
ನವದೆಹಲಿ.ಜು19: ಶೈಕ್ಷಣಿಕ ಕಂಪನಿ ಫಿಸಿಕ್ಸ್ ವಾಲಾ (ಪಿ.ಡಬ್ಲ್ಯೂ) ತನ್ನ ನೀಟ್ 2026ರ ಫಲಿತಾಂಶವನ್ನು ಪ್ರಕಟಿಸಿದ್ದು ಹಲವು ವಿದ್ಯಾರ್ಥಿಗಳು ನೀಟ್ ಆಲ್ ಇಂಡಿಯಾ ರ್ಯಾಂಕ್ (ಎ.ಐ.ಆರ್.)ನಲ್ಲಿ ಉನ್ನತ ಸ್ಥಾನ ಪಡೆದಿದ್ದಾರೆ.
ರವಿಕಾಂತ್ ದಿವಾಕರ್ (ಎ.ಐ.ಆರ್.55), ಶಿವಾಂಶ್ ಆನಂದ್ (ಎ.ಐ.ಆರ್. 152), ದಿವ್ಯಾಂಶ್ ಜೈಸ್ವಾಲ್ (ಎ.ಐ.ಆರ್. 173) ಮತ್ತು ಸಾಕ್ಷಿ ಕುಮಾರಿ (ಎ.ಐ.ಆರ್. 192) ಉನ್ನತ ಸಾಧನೆ ಮಾಡಿದ ವಿದ್ಯಾರ್ಥಿಗಳಾಗಿದ್ದಾರೆ. ಈ ಸಾಧನೆಗಳು ಆನ್ಲೈನ್ ಅಥವಾ ಆಫ್ಲೈನ್, ತಂತ್ರಜ್ಞಾನ ಸನ್ನದ್ಧ ವಿದ್ಯಾಪೀಠ ಕೇಂದ್ರಗಳ ಮೂಲಕ ಅವರ ವೈಯಕ್ತಿಕ ಆದ್ಯತೆಗಳು ಮತ್ತು ಕಲಿಕಾ ಶೈಲಿಗಳಿಗೆ ಅನುಗುಣವಾಗಿ ಉನ್ನತ ಅಂಕಗಳನ್ನು ಪಡೆಯಲು ಪ್ರಯತ್ನಿಸುವ ವಿದ್ಯಾರ್ಥಿಗಳಿಗೆ ಪಿ.ಡಬ್ಲ್ಯೂ. ಪೂರೈಸಲು ಪ್ರಯತ್ನಿಸುತ್ತಿರುವ ಕಲಿಕಾ ವ್ಯವಸ್ಥೆಯ ಅನುಕೂಲತೆಗೆ ಸಾಕ್ಷಿಯಾಗಿವೆ.
ಹೆಚ್ಚುವರಿಯಾಗಿ ಬೆಂಗಳೂರಿನಲ್ಲಿ ಕಾರ್ಯಕ್ರಮ ಆಯೋಜಿಸಿದ್ದು ವಿದ್ಯಾರ್ಥಿಗಳ ಉತ್ತಮ ಸಾಧನೆಯನ್ನು ಸಂಭ್ರಮಿಸಲಾಯಿತು. ಶಶಾಂಕ್ ಪಿ. (ಎ.ಐ.ಆರ್. 2197), ಶ್ರೀನಿಧಿ ರಾಯ್ಕರ್ (ಎ.ಐ.ಆರ್.4433) ಮತ್ತು ಧ್ರುವ ಎಸ್. (ಎ.ಐ.ಆರ್.2422) ಮುಂತಾದವರು ನಗರದ ಫಿಸಿಕ್ಸ್ ವಾಲಾದ ಉನ್ನತ ಸಾಧನೆಯ ವಿದ್ಯಾರ್ಥಿಗಳಾಗಿದ್ದಾರೆ. “ನನ್ನ ಕಠಿಣ ಪರಿಶ್ರಮ ಫಲ ನೀಡಿರುವುದನ್ನು ನೋಡುತ್ತಿರುವುದು ನನಗೆ ಬಹಳ ಸಂತೋಷವಾಗಿದೆ” ಎಂದು ರವಿಕಾಂತ್ ದಿವಾಕರ್ ಹೇಳಿದರು
ಫಿಸಿಕ್ಸ್ ವಾಲಾ(ಪಿ.ಡಬ್ಲ್ಯೂ.) ಸಂಸ್ಥಾಪಕ ಮತ್ತು ಸಿಇಒ ಅಲಖ್ ಪಾಂಡೆ ಈ ಪರೀಕ್ಷೆ ಬರೀ ಒಂದು ಮೈಲಿಗಲ್ಲಷ್ಟೇ ಹೊರತು ನಿಮ್ಮ ಮೌಲ್ಯ ಅಥವಾ ಭವಿಷ್ಯದ ಅಳತೆಗೋಲಲ್ಲ ಎಂದು ನೆನಪಿನಲ್ಲಿರಿಸಿಕೊಳ್ಳಿ. ನಿಮ್ಮ ಸಾಮಥ್ರ್ಯ ಅಪಾರವಾಗಿದೆ ಮತ್ತು ಇದು ಮುಂದಿರುವ ದೀರ್ಘ, ಯಶಸ್ವಿ ಪ್ರಯಾಣದ ಒಂದು ಅಧ್ಯಾಯವಷ್ಟೇ” ಎಂದರು.
































