Home ಸುದ್ದಿ ರಾಷ್ಟ್ರೀಯ ಅತ್ಯಾಚಾರ, ಮಾನವ ಕಳ್ಳಸಾಗಣೆ ಆರೋಪ: ಆಂಡ್ರ್ಯೂ ಟೇಟ್, ಸಹೋದರನ ಬಂಧನ

ಅತ್ಯಾಚಾರ, ಮಾನವ ಕಳ್ಳಸಾಗಣೆ ಆರೋಪ: ಆಂಡ್ರ್ಯೂ ಟೇಟ್, ಸಹೋದರನ ಬಂಧನ

ಮಿಯಾಮಿ/ಲಂಡನ್,ಜು19: ವಿವಾದಾತ್ಮಕ ಇಂಟರ್ನೆಟ್ ಪ್ರಭಾವಿ (ಇನ್ಫ್ಲುಯೆನ್ಸರ್) ಆಂಡ್ರ್ಯೂ ಟೇಟ್ ಮತ್ತು ಅವರ ಸಹೋದರ ಟ್ರಿಸ್ಟಾನ್ ಟೇಟ್ ಅವರನ್ನು ಅಮೆರಿಕದ ಮಿಯಾಮಿಯಲ್ಲಿ ಯುಎಸ್ ಮಾರ್ಷಲ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.


ಬ್ರಿಟಿಷ್ ಪ್ರಾಸಿಕ್ಯೂಟರ್‍ಗಳು ಇಬ್ಬರ ವಿರುದ್ಧ ಅತ್ಯಾಚಾರ ಮತ್ತು ಮಾನವ ಕಳ್ಳಸಾಗಣೆ ಸೇರಿದಂತೆ 38 ಹೆಚ್ಚುವರಿ ಕ್ರಿಮಿನಲ್ ಆರೋಪಗಳನ್ನು ಪ್ರಕಟಿಸಿದ ಕೆಲವೇ ಗಂಟೆಗಳಲ್ಲಿ ಈ ಜಂಟಿ ಕಾರ್ಯಾಚರಣೆ ನಡೆದಿದೆ.


ಬ್ರಿಟನ್‍ನ ಕ್ರೌನ್ ಪ್ರಾಸಿಕ್ಯೂಷನ್ ಸರ್ವಿಸ್ (ಸಿಪಿಎಸ್) ನೀಡಿರುವ ಮಾಹಿತಿ ಪ್ರಕಾರ, 39 ವರ್ಷದ ಆಂಡ್ರ್ಯೂ ಟೇಟ್ ವಿರುದ್ಧ ಲೈಂಗಿಕ ಶೋಷಣೆಗಾಗಿ ಕಳ್ಳಸಾಗಣೆ, ದೈಹಿಕ ಹಲ್ಲೆ ಹಾಗೂ ಮಕ್ಕಳ ಅಶ್ಲೀಲ ಚಿತ್ರಣ ಮತ್ತು ತೀವ್ರ ಸ್ವರೂಪದ ಪೆÇೀರ್ನೋಗ್ರಫಿಗೆ ಸಂಬಂಧಿಸಿದ 19 ಒಟ್ಟು ಪ್ರಕರಣಗಳು ದಾಖಲಾಗಿವೆ. ಇತ್ತ 38 ವರ್ಷದ ಟ್ರಿಸ್ಟಾನ್ ಟೇಟ್ ವಿರುದ್ಧ ಲೈಂಗಿಕ ದೌರ್ಜನ್ಯ, ಅತ್ಯಾಚಾರ ಮತ್ತು ಕಳ್ಳಸಾಗಣೆಯ ಆರೋಪಗಳನ್ನು ಹೊರಿಸಲಾಗಿದೆ.
2010ರ ಜುಲೈ ಮತ್ತು 2017ರ ಆಗಸ್ಟ್ ನಡುವೆ ನಡೆದಿದೆ ಎನ್ನಲಾದ ಈ ಅಪರಾಧಗಳಿಗೆ ಸಂಬಂಧಿಸಿದಂತೆ ನಾಲ್ಕು ಹೊಸ ಸಂತ್ರಸ್ತರು ದೂರು ನೀಡಿದ್ದಾರೆ. ಇದರಿಂದಾಗಿ ಇಬ್ಬರ ವಿರುದ್ಧ ದೂರು ನೀಡಿರುವ ಒಟ್ಟು ಸಂತ್ರಸ್ತರ ಸಂಖ್ಯೆ 7ಕ್ಕೆ ಏರಿಕೆಯಾಗಿದೆ. ಬೆಡ್‍ಫೆÇೀರ್ಡ್‍ಶೈರ್ ಪೆÇಲೀಸರು ಸಲ್ಲಿಸಿದ ಹೊಸ ಸಾಕ್ಷ್ಯಧಾರಗಳ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಿಪಿಎಸ್ ತಿಳಿಸಿದೆ.


ಹೊಸ ಹಾಗೂ ಹಳೆಯ ಪ್ರಕರಣಗಳ ವಿಚಾರಣೆಗಾಗಿ ಬ್ರಿಟಿಷ್ ಅಧಿಕಾರಿಗಳು ಉಭಯ ಸಹೋದರರನ್ನು ತಮ್ಮ ದೇಶಕ್ಕೆ ಹಸ್ತಾಂತರಿಸುವಂತೆ ಕಾನೂನು ಪ್ರಕ್ರಿಯೆ ಆರಂಭಿಸಿದ್ದಾರೆ. ಆರೋಪಿಗಳು ತಮ್ಮ ಮೇಲಿನ ಎಲ್ಲಾ ಆರೋಪಗಳನ್ನು ತಳ್ಳಿಹಾಕಿದ್ದು, ನಿರಪರಾಧಿಗಳೆಂದು ವಾದಿಸುತ್ತಿದ್ದಾರೆ.
ಇನ್ನು ಇವರ ವಿರುದ್ಧ ರೋಮೇನಿಯಾದಲ್ಲೂ ಮಾನವ ಕಳ್ಳಸಾಗಣೆ ಮತ್ತು ಸಂಘಟಿತ ಅಪರಾಧದ ಪ್ರಕರಣಗಳು ಬಾಕಿ ಇವೆ