇತನರಾಜ, ಶಿವಶಂಕರ ತರನಳ್ಳಿ, ಯಾಸಿನ್, ನವೀನ್ ಬತಲಿ, ವಿವಿಧ ಸಂಘಟನೆಗಳ ಮುಖಂಡರು ಕಾರ್ಖಾನೆಗಳ ಮಾಲಿನ್ಯದ ವಿರುದ್ದ ಕಿಡಿ ಕಾರಿದರು. ಮುಂಜಾನೆ 10:30ಕ್ಕೆ ಆರಂಭಗೊಂಡ ರಸ್ತೆತಡೆ ಪ್ರತಿಭಟನೆ ಸಂಜೆ 4ರ ವರೆಗೆ ನಡೆಯಿತು. ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ಜಿಲ್ಲಾಧಿಕಾರಿ ಶಿಲ್ಪಾಶರ್ಮಾ, ಎಸ್ಪಿ ಪ್ರದೀಪ ಭೇಟಿ ನೀಡಿದರು. ಸಚಿವರ ಭರವಸೆ ಹಿನ್ನೆಲೆ ಪ್ರತಿಭಟನೆ ಕೈ ಬಿಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಪಂ ಸಿಇಓ ಡಾ.ಗಿರೀಶ ಬದೋಲೆ, ಎಸ್ಪಿ ಪ್ರದೀಪ ಗುಂಟಿ, ಎಸಿ ಪ್ರಕಾಶ ಕುದ್ರಿ, ತಹಸೀಲ್ದಾರ್ ಜಗದೀಶ ಚೌರ, ಡಿವೈಎಪಿ ಮಡೋಳಪ್ಪ, ತಾಪಂ ಇಓ ದೀಪಿಕಾ ನಾಯ್ಕರ್ ಸೇರಿದಂತೆ ವಿವಿಧ ಇಲಾಖೆಗಳ ವಿವಿಧ ಹಂತದ ಅಧಿಕಾರಿಗಳು ಇದ್ದರು.
ಕ್ಷೇತ್ರದ ಜನತೆಯ ಆರೋಗ್ಯ ದೃಷ್ಟಿಯಿಂದ ಸರಕಾರದ ವಿರುದ್ಧವೇ ಹೋರಾಟ ಮಾಡಬೇಕಾಗಿ ಬಂದರೆ ಹಿಂದೇಟು ಹಾಕುವುದಿಲ್ಲ, ಇಲ್ಲಿನ ಸಮಸ್ಯೆಯ ಬಗ್ಗೆ ಸರಕಾರಕ್ಕೆ ಮಾಹಿತಿ ನೀಡಿದ ಪರಿಣಾಮವಾಗಿ ನಾಲ್ಕು ಕಾರ್ಖಾನೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದ್ದು, ತಪ್ಪು ಮಾಡಿರುವ ಇತರೆ ಕಾರ್ಖಾನೆಗಳ ವಿರುದ್ಧ ಕ್ರಮವಾಗಲಿದೆ ಎಂದರು.
ಸಚಿವ ರಾಜಶೇಖರ ಪಾಟೀಲ್




























