
ನವದೆಹಲಿ,ಆ.೫- ರಸ್ತೆ ಸುರಕ್ಷತೆ ಹೆಚ್ಚಿಸಲು ಮತ್ತು ವಿಮೆ ರಹಿತ ವಾಹನಗಳ ಚಾಲನೆಗೆ ಕಡಿವಾಣ ಹಾಕಲು ಸುಪ್ರೀಂ ಕೋರ್ಟ್ ಮಹತ್ವದ ಹೆಜ್ಜೆಯನ್ನಿಟ್ಟಿದೆ. ವಾಹನಕ್ಕೆ ಸಿಂಧುತ್ವ ಹೊಂದಿರುವ ವಿಮೆ ಇಲ್ಲದಿದ್ದರೆ ಪೆಟ್ರೋಲ್ ಪಂಪ್‌ಗಳಲ್ಲಿ ಇಂಧನ ವಿತರಿಸದಂತೆ ತಡೆಯುವ ಪ್ರಾಯೋಗಿಕ ಯೋಜನೆಯನ್ನು ರೂಪಿಸಲು ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಹಾಗೂ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.
ಈ ಯೋಜನೆಯು ಜಾರಿಗೆ ಬಂದರೆ, ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ತುಂಬಿಸುವ ಮುನ್ನವೇ ವಾಹನದ ವಿಮೆ ಪರಿಶೀಲಿಸಲಾಗುತ್ತದೆ. ವಿಮೆ ನವೀಕರಣಗೊಳ್ಳದಿದ್ದರೆ ಪೆಟ್ರೋಲ್ ಅಥವಾ ಡೀಸೆಲ್ ನಿರಾಕರಿಸುವ ಸಾಧ್ಯತೆಯಿದೆ.
ಹೆದ್ದಾರಿಗಳಲ್ಲಿರುವ ಎಎನ್‌ಪಿಆರ್ ಕ್ಯಾಮೆರಾಗಳನ್ನು ವಾಹನ ಮತ್ತು ವಿಮೆ ಡೇಟಾಬೇಸ್‌ಗೆ ಲಿಂಕ್ ಮಾಡಲಾಗುತ್ತದೆ. ಇದರಿಂದ ವಿಮೆ ಇಲ್ಲದ ವಾಹನಗಳನ್ನು ತಕ್ಷಣ ಪತ್ತೆಹಚ್ಚಿ ಇ-ಚಲನ್ ರವಾನಿಸಲಾಗುತ್ತದೆ.
ಪೊಲೀಸರಿಗೆ ವಿಶೇಷ ಮೊಬೈಲ್ ಆಪ್ ಅಥವಾ ತಂತ್ರಜ್ಞಾನ ಆಧಾರಿತ ಸಾಧನಗಳನ್ನು ನೀಡಲಾಗುವುದು. ಸ್ಥಳದಲ್ಲೇ ವಾಹನದ ವಿಮೆ ಸ್ಥಿತಿಗತಿಯನ್ನು ಭೌತಿಕ ದಾಖಲೆಗಳಿಲ್ಲದೆ ಪರಿಶೀಲಿಸಲು ಇದು ನೆರವಾಗಲಿದೆ.
ಕಡ್ಡಾಯ ಥರ್ಡ್ ಪಾರ್ಟಿ ವಿಮೆ ಅವಧಿಯನ್ನು ೩ ವರ್ಷಗಳಿಂದ ೪ ವರ್ಷಗಳಿಗೆ ಹೆಚ್ಚಿಸಲು ಪ್ರಸ್ತಾಪ. ವಿಮೆ ಅವಧಿಯನ್ನು ೫ ವರ್ಷಗಳಿಂದ ೬ ವರ್ಷಗಳಿಗೆ ಏರಿಸಿವುದನ್ನು ಸುಪ್ರೀಂ ಪ್ರಸ್ತಾಪಿಸಿದೆ.
ಪ್ರಸ್ತುತ ಇದು ಪ್ರಾಯೋಗಿಕ ಹಂತದ ಪ್ರಸ್ತಾಪವಾಗಿದ್ದು, ಪೆಟ್ರೋಲ್ ಪಂಪ್‌ಗಳ ದೈನಂದಿನ ಕಾರ್ಯನಿರ್ವಹಣೆಗೆ ತೊಂದರೆಯಾಗದಂತೆ ಇದನ್ನು ಹೇಗೆ ಅನುಷ್ಠಾನಗೊಳಿಸಬಹುದು ಎಂಬುದರ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಲಿದ್ದಾರೆ.
ದಂಡ ಮತ್ತಷ್ಟು ಕಠಿಣ?
ಮಾನ್ಯ ಥರ್ಡ್ ಪಾರ್ಟಿ ವಿಮೆ ಇಲ್ಲದೆ ವಾಹನ ಚಲಾಯಿಸುವವರ ವಿರುದ್ಧ ಮೋಟಾರು ವಾಹನ ಕಾಯ್ದೆಯಡಿ ಕಠಿಣ ಕ್ರಮ ಕೈಗೊಳ್ಳುವ ಅಗತ್ಯವನ್ನು ಒತ್ತಿ ಹೇಳಲಾಗಿದೆ. ಪ್ರಸ್ತಾವಿತ ದಂಡವನ್ನು ೫,೦೦೦ ಅಥವಾ ವಾರ್ಷಿಕ ವಿಮಾ ಪ್ರೀಮಿಯಂನ ಮೂರು ಪಟ್ಟು ವಿಧಿಸುವ ಕುರಿತು ಚರ್ಚೆ ನಡೆದಿದೆ.
ಹೊಸ ವಾಹನಗಳ ವಿಮಾ ಅವಧಿ ಹೆಚ್ಚಳ
ಹೊಸ ಕಾರುಗಳಿಗೆ ಥರ್ಡ್ ಪಾರ್ಟಿ ವಿಮೆಯ ಅವಧಿಯನ್ನು ೩ ವರ್ಷದಿಂದ ೪ ವರ್ಷಕ್ಕೆ, ಹೊಸ ದ್ವಿಚಕ್ರ ವಾಹನಗಳಿಗೆ ೫ ವರ್ಷದಿಂದ ೬ ವರ್ಷಕ್ಕೆ ಹೆಚ್ಚಿಸುವ ಪ್ರಸ್ತಾವನೆಯೂ ಇದೆ.
ಇದರ ಜತೆಗೆ ಸಾಮಾನ್ಯ ವಾಹನ ಮಾಲೀಕರಿಗೂ ಸುಲಭವಾಗಿ ಅರ್ಥವಾಗುವಂತಹ ಸರಳ ವಿಮಾ ಯೋಜನೆಗಳನ್ನು ರೂಪಿಸುವಂತೆ IಖಆಂIಗೆ ಸೂಚಿಸಲಾಗಿದೆ. ವಿಮಾ ಪಾಲಿಸಿಗಳ ನಿಯಮಗಳು ಮತ್ತು ಷರತ್ತುಗಳನ್ನು ಜನಸಾಮಾನ್ಯರಿಗೆ ಗೊಂದಲವಾಗದ ರೀತಿಯಲ್ಲಿ ಸರಳಗೊಳಿಸುವುದು ಪ್ರಮುಖ ಉದ್ದೇಶವಾಗಿದೆ.
ಅಪಘಾತ ಸಂತ್ರಸ್ತರ ಹಿತಾಸಕ್ತಿ ಮುಖ್ಯ
ರಸ್ತೆ ಅಪಘಾತಗಳಲ್ಲಿ ಸಂತ್ರಸ್ತರಾಗುವವರಿಗೆ ಕಾನೂನು ಮತ್ತು ಆರ್ಥಿಕ ರಕ್ಷಣೆ ದೊರೆಯುವಂತೆ ಮಾಡುವುದೇ ಥರ್ಡ್ ಪಾರ್ಟಿ ವಿಮೆಯ ಪ್ರಮುಖ ಉದ್ದೇಶವಾಗಿದೆ. ದೇಶದಲ್ಲಿ ವಿಮೆ ಇಲ್ಲದೆ ಸಂಚರಿಸುವ ವಾಹನಗಳ ಸಂಖ್ಯೆಯನ್ನು ಕಡಿಮೆ ಮಾಡಿ, ರಸ್ತೆ ಸುರಕ್ಷತೆ ಹಾಗೂ ವಿಮಾ ಪಾಲನೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಈ ಕ್ರಮಗಳನ್ನು ಪರಿಗಣಿಸಲಾಗಿದೆ.
ಆದರೆ ಸಾರ್ವಜನಿಕರು ಗಮನಿಸಬೇಕಾದ ಅಂಶವೆಂದರೆ, ‘ವಿಮೆ ಇಲ್ಲ ಇಂಧನವಿಲ್ಲ’ ನಿಯಮವು ಸದ್ಯ ದೇಶಾದ್ಯಂತ ಜಾರಿಯಾಗಿಲ್ಲ. ಕೇಂದ್ರ ಸರ್ಕಾರ, ಒoಖಖಿಊ ಮತ್ತು IಖಆಂI ರೂಪುರೇಷೆ ಅಂತಿಮಗೊಳಿಸಿ ಅಧಿಕೃತ ಅಧಿಸೂಚನೆ ಹೊರಡಿಸಿದ ನಂತರವಷ್ಟೇ ಹೊಸ ವ್ಯವಸ್ಥೆಯ ಜಾರಿ ಸಾಧ್ಯವಾಗಲಿದೆ.


































