Home ಜಿಲ್ಲೆ ಕಲಬುರಗಿ ಕೆಕೆಸಿಸಿಐ ಡೈಮಂಡ್ ಜುಬಿಲಿ ಬಿಸಿನೆಸ್ ಇಂಕ್ಯುಬೇಶನ್ ಹಾಗೂ ತರಬೇತಿ ಕೇಂದ್ರದ ಭೂಮಿ ಪೂಜೆ

ಕೆಕೆಸಿಸಿಐ ಡೈಮಂಡ್ ಜುಬಿಲಿ ಬಿಸಿನೆಸ್ ಇಂಕ್ಯುಬೇಶನ್ ಹಾಗೂ ತರಬೇತಿ ಕೇಂದ್ರದ ಭೂಮಿ ಪೂಜೆ

ಕಲಬುರಗಿ,ಜು.20-ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಕೆಕೆಸಿಸಿಐ) ತನ್ನ ವಜ್ರಮಹೋತ್ಸವದ ಅಂಗವಾಗಿ ನಿರ್ಮಿಸಲಾಗುತ್ತಿರುವ ಕೆಕೆಸಿಸಿಐ ಡೈಮಂಡ್ ಜುಬಿಲಿ ಬಿಸಿನೆಸ್ ಇಂಕ್ಯುಬೇಶನ್ ಹಾಗೂ ತರಬೇತಿ ಕೇಂದ್ರದ ಭೂಮಿ ಪೂಜೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮವನ್ನು ಭಾನುವಾರ ದರಿಯಾಪುರ-ಕೊಟ್ನೂರಿನ, ಝೆಸ್ಟ್ ಕ್ಲಬ್ ಹಿಂಭಾಗದ ಔಷಧ ಭವನ ಸಮೀಪದ ಪ್ರಸ್ತಾವಿತ ಜಾಗದಲ್ಲಿ ಅತ್ಯಂತ ವಿಜೃಂಭಣೆಯಿಂದ ನೆರವೇರಿಸಲಾಯಿತು. ಕಾರ್ಯಕ್ರಮವು ಮಕ್ತಂಪುರ ಗದ್ದುಗಿ ಮಠದ ಚಾರಲಿಂಗ ಮಹಾಸ್ವಾಮಿಗಳ ದಿವ್ಯ ಆಶೀರ್ವಾದದೊಂದಿಗೆ ಆರಂಭಗೊಂಡಿತು. ಮಹಾಸ್ವಾಮಿಗಳು ನೂತನ ಕಟ್ಟಡವು ಯಶಸ್ವಿಯಾಗಿ ನಿರ್ಮಾಣಗೊಂಡು ಈ ಭಾಗದ ಉದ್ಯಮ, ವ್ಯಾಪಾರ ಹಾಗೂ ಯುವ ಉದ್ಯಮಿಗಳ ಬೆಳವಣಿಗೆಗೆ ಕೇಂದ್ರಬಿಂದುವಾಗಲಿ ಎಂದು ಹಾರೈಸಿದರು.
ಶಂಕುಸ್ಥಾಪನೆಯನ್ನು ಕಲಬುರಗಿ ದಕ್ಷಿಣ ಶಾಸಕ ಅಲ್ಲಂಪ್ರಭು ಪಾಟೀಲ, ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ ಮತ್ತಿಮುಡ್ ಹಾಗೂ ವಿಧಾನ ಪರಿಷತ್ ಸದಸ್ಯ ಹಾಗೂ ಎಚ್‍ಕೆಇಎಸ್ ಅಧ್ಯಕ್ಷರಾದ ಶಶೀಲ ಜಿ.
ನಮೋಶಿ ಅವರು ಸಂಯುಕ್ತವಾಗಿ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೆಕೆಸಿಸಿಐ ಅಧ್ಯಕ್ಷ ಶರಣಬಸಪ್ಪ ಎಂ.ಪಪ್ಪಾ ಅವರು, ಸಂಸ್ಥೆಯ 60ನೇ ವರ್ಷದ ಸ್ಮರಣಾರ್ಥ ನಿರ್ಮಾಣವಾಗುತ್ತಿರುವ ಈ ಡೈಮಂಡ್ ಜುಬಿಲಿ ಬಿಸಿನೆಸ್ ಇಂಕ್ಯುಬೇಶನ್ ಹಾಗೂ ತರಬೇತಿ ಕೇಂದ್ರವು ಉದ್ಯಮಶೀಲತೆ, ಸ್ಟಾರ್ಟ್‍ಅಪ್‍ಗಳು, ಕೌಶಲ್ಯಾಭಿವೃದ್ಧಿ, ನವೋದ್ಯಮ, ಬಿಸಿನೆಸ್ ಇಂಕ್ಯುಬೇಶನ್ ಹಾಗೂ ಸಾಮಥ್ರ್ಯ ವೃದ್ಧಿಗೆ ಮಹತ್ವದ ವೇದಿಕೆಯಾಗಲಿದೆ ಎಂದು ಹೇಳಿದರು. ಈ ಕೇಂದ್ರವು ಕಲ್ಯಾಣ ಕರ್ನಾಟಕ ಭಾಗದ ಯುವಕರು, ಉದ್ಯಮಿಗಳು ಹಾಗೂ ಎಂಎಸ್‍ಎಂಇಗಳಿಗೆ ಹೊಸ ಅವಕಾಶಗಳನ್ನು ಸೃಷ್ಟಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಕಲಬುರಗಿ ದಕ್ಷಿಣ ಶಾಸಕ ಅಲ್ಲಂಪ್ರಭು ಪಾಟೀಲ ಅವರು ಮಾತನಾಡಿ, ಕೆಕೆಸಿಸಿಐ ಕೈಗೊಂಡಿರುವ ಈ ದೂರದೃಷ್ಟಿಯ ಯೋಜನೆಯನ್ನು ಶ್ಲಾಘಿಸಿ, ಸಂಸ್ಥೆಯ ಅಭಿವೃದ್ಧಿ ಕಾರ್ಯಗಳಿಗೆ ತಮ್ಮ ಸಂಪೂರ್ಣ ಸಹಕಾರ ಮುಂದುವರಿಯಲಿದೆ ಎಂದು ಭರವಸೆ ನೀಡಿದರು.
ಚಾರಲಿಂಗ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಈ ಕೇಂದ್ರವು ಜ್ಞಾನ, ಉದ್ಯಮಶೀಲತೆ ಹಾಗೂ ಸಮೃದ್ಧಿಯ ಪ್ರತೀಕವಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಬೇಕಾಗಿದ್ದ ಕರ್ನಾಟಕ ಸರ್ಕಾರದ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಸಚಿವರಾದ ಡಾ. ಶರಣಪ್ರಕಾಶ ಪಾಟೀಲ ಅವರು ಅನಿವಾರ್ಯ ಕಾರಣಗಳಿಂದ ಕಾರ್ಯಕ್ರಮಕ್ಕೆ ಆಗಮಿಸಲು ಸಾಧ್ಯವಾಗಲಿಲ್ಲ. ಆದರೆ ದೂರವಾಣಿ ಮೂಲಕ ಕೆಕೆಸಿಸಿಐಗೆ ಶುಭಾಶಯಗಳನ್ನು ತಿಳಿಸಿ, ಈ ಮಹತ್ವದ ಯೋಜನೆಗೆ ಅಭಿನಂದನೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಕೆಕೆಸಿಸಿಐ ಮಾಜಿ ಅಧ್ಯಕ್ಷ ಉಮಾಕಾಂತ ನಿಗೂಡಗಿ, ವಿಧಾನ ಪರಿಷತ್ ಮಾಜಿ ಸದಸ್ಯ ಅಮರನಾಥ ಎನ್. ಪಾಟೀಲ, ಸರಾಫ್ ಬಜಾರ್ ಅಸೋಸಿಯೇಷನ್ ಅಧ್ಯಕ್ಷ ರಾಘವೇಂದ್ರ ಮೈಲಾಪೂರ,
ದಲ್ ಮಿಲ್ ಅಸೋಸಿಯೇಷನ್ ಅಧ್ಯಕ್ಷ ಚಂದ್ರಕಾಂತ ಕೋಬಾಳ, ಗ್ರೇನ್ಸ್ &ಚಿmಠಿ; ಸೀಡ್ಸ್ ಮಚರ್ಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ಸಂತೋಷ್ ಲಂಗರ್, ಹಿರಿಯ ಕಾಂಗ್ರೆಸ್ ಮುಖಂಡ ನೀಲಕಂಠರಾವ್ ಮೂಲಗೆ, ಕಪನೂರ್ ಇಂಡಸ್ಟ್ರಿಯಲ್ ಎಸ್ಟೇಟ್ ಅಸೋಸಿಯೇಷನ್ ಅಧ್ಯಕ್ಷ ರವೀಂದ್ರ ಮುಕ್ಕಾ, ರೈಸ್ &ಚಿmಠಿ; ಕಿರಾಣಿ ಮಚರ್ಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ರವೀಂದ್ರ ಮಡಮಶೆಟ್ಟಿ, ಫಾರ್ಮಾ ಅಸೋಸಿಯೇಷನ್ ಕಾರ್ಯದರ್ಶಿ ರವೀಂದ್ರ ಜೋಶಿ, ಕಾಸಿಯಾ ಕೌನ್ಸಿಲ್ ಸದಸ್ಯ ಭೀಮಾಶಂಕರ ಪಾಟೀಲ, ನಂದಿಕೋಳ ಸ್ವಾಮಿ, ಬಿಜೆಪಿ ಹಿರಿಯ ಮುಖಂಡ ರಾಜುಗೌಡ ನಾಗನಹಳ್ಳಿ, ರಾಜು ಭೀಮಳ್ಳಿ, ವಿಷ್ಣುದಾಸ್ ತಪಾಡಿಯಾ,
ಡಾ.ಶರಣಬಸಪ್ಪ ಹರವಾಳ, ಶಿವಶರಣಪ್ಪ ಸೀರಿ, ಸುರೇಶ್ ಬುಲ್ಬುಲೆ, ಬಸವರಾಜ ಜೋಗೂರ, ಶರಣಬಸಪ್ಪ ಮಚ್ಚೆಟ್ಟಿ, ಮಹೇಶ್ ಸಾಲಗಾರ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿ ಯೋಜನೆ
ಯಶಸ್ವಿಯಾಗಲೆಂದು ಶುಭ ಹಾರೈಸಿದರು.
ಈ ಕಾರ್ಯಕ್ರಮವು ಕೆಕೆಸಿಸಿಐ ಅಧ್ಯಕ್ಷ ಶರಣಬಸಪ್ಪ ಎಂ.ಪಪ್ಪಾ ಹಾಗೂ ಗೌರವ ಕಾರ್ಯದರ್ಶಿ ಶಿವರಾಜ್ ವಿ. ಇಂಗಿನಶೆಟ್ಟಿ ಅವರ ನೇತೃತ್ವದಲ್ಲಿ ನಡೆಯಿತು. ಉಪಾಧ್ಯಕ್ಷ ಕೇದಾರ ರಾಘೋಜಿ, ಜಂಟಿ ಕಾರ್ಯದರ್ಶಿ
ಗಿರೀಶ್ ಅನಕಲ್, ಖಜಾಂಚಿ ಉತ್ತಮ್ ಬಜಾಜ್, ಬಿಲ್ಡಿಂಗ್ &ಚಿmಠಿ; ಎಸ್ಟೇಟ್ ಉಪಸಮಿತಿ ಅಧ್ಯಕ್ಷ ಸಂತೋಷ್ ಸುರೇಶ್ ನಂದ್ಯಾಳ್, ಮಂಜುನಾಥ ಜೇವರ್ಗಿ, ಕೆಕೆಸಿಸಿಐ 2025-27ರ ಆಡಳಿತ ಮಂಡಳಿಯ
ಸದಸ್ಯರು, ವಿವಿಧ ಸಂಯೋಜಿತ ವ್ಯಾಪಾರ ಸಂಘಗಳ ಪ್ರತಿನಿಧಿಗಳು, ಕೈಗಾರಿಕೋದ್ಯಮಿಗಳು, ಉದ್ಯಮಿಗಳು, ವ್ಯಾಪಾರಸ್ಥರು ಹಾಗೂ ಅಪಾರ ಸಂಖ್ಯೆಯ ಕೆಕೆಸಿಸಿಐ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅದನ್ನು ಯಶಸ್ವಿಗೊಳಿಸಿದರು.
ಪ್ರಸ್ತಾವಿತ ಕೆಕೆಸಿಸಿಐ ಡೈಮಂಡ್ ಜುಬಿಲಿ ಬಿಸಿನೆಸ್ ಇಂಕ್ಯುಬೇಶನ್ ಹಾಗೂ ತರಬೇತಿ ಕೇಂದ್ರವು ಉದ್ಯಮಶೀಲತೆ, ಸ್ಟಾರ್ಟ್‍ಅಪ್ ಇಂಕ್ಯುಬೇಶನ್, ಕೌಶಲ್ಯಾಭಿವೃದ್ಧಿ ಹಾಗೂ ಉದ್ಯಮ ಬೆಂಬಲ ಸೇವೆಗಳನ್ನು ಉತ್ತೇಜಿಸುವ ಮೂಲಕ ಕಲ್ಯಾಣ ಕರ್ನಾಟಕ ಭಾಗದ ಕೈಗಾರಿಕಾ ಹಾಗೂ ಆರ್ಥಿಕ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡುವ ಪ್ರತಿಷ್ಠಿತ ಕೇಂದ್ರವಾಗಿ ರೂಪುಗೊಳ್ಳಲಿದೆ.