Home ಜಿಲ್ಲೆ ನೀಟ್ ಆವಾಂತರ ಖಂಡಿಸಿ ನಡೆಯುತ್ತಿರುವ ಪಾರ್ಲಿಮೆಂಟ್ ಚಲೋ ಹೋರಾಟಕ್ಕೆ ಎಐಡಿಎಸ್‍ಓ ಬೆಂಬಲ

ನೀಟ್ ಆವಾಂತರ ಖಂಡಿಸಿ ನಡೆಯುತ್ತಿರುವ ಪಾರ್ಲಿಮೆಂಟ್ ಚಲೋ ಹೋರಾಟಕ್ಕೆ ಎಐಡಿಎಸ್‍ಓ ಬೆಂಬಲ

ಯಾದಗಿರಿ,ಜು.20-ನೀಟ್ ಪರೀಕ್ಷಾ ಅಕ್ರಮಗಳ ವಿರುದ್ಧ ಹೊಸ ದಿಲ್ಲಿಯಲ್ಲಿ ಶಾಂತಿಯುತ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಪರಿಸರ ಹೋರಾಟಗಾರ ಸೋನಂ ವಾಂಗ್ಚುಕ್ ಹಾಗೂ ಇತರ ಹೋರಾಟಗಾರರನ್ನು ಪೆÇಲೀಸರು ಬಲವಂತವಾಗಿ ಬಂಧಿಸಿರುವ ಕ್ರಮ ಖಂಡಿಸಿ ಹಾಗೂ ಪಾರ್ಲಿಮೆಂಟ್ ಚಲೋ ಹೋರಾಟವನ್ನು ಬೆಂಬಲಿಸಿ ಎಐಡಿಎಸ್‍ಓ ವತಿಯಿಂದ ನೇತಾಜಿ ಸುಭಾಷ್ ವೃತ್ತದ ಬಳಿ ಇಂದು ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಸಂಘಟನೆಯ ಜಿಲ್ಲಾ ಸಂಚಾಲಕಿ ಶಿಲ್ಪಾ ಬಿ ಕೆ ಮಾತನಾಡಿ, ಕೇಂದ್ರ ಸರ್ಕಾರ ಹಾಗೂ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ನಡೆಸಿದ ಪ್ರಮುಖ ಪರೀಕ್ಷೆಗಳಲ್ಲಿ ನಡೆದಿರುವ ಅಕ್ರಮಗಳು ದೇಶದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯವನ್ನು ಕತ್ತಲೆಗೆ ದೂಡಿವೆ. ಪರೀಕ್ಷೆ ರದ್ದಾದ ಕೇವಲ ಒಂದೇ ತಿಂಗಳ ಅವಧಿಯಲ್ಲಿ ದೇಶಾದ್ಯಂತ 23 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಷ್ಟಾದರೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ. ಇಂತಹ ನ್ಯಾಯಯುತ ಬೇಡಿಕೆಗಳನ್ನಿಟ್ಟುಕೊಂಡು ನಡೆಯುತ್ತಿರುವ ಈ ಹೋರಾಟವನ್ನು ಕೇಂದ್ರ ಸರ್ಕಾರ ಪೆÇೀಲೀಸರ ಲಾಠಿಚಾರ್ಜ್ ಮೂಲಕ ದಮನಕಾರಿಯಾಗಿ ಹತ್ತಿಕ್ಕಲು ಪ್ರಯತ್ನಿಸುತ್ತಿರುವುದು ಅತ್ಯಂತ ಖಂಡನೀಯ ಎಂದರು.
ಸೋನಂ ವಾಂಗ್ಚುಕ್ ಉಪವಾಸ ಸತ್ಯಾಗ್ರಹ 22 ನೇ ದಿನಕ್ಕೆ ಕಾಲಿಟ್ಟಿದ್ದು, ಅವರ ಆರೋಗ್ಯ ತೀರಾ ಹದಗೆಟ್ಟಿದೆ. ಆದರೂ ಕೇಂದ್ರ ಸರಕಾರ ಅವರೊಂದಿಗೆ ಯಾವುದೇ ಪ್ರಜಾತಾಂತ್ರಿಕ ಸಂವಾದ ನಡೆಸದೆ, ದಮನಕಾರಿ ನೀತಿ ಅನುಸರಿಸುತ್ತಿರುವುದು ಪ್ರಜಾಪ್ರಭುತ್ವಕ್ಕೆ ಬಗೆದ ದ್ರೋಹ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯರಾದ ತುಳಜಾರಾಮ್ ರವರು ಮಾತನಾಡಿ, ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವುದು ವ್ಯವಸ್ಥೆಯ ವೈಫಲ್ಯವಲ್ಲ, ಶಿಕ್ಷಣ ಮಂತ್ರಿಗಳ ಬೇಜವಾಬ್ದಾರಿತನವಾಗಿದೆ. ಲಕ್ಷಾಂತರ ಜನರು ಬೀದಿಗಿಳಿದು ನಿರಂತರ ಹೋರಾಟ ಮಾಡುತ್ತಿದ್ದರೂ, ಕಿವಿಗೊಡದ ಕೇಂದ್ರ ಸರ್ಕಾರ, ತನ್ನ ಉದ್ದಟತನ ಪ್ರದರ್ಶಿಸುತ್ತ,ನೊಂದವರಿಗೆ ನ್ಯಾಯ ಕೊಡಿಸದೇ ಮೌನವಾಗಿದೆ ಇದು ಹೀಗೆ ಮುಂದುವರಿದರೆ ಇಡೀ ದೇಶದಾದ್ಯಂತ ಹೋರಾಟ ಬುಗಿಲೇಳಲಿದೆ ಎಂದರು.
ಸೋನಂ ವಾಂಗ್ಚುಕ್ ಮತ್ತು ಇತರ ಸತ್ಯಾಗ್ರಹಿಗಳೊಂದಿಗೆ ಕೇಂದ್ರ ಸರ್ಕಾರ ಕೂಡಲೇ ಪ್ರಜಾಸಾತ್ತಾತ್ಮಕ ಚರ್ಚೆ ಆರಂಭಿಸಬೇಕು. ಪರೀಕ್ಷಾ ಅಕ್ರಮದ ಹೊಣೆ ಹೊತ್ತು ಶಿಕ್ಷಣ ಸಚಿವ ಧರ್ಮೇoದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಎಐಡಿಎಸ್‍ಓ ಸದಸ್ಯರಾದ, ರಂಜಿತಾ ನಾಗರಾಜ್, ಶ್ರೀಶೈಲ್, ಭಾಗ್ಯಶ್ರೀ, ರೋಜಾ, ದೇವೀಂದ್ರಮ್ಮ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.