
ಲಕ್ಷೆ÷್ಮÃಶ್ವರ,ಸೆ೬: ಗ್ರಾಮ ಪಂಚಾಯಿತಿ ನೌಕರರಿಗೆ ಕನಿಷ್ಠ ವೇತನ ಜಾರಿಯಾಗಿದ್ದು ಅದನ್ನು ತಡೆಹಿಡಿದಿರುವ ಮತ್ತು ಪುನರ್ ಪರಿಶೀಲನೆಗಾಗಿ ಉಪಸಮಿತಿ ರಚಿಸಿರುವುದನ್ನು ವಿರೋಧಿಸಿ ಸೆ.೮ ರಂದು ಬೆಂಗಳೂರು ಚಲೋ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ತಾಲುಕುಧ್ಯಕ್ಷರಾದ ಬಸವರಾಜ ಅ ಅಕ೯ಸಾಲಿ ಹೇಳಿದ್ದಾರೆ.
ಲಕ್ಷೆ÷್ಮÃಶ್ವರ ತಾಲುಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗೆ ಮನವಿ ನೀಡಿ ಬಳಿಕ ಮಾತನಾಡಿದ ಅವರು ನಮ್ಮ ಬೇಡಿಕೆಯನ್ನು ಮನ್ನಿಸಿ ರಾಜ್ಯ ಸರಕಾರ ದಿನಾಂಕ ೨೨-೦೫-೨೦೨೬ ರ ಅಧಿಸೂಚನೆಯಂತೆ ರೂ ೨೧,೬೦೦ ಕನಿಷ್ಠ ವೇತನ ನಿಗದಿಗೊಳಿಸಿ ಆದೇಶ ಮಾಡಿತ್ತು.ಆದರೆ ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ಸರಕಾರ ಈ ವೇತನವನ್ನು ತಡೆಹಿಡಿದು, ಪುನರ್ ಪರಿಶೀಲನೆಗೆಂದು ಉಪಮುಖ್ಯಮಂತ್ರಿಗಳಾದ ಡಾ. ಜಿ. ಪರಮೇಶ್ವರ್ ಅವರ ಅಧ್ಯಕ್ಷತೆಯಲ್ಲಿ ಉಪ ಸಮಿತಿಯನ್ನು ರಚಿಸಿದ್ದು ಅದನ್ನು ಕೂಡಲೇ ವಿಸರ್ಜಿಸಬೇಕು. ವೇತನವನ್ನು ಇತರ ಬೇಡಿಕೆಗಳ ಜೂತೆ ತಕ್ಷಣ ಈಡೇರಿಸುವ ನಿಟ್ಟಿನಲ್ಲಿ ಸೆ.೮ ರಂದು ವಿಧಾನಸೌಧ ಚಲೋ ಕಾರ್ಯಕ್ರಮವನ್ನು ಹಮ್ಮಿ ಕೊ ಳ್ಳಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಂತೇಶ್ ಸುಣಗಾರ, ಶಂಕ್ರಪ್ಪ ಗೋಣಪ್ಪನವರ್, ನಾಗರಾಜ್ ಜಾಡರ್, ಸಿದ್ದು ಹಡಗಟ್ಟಿ, ಮಹೇಶ್ ಮೂಲಿಮನಿ, ಹನುಮಂತಗೌಡ ಮರೀಲಿಂಗನಗೌಡ್ರ ಪಕ್ಕಿರಶ್ ಮಾಗಡಿ ಲಿಂಗರಾಜ್ ಬಾಗವಾಡ ಶ್ರೀಶೈಲಪ್ಪ ಬಡಿಗೇರ್ ರಮೇಶ್ ಅಣ್ಣಿಗೇರಿ ಗುಡದಪ್ಪ ಕಾಮತ್ ಇತರರು ಇದ್ದರು.































