
ಟಿಎಂಸಿ ಬಂಡಾಯ ಸಂಸದರ ಆಹ್ವಾನಕ್ಕೆ ಕಿಡಿ
ನವದೆಹಲಿ, ಜು. ೧೯- ಸಂಸತ್ತಿನ ಮುಂಗಾರು ಅಧಿವೇಶನಕ್ಕೂ ಮುನ್ನ ಕೇಂದ್ರ ಸರ್ಕಾರ ಇಂದು ಕರೆದಿದ್ದ ಪ್ರಮುಖ ಸರ್ವಪಕ್ಷ ಸಭೆಯಿಂದ ವಿರೋಧ ಪಕ್ಷಗಳು ಒಗ್ಗಟ್ಟಾಗಿ ಹೊರನಡೆದಿವೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಶಿವಸೇನಾ (ಯುಬಿಟಿ) ಪಕ್ಷದ ಬಂಡಾಯ ಸಂಸದರನ್ನು ಸಭೆಗೆ ಆಹ್ವಾನಿಸಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿ ವಿಪಕ್ಷಗಳು ಈ ನಿರ್ಧಾರ ಕೈಗೊಂಡಿವೆ.
ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಇತ್ತೀಚೆಗೆ ಶಿವಸೇನಾ (ಯುಬಿಟಿ) ಪಕ್ಷದ ಆರು ಬಂಡಾಯ ಸಂಸದರನ್ನು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯೊಂದಿಗೆ ವಿಲೀನಗೊಳಿಸಲು ಅನುಮೋದನೆ ನೀಡಿದ್ದಾರೆ.ಇದರಿಂದಾಗಿ ಟಿಎಂಸಿ ಪಕ್ಷದಿಂದ ಬಂಡಾಯವೆದ್ದು ತೀರಾ ಅಲ್ಪ ಪರಿಚಿತ ’ಎನ್‌ಸಿಪಿಐ’ (ಓಅPI) ಪಕ್ಷ ಸೇರಿರುವ ೨೦ ಸಂಸದರಿಗೆ ಸಂಸತ್ತಿನಲ್ಲಿ ಪ್ರತ್ಯೇಕ ಆಸನದ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಬಂಡಾಯ ಸಂಸದರನ್ನೂ ಇಂದಿನ ಸರ್ವಪಕ್ಷ ಸಭೆಗೆ ಆಹ್ವಾನಿಸಿದ್ದು ವಿರೋಧ ಪಕ್ಷಗಳ ಕೆಂಗಣ್ಣಿಗೆ ಗುರಿಯಾಯಿತು.
ಕಾಂಗ್ರೆಸ್ ಸಂಸದ ಪ್ರಮೋದ್ ತಿವಾರಿ ಮಾತನಾಡಿ, “ಸ್ಪೀಕರ್ ಅವರ ಈ ಏಕಪಕ್ಷೀಯ ನಿರ್ಧಾರವನ್ನು ಪ್ರತಿಭಟಿಸಲು ಎಲ್ಲಾ ವಿರೋಧ ಪಕ್ಷಗಳು ಒಟ್ಟಾಗಿ ಸಭೆಯನ್ನು ಬಹಿಷ್ಕರಿಸಲು ನಿರ್ಧರಿಸಿದವು,” ಎಂದು ತಿಳಿಸಿದ್ದಾರೆ.ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರು ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಈ ಕೆಳಗಿನ ಪ್ರಮುಖ ಅಂಶಗಳನ್ನು ಪ್ರಸ್ತಾಪಿಸಿದ್ದಾರೆ:
ಬಂಡಾಯ ಸಂಸದರು ಸೇರಿರುವ ’ಎನ್‌ಸಿಪಿಐ’ ಇನ್ನೂ ಅಧಿಕೃತವಾಗಿ ಗುರುತಿಸಲ್ಪಟ್ಟ ಪಕ್ಷವಲ್ಲ. ಲೋಕಸಭೆಯ ಟೇಬಲ್ ಆಫೀಸ್ ಪಟ್ಟಿಯ ಪ್ರಕಾರ ಇಂದಿಗೂ ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್ ೨೮ ಸದಸ್ಯರ ಬಲವನ್ನು ಹೊಂದಿದೆ. ಈ ೨೦ ಬಂಡಾಯ ಸಂಸದರ ವಿಲೀನಕ್ಕೆ ಸ್ಪೀಕರ್ ಇನ್ನೂ ಯಾವುದೇ ಅಧಿಕೃತ ಅನುಮೋದನೆ ನೀಡಿಲ್ಲ. ಅಲ್ಲದೆ, ಅವರ ವಿರುದ್ಧದ ೨೦ ಅನರ್ಹತೆ ಅರ್ಜಿಗಳು ಇನ್ನೂ ಬಾಕಿ ಇವೆ.
ಸಂವಿಧಾನದ ೯೧ನೇ ತಿದ್ದುಪಡಿಯ ನಂತರ ಸಂಸತ್ತಿನಲ್ಲಿ ಇಂತಹ ಪ್ರತ್ಯೇಕ ಬಣ ರಚಿಸಲು ಯಾವುದೇ ಅವಕಾಶವಿಲ್ಲ. ಹೀಗಿರುವಾಗ ಸಂಸದೀಯ ವ್ಯವಹಾರಗಳ ಸಚಿವರು ಯಾವ ಆಧಾರದ ಮೇಲೆ ಈ ಬಂಡಾಯ ಸಂಸದರನ್ನು ಸಭೆಗೆ ಆಹ್ವಾನಿಸಿದ್ದಾರೆ ಎಂದು ಅವರು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್, ಸಮಾಜವಾದಿ ಪಕ್ಷ, ಡಿಎಂಕೆ, ಜೆಎಂಎಂ, ಆಮ್ ಆದ್ಮಿ ಪಕ್ಷ, ನ್ಯಾಷನಲ್ ಕಾನ್ಫರೆನ್ಸ್, ಎಡಪಕ್ಷಗಳು ಮತ್ತು ಶಿವಸೇನಾ (ಯುಬಿಟಿ) ಸೇರಿದಂತೆ ಇಡೀ ವಿರೋಧ ಪಕ್ಷಗಳ ಒಕ್ಕೂಟವು ಈ ಅಪ್ರಜಾಪ್ರ ಕ್ರಮದ ವಿರುದ್ಧ ಪ್ರತಿಭಟಿಸಿ ಸಭೆಯಿಂದ ಹೊರನಡೆದಿದೆ,” ಎಂದು ಮಹುವಾ ಮೊಯಿತ್ರಾ ಸ್ಪಷ್ಟಪಡಿಸಿದ್ದಾರೆ.
ಮುಂಗಾರು ಅಧಿವೇಶನ ಆರಂಭಕ್ಕೂ ಮುನ್ನವೇ ಸರ್ಕಾರ ಮತ್ತು ವಿರೋಧ ಪಕ್ಷಗಳ ನಡುವಿನ ಈ ಸಂಘರ್ಷ, ಮುಂಬರುವ ದಿನಗಳಲ್ಲಿ ಸಂಸತ್ತಿನ ಕಲಾಪಗಳು ತೀವ್ರ ಗದ್ದಲಕ್ಕೆ ಕಾರಣವಾಗಬಹುದು ಎಂಬುದರ ಮುನ್ಸೂಚನೆ ನೀಡಿದೆ.
ನಾಳೆಯಿಂದ ಸಂಸತ್ ಅಧಿವೇಶನ
ನಾಳೆಯಿಂದ ಪ್ರಾರಂಭವಾಗಲಿರುವ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ರಾಮಮಂದಿರ ದೇಣಿಗೆ ಹಣ ಲೂಟಿ, ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಕೇಂದ್ರ ಸಚಿವ ಧಮೇಂದ್ರ ಪ್ರಸಾನ್ ರಾಜೀನಾಮೆಗೆ ಆಗ್ರಹಿಸಿ ಅನಿರ್ದಿಷ್ಟಾವದಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಹೋರಾಟಗಾರ ಸೋನಂ ವಾಂಗ್‌ಚುಕ್ ಅವರನ್ನು ಬಲವಂತವಾಗಿ ತೆರವು ಗೊಳಿಸಿರುವುದು ಸೇರಿದಂತೆ ಇನ್ನಿತರ ವಿಷಯಗಳನ್ನು ಮುಂದಿಟ್ಟುಕೊಂಡು ಎನ್‌ಡಿಎ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ವಿಪಕ್ಷಗಳು ಸಜ್ಜಾಗಿವೆ.
ಅಯೋಧ್ಯೆಯ ರಾಮಮಂದಿರ ನಿರ್ಮಾಣಕ್ಕಾಗಿ ಸಂಗ್ರಹಿಸಲಾದ ದೇಣಿಗೆ ಹಣ ಲೂಟಿ ಮತ್ತು ಅವ್ಯವಸ್ಥೆ ನಡೆದಿದೆ ಎಂದು ಆರೋಪಿಸಿ ಸಭೆಯಲ್ಲಿ ಗದ್ದಲ ಸೃಷ್ಟಿಸಲು ವಿರೋಧ ಪಕ್ಷಗಳು ನಿರ್ಧರಿಸಿವೆ. ಈ ವಿಷಯದ ಕುರಿತು ಸಂಸತ್ತಿನ ಕಲಾಪಗಳಿಗೆ ಅಡ್ಡಿಪಡಿಸುವುದಾಗಿ ಸಮಾಜವಾದಿ ಪಕ್ಷ ಈಗಾಗಲೇ ಎಚ್ಚರಿಕೆ ನೀಡಿದೆ.
ಮುಂಗಾರು ಅಧಿವೇಶನದ ಪ್ರಮುಖ ವಿಧೇಯಕಗಳು ಜುಲೈ ೨೦ ರಿಂದ ಆಗಸ್ಟ್ ೧೩ ರವರೆಗೆ ನಡೆಯಲಿರುವ ಈ ಅಧಿವೇಶನದಲ್ಲಿ ಮಂಡಿಸಲು ಮತ್ತು ಅಂಗೀಕರಿಸಲು ಕೇಂದ್ರ ಸರ್ಕಾರವು ಹಲವು ಪ್ರಮುಖ ವಿಧೇಯಕಗಳನ್ನು ಪಟ್ಟಿ ಮಾಡಿದೆ:
ಪ್ರಸ್ತಾವಿತ ತಿದ್ದುಪಡಿಸುಪ್ರೀಂ ಕೋರ್ಟ್ (ನ್ಯಾಯಾಧೀಶರ ಸಂಖ್ಯೆ) ತಿದ್ದುಪಡಿ ವಿಧೇಯಕ, ಮುಖ್ಯ ನ್ಯಾಯಮೂರ್ತಿಗಳು ಸೇರಿದಂತೆ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಸಂಖ್ಯೆಯನ್ನು ೩೪ ರಿಂದ ೩೮ ಕ್ಕೆ ಹೆಚ್ಚಿಸುವ ಪ್ರಸ್ತಾವನೆ.
ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ (ತಿದ್ದುಪಡಿ) ವಿಧೇಯಕ, ವಂದೇ ಮಾತರಂ’ ಗೀತೆಯನ್ನು ಹಾಡುವಾಗ ಉದ್ದೇಶಪೂರ್ವಕವಾಗಿ ಅಡ್ಡಿಪಡಿಸುವವರಿಗೆ ಕಠಿಣ ದಂಡನೆ ವಿಧಿಸಲು ೧೯೭೧ರ ಕಾಯ್ದೆಗೆ ತಿದ್ದುಪಡಿ.ಆದಾಯ ತೆರಿಗೆ (ತಿದ್ದುಪಡಿ) ವಿಧೇಯಕ, ಸರ್ಕಾರಿ ಸೆಕ್ಯೂರಿಟಿಗಳಲ್ಲಿ ಹೂಡಿಕೆ ಮಾಡುವ ವಿದೇಶಿ ಹೂಡಿಕೆದಾರರಿಗೆ ತೆರಿಗೆ ವಿನಾಯಿತಿ ನೀಡುವ ಸುಗ್ರೀವಾಜ್ಞೆಯ ಬದಲಿಗೆ ತರಲಾಗುತ್ತಿರುವ ಕಾಯ್ದೆ.ಜನನ ಮತ್ತು ಮರಣಗಳ ನೋಂದಣಿ (ತಿದ್ದುಪಡಿ) ವಿಧೇಯಕ,
ಜನನ ಮತ್ತು ಮರಣಗಳ ವಿಳಂಬ ನೋಂದಣಿಗೆ ಕಠಿಣ ನಿಯಮಗಳು ಮತ್ತು ದಂಡವನ್ನು ಪರಿಚಯಿಸುವುದು.ಒSಒಇ ಅಭಿವೃದ್ಧಿ (ತಿದ್ದುಪಡಿ) ವಿಧೇಯಕ, ೨೦೨೬ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ವಲಯವನ್ನು ಪುನರ್ರಚಿಸಲು ಮತ್ತು ಬಲಪಡಿಸಲು ಕ್ರಮ.ಬಾಕಿ ಇರುವ ಮತ್ತು ಕೈಬಿಡಲಾದ ವಿಧೇಯಕಗಳು ಸೇರಿದಂತೆ ಕಳೆದ ಅಧಿವೇಶನದಲ್ಲಿ ತಡೆಹಿಡಿಯಲಾಗಿದ್ದ ವಿದೇಶಿ ಕೊಡುಗೆ (ನಿಯಂತ್ರಣ) ತಿದ್ದುಪಡಿ ವಿಧೇಯಕ, ೨೦೨೬ ಅನ್ನು ಈ ಬಾರಿ ಅಂಗೀಕರಿಸಲು ಪಟ್ಟಿ ಮಾಡಲಾಗಿದೆ.
ಉನ್ನತ ಶಿಕ್ಷಣ ನಿಯಂತ್ರಕರನ್ನು ಏಕೀಕರಿಸುವ ವಿಕಸಿತ್ ಭಾರತ ಶಿಕ್ಷಣ ಅಧಿಸ್ತಾನ ವಿಧೇಯಕ, ೨೦೨೫ ಪ್ರಸ್ತುತ ಸಮಿತಿಯ ಪರಿಶೀಲನೆಯಲ್ಲಿದೆ.ಕೈಬಿಡಲಾದ ವಿಧೇಯಕ: ನ್ಯಾಯಾಂಗ ಬಂಧನದಲ್ಲಿರುವ ಪ್ರಧಾನ ಮಂತ್ರಿಗಳು ಅಥವಾ ಮುಖ್ಯಮಂತ್ರಿಗಳ ಸ್ವಯಂಚಾಲಿತ ವಜಾಕ್ಕೆ ಸಂಬಂಧಿಸಿದ ತೀವ್ರ ವಿವಾದಾತ್ಮಕ ೧೩೦ನೇ ಸಂವಿಧಾನ ತಿದ್ದುಪಡಿ ವಿಧೇಯಕವನ್ನು ಈ ಬಾರಿಯ ಕಾರ್ಯಸೂಚಿಯಿಂದ ಕೈಬಿಡಲಾಗಿದೆ.
ಇತ್ತೀಚಿನ ರಾಜಕೀಯ ಪಕ್ಷಗಳ ಒಡೆತ ಮತ್ತು ವಿಲೀನಗಳ ನಂತರ ಬದಲಾಗಿರುವ ಸಂಸತ್ತಿನ ಸೀಟುಗಳ ವ್ಯವಸ್ಥೆಯ ನಡುವೆ, ಈ ಅಧಿವೇಶನವು ಸರ್ಕಾರವನ್ನು ತೀವ್ರ ಪರೀಕ್ಷೆಯೊಡ್ಡಲಿದೆ.


































