Home ಜಿಲ್ಲೆ ಕಲಬುರಗಿ ವ್ಯವಸ್ಥೆಯ ಮೂಲಭೂತ ಬದಲಾವಣೆ ಮಾತ್ರ ಜನತೆಯ ಸಮಸ್ಯೆಗಳಿಗ ಪರಿಹಾರ: ಎಮ್. ಶಶಿಧರ

ವ್ಯವಸ್ಥೆಯ ಮೂಲಭೂತ ಬದಲಾವಣೆ ಮಾತ್ರ ಜನತೆಯ ಸಮಸ್ಯೆಗಳಿಗ ಪರಿಹಾರ: ಎಮ್. ಶಶಿಧರ

ಕಲಬುರಗಿ,ಆ.6-ಭಾರತದ ಜನತೆಯ ವಿಮುಕ್ತಿ ಉಳಿಗ್ಯಮಾನ್ಯ ಮತ್ತು ಬಂಡವಾಳಶಾಹಿ ವಿಚಾರಗಳ ವಿರುದ್ದ ಐಕ್ಯತೆಯಿಂದ ಪ್ರಗತಿಪರವಾದ ಉನ್ನತ ವಿಚಾರಗಳನ್ನು ತೆಗೆದುಕೊಂಡು ಹೋರಾಟ ಮಾಡಬೇಕಾಗಿದೆ ಎಂದು ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯೂನಿಸ್ಟ್) ಎಸ್.ಯು.ಸಿ.ಐ (ಸಿ) ನ ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯರಾದ ಎಮ್. ಶಶಿಧರ ಹೇಳಿದರು.
ಎಸ್‍ಯುಸಿಐಸಿ (ಸಿ) ಶಹಾಬಾದ ಸ್ಥಳೀಯ ಸಮಿತಿ ವತಿಯಿಂದ ಆಯೋಜಿಸಿದ್ದ ಭಾರತದ ನೆಲದಲ್ಲಿ ಒಂದು ನೈಜ್ಯ ಕಮ್ಯುನಿಸ್ಟ್ ಪಕ್ಷವನ್ನು ಕಟ್ಟಿದ ಈ ಯುಗದ ಅಕೃತಿಮ ಮಾಕ್ರ್ಸವಾದಿ ಚಿಂತಕರಾದ ಶಿವದಾಸ ಘೋಷ ರವರ 50ನೇ ವಾರ್ಷಿಕ ಸ್ಮರಣ ಸಭೆಯನ್ನು ಉದ್ದೇಶಿಸಿ ಮುಖ್ಯ ಭಾಷಣಕಾರರಾಗಿ ಮಾತನಾಡಿದ ಅವರು ಶಿವದಾಸ ಘೋಷರವರು ಎಸ್.ಯು.ಸಿ.ಐ ಪಕ್ಷವನ್ನು ಕಟ್ಟಲು ಬಹಳ ತ್ರಾಸದಾಯಕ ಹಾಗೂ ಸಾಹಸಮಯಿ ಹೋರಾಟವನ್ನು ನಡೆಸಿದರು. ಸ್ವಾತಂತ್ಯ್ರ ಪೂರ್ವದಲ್ಲಿ ಅನುಶೀಲನ
ಸಮಿತಿಯ ಸಕ್ರಿಯ ಕಾರ್ಯಕರ್ತನಾಗಿ ದೇಶ ಸೇವೆ ಸಲ್ಲಿಸಿದರು.
ಆದರೆ ಸ್ವಾತಂತ್ಯ್ರ ನಂತರ ದೇಶವು ಬಡ ರೈತ, ಕಾರ್ಮಿಕರ ಪರ ಆಡಳಿತ ಮಾಡಲಿಲ್ಲ, ಹಾಗೂ ನಮ್ಮ ದೇಶದಲ್ಲಿ ಇರುವ ಕಮ್ಯುನಿಸ್ಟ್ ಪಕ್ಷಗಳು ಕೂಡಾ ಸರಿಯಾದ ಮಾರ್ಗವನ್ನು ಅನುಸರಿಸುತ್ತಿಲ್ಲ ಎಂದು ಮನಗಂಡ ಶಿವದಾಸ ಘೋಷ ರವರು 1948ರಲ್ಲಿ ಎಸ್.ಯು.ಸಿ.ಐ ಪಕ್ಷಯನ್ನು ಕಟ್ಟಿದರು. ಇಡೀ ಅವರ ಜೀವನವೇ ಪಕ್ಷದ ಹೋರಾಟದ ಜೀವನವಾಗಿದೆ. ಎಂದು ನುಡಿದರು.
ಭಾಷಣಕಾರರಾಗಿ ಆಗಮಿಸಿದ ಎಸ್.ಯು.ಸಿ.ಐ (ಸಿ) ಜಿಲ್ಲಾ ಸಮಿತಿಯ ಸದಸ್ಯರಾದ ರಾಮಣ್ಣ ಎಸ್. ಇಬ್ರಾಹಿಂಪೂರ ರವರು ಮಾತನಾಡುತ್ತಾ, ಪಕ್ಷವು ಇಡೀ ಭಾರತ ದೇಶದ ಎಲ್ಲ ರಾಜ್ಯಗಳಲ್ಲಿ ಬೆಳೆಯುತ್ತಿದೆ,
ರೈತರು, ಕಾರ್ಮಿಕರು, ವಿದ್ಯಾರ್ಥಿಗಳು, ಯುವಜನರು, ಮಹಿಳೆಯರು ಈ ಪಕ್ಷದ ವಿಚಾರಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಎಂದು ನುಡಿದರು. ಸಭೆಯ ಅಧ್ಯಕ್ಷತೆಯನ್ನು ಸ್ಥಳೀಯ ಸಮಿತಿ ಕಾರ್ಯದರ್ಶಿಗಳಾದ ಗಣಪತರಾವ ಕೆ. ಮಾನೆ ರವರು ವಹಿಸಿಕೊಂಡಿದ್ದರು. ಕಾರ್ಯಕ್ರಮವನ್ನು ಸ್ಥಳೀಯ ಸಮಿತಿ ಸದಸ್ಯರಾದ ಗುಂಡಮ್ಮ ಮಡಿವಾಳ ನಿರೂಪಿಸಿದರು. ಸಭೆಯಲ್ಲಿ ರಾಘವೇಂದ್ರ ಎಂ.ಜಿ. ಜಗನ್ನಾಥ ಎಸ್.ಹೆಚ್. ನೀಲಕಂಠ ಹುಲಿ, ರಾಜೇಂದ್ರ
ಅತನೂರ, ರೇಷ್ಮಾ ಆರ್. ಇಬ್ರಾಹಿಂಪೂರ, ತೇಜಸ್, ರಾಧಿಕಾ, ಸಿದ್ದು ಚೌಧರಿ, ಅಜಯ ಗುರುಜಾಲಕರ್. ರಮೇಶ ದೇವಕರ್, ಚಂದ್ರಕಾಂತ ದೇವಕರ್. ಬಾಗಣ್ಣ ಬುಕ್ಕಾ. ಸ್ಪೂರ್ತಿ ಗುರುಜಾಲಕರ್ ಸೇರಿದಂತೆ ಪಕ್ಷದ ಸದಸ್ಯರು ಬೆಂಬಲಿಗರು ಭಾಗವಹಿಸಿದ್ದರು.