Home ಸುದ್ದಿ ಅಂತರಾಷ್ಟ್ರೀಯ ನಗ್ನಳಾಗಿ ದೇವಸ್ಥಾನ ಪ್ರವೇಶ ವಿಗ್ರಹದೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆ

ನಗ್ನಳಾಗಿ ದೇವಸ್ಥಾನ ಪ್ರವೇಶ ವಿಗ್ರಹದೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆ

ಹೈದರಾಬಾದ್,ಜು19-ಇಲ್ಲಿನ ಸಾಫ್ಟ್‍ವೇರ್ ಇಂಜಿನಿಯರ್ ಯುವತಿಯೊಬ್ಬರ ನಿಗೂಢ ಸಾವು ಇದೀಗ ತೀವ್ರ ಕುತೂಹಲ ಮತ್ತು ಆತಂಕಕ್ಕೆ ಕಾರಣವಾಗಿದೆ. ಮೃತ ಯುವತಿಯನ್ನು ತೇಜಸ್ವಿನಿ ಎಂದು ಗುರುತಿಸಲಾಗಿದ್ದು, ಈ ಸಾವಿನ ಪ್ರಕರಣ ಇದೀಗ ಹಲವು ತಿರುವುಗಳನ್ನು ಪಡೆದುಕೊಂಡಿದೆ.


ಪೆÇಲೀಸ್ ಮೂಲಗಳ ಪ್ರಕಾರ, ತೇಜಸ್ವಿನಿ ತಂಗಿದ್ದ ಸ್ಥಳದಿಂದ ದಿಢೀರನೆ ಬಟ್ಟೆಗಳನ್ನೆಲ್ಲ ಬಿಚ್ಚಿಟ್ಟು, ನಗ್ನ ಸ್ಥಿತಿಯಲ್ಲಿಯೇ ಸಮೀಪದ ದೇವಸ್ಥಾನವೊಂದಕ್ಕೆ ಓಡಿ ಬಂದಿದ್ದಾರೆ. ಅಲ್ಲಿ ಗರ್ಭಗುಡಿಯಲ್ಲಿದ್ದ ಅಮ್ಮನವರ (ದೇವತೆಯ) ವಿಗ್ರಹವನ್ನು ಕೈಯಲ್ಲಿ ಹಿಡಿದುಕೊಂಡು ನೇರವಾಗಿ ಹತ್ತಿರದಲ್ಲೇ ಇದ್ದ ಕೆರೆಯತ್ತ ದಾವಿಸಿದ್ದಾರೆ.
ಕೈಯಲ್ಲಿ ದೇವಿಯ ವಿಗ್ರಹವನ್ನು ಹಿಡಿದುಕೊಂಡೇ ಕೆರೆಗೆ ಜಿಗಿದ ಪರಿಣಾಮ ತೇಜಸ್ವಿನಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ವಿಪತ್ತು ನಿರ್ವಹಣಾ ಪಡೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ತೇಜಸ್ವಿನಿ ಅವರ ಮೃತದೇಹವನ್ನು ಹೊರತೆಗೆದಿದ್ದಾರೆ. ಆದರೆ, ಅವರು ಹಿಡಿದುಕೊಂಡು ಹೋಗಿದ್ದ ದೇವಿಯ ವಿಗ್ರಹ ಮಾತ್ರ ಇನ್ನೂ ಪತ್ತೆಯಾಗಿಲ್ಲ.


ಈ ವಿಚಿತ್ರ ವರ್ತನೆಗೆ ಮತ್ತು ಸಾವಿಗೆ ಕಾರಣವೇನು ಎಂಬ ಬಗ್ಗೆ ಪೆÇಲೀಸರು ತೇಜಸ್ವಿನಿ ಅವರ ತಾಯಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಘಟನೆಗೆ ಮಾನಸಿಕ ಸ್ಥಿತಿ ಕಾರಣವೇ ಅಥವಾ ಬೇರೆನಾದರೂ ಕಾರಣವಿದೆಯೇ ಎಂಬ ನಿಟ್ಟಿನಲ್ಲಿ ತನಿಖೆ ಸಾಗಿದೆ. ಕೆರೆಯ ಆಳದಲ್ಲಿ ಮುಳುಗಿರುವ ವಿಗ್ರಹವನ್ನು ಪತ್ತೆಹಚ್ಚಲು ವಿಪತ್ತು ನಿರ್ವಹಣಾ ಪಡೆ ಬೋಟ್‍ಗಳ ಮೂಲಕ ಶೋಧ ಕಾರ್ಯ ಮುಂದುವರಿಸಿದೆ. ಈ ವಿಗ್ರಹ ಸಿಕ್ಕರೆ ಪ್ರಕರಣಕ್ಕೆ ಪ್ರಮುಖ ಸಾಕ್ಷ್ಯ ಸಿಗಲಿದೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.