
ವಿಜಯಪುರ, ಜು೧೨: ಬಿ.ಎಲ್.ಡಿ.ಇ. ಸಂಸ್ಥೆಯ ವಚನ ಪಿತಾಮಹ ಡಾ. ಪಿ. ಜಿ. ಹಳಕಟ್ಟಿ ಇಂಜಿನಿಯರಿAಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯದ ಎಂ.ಬಿ.ಎ. ವಿಭಾಗ, ಆರ್ಯನ್ ಡಿಜಿಟಲ್ ಲ್ಯಾಬ್, ವಿಜಯಪುರ, ಹಾಗೂ ನೈಕಾನ್ ಸ್ಕೂಲ್ ಇಂಡಿಯಾ ಇವರ ಸಹಯೋಗದಲ್ಲಿ “ನೈಕಾನ್ ಮಿರರ್‌ಲೆಸ್ ತಂತ್ರಜ್ಞಾನ” ಕುರಿತು ವಿಶೇಷ ಕಾರ್ಯಾಗಾರವನ್ನು ಜುಲೈ ೧೪ ರಂದು ಮಂಗಳವಾರ ಬೆಳಿಗ್ಗೆ ೧೦.೩೦ ರಿಂದ ಮಧ್ಯಾಹ್ನ ೩.೩೦ ರವರೆಗೆ ಇಂಜಿನಿಯರಿAಗ್ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಈ ಕಾರ್ಯಾಗಾರದ ಉದ್ದೇಶ ನೈಕಾನ್‌ನ ಅತ್ಯಾಧುನಿಕ ಮಿರರ್‌ಲೆಸ್ ಕ್ಯಾಮೆರಾ ತಂತ್ರಜ್ಞಾನದ ಕುರಿತು ಪ್ರಾಯೋಗಿಕ ಅನುಭವವನ್ನು ನೀಡುವುದಾಗಿದೆ. ಛಾಯಾಗ್ರಹಣದ ಸೈದ್ಧಾಂತಿಕ ಜ್ಞಾನ ಮತ್ತು ಉದ್ಯಮದಲ್ಲಿನ ಪ್ರಾಯೋಗಿಕ ಬಳಕೆಯ ನಡುವಿನ ಅಂತರವನ್ನು ಕಡಿಮೆ ಮಾಡುವುದರ ಜೊತೆಗೆ ವಿದ್ಯಾರ್ಥಿಗಳು ಹಾಗೂ ಛಾಯಾಗ್ರಹಣ ಆಸಕ್ತರಿಗೆ ಆಧುನಿಕ ಇಮೇಜಿಂಗ್ ತಂತ್ರಜ್ಞಾನಗಳ ಬಗ್ಗೆ ಸಮಗ್ರ ಅರಿವು ಮೂಡಿಸುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ.
ಈ ವಿಶೇಷ ತರಬೇತಿಯನ್ನು ನೈಕಾನ್‌ನ ಖ್ಯಾತ ಕಂಟೆAಟ್ ಕ್ರಿಯೇಟರ್ ಶ್ರೀ ಜೋಯೆಲ್ ಶಮನ್ ಡಿ’ ಸೋಜಾ ಮತ್ತು ಶ್ರೀ ಧ್ರುವ ಎಂ. ಪಾಟೀಲ, ಸದಸ್ಯರು, ಕರ್ನಾಟಕ ವನ್ಯಜೀವಿ ಮಂಡಳಿ ಹಾಗೂ ಅಧ್ಯಕ್ಷರು, ಸೊಸೈಟಿ ಫಾರ್ ಪ್ರೊಟೆಕ್ಷನ್ ಆಫ್ ಪ್ಲಾ÷್ಯಂಟ್ಸ್ ಆ?ಯಂಡ್ ಎನಿಮಲ್ಸ್ ಇವರು ನಡೆಸಿಕೊಡಲಿದ್ದು, ವನ್ಯಜೀವಿಗಳ ಭಾವಚಿತ್ರ ಪ್ರಯಾಣ ಹಾಗೂ ವಾಣಿಜ್ಯ ಛಾಯಾಗ್ರಹಣದಲ್ಲಿ ನೈಕಾನ್ ಮಿರರ್‌ಲೆಸ್ ಕ್ಯಾಮೆರಾಗಳ ಬಳಕೆಯ ಕುರಿತು ತಮ್ಮ ವೃತ್ತಿಪರ ಅನುಭವಗಳು, ಸೃಜನಾತ್ಮಕ ತಂತ್ರಗಳು ಹಾಗೂ ಉಪಯುಕ್ತ ಮಾಹಿತಿಯನ್ನು ಹಂಚಿಕೊಳ್ಳಲಿದ್ದಾರೆ. ಭಾಗವಹಿಸುವವರು ಕ್ಯಾಮೆರಾ ನಿರ್ವಹಣೆ, ಅತ್ಯಾಧುನಿಕ ಆಟೋಫೋಕಸ್ ತಂತ್ರಜ್ಞಾನ, ವಿಡಿಯೋ ಸಾಮರ್ಥ್ಯಗಳು, ಲೆನ್ಸ್ ಆಯ್ಕೆ, ಹಾಗೂ ಡಿಜಿಟಲ್ ಕಂಟೆAಟ್ ಕ್ರಿಯೇಷನ್ ಕಾರ್ಯವಿಧಾನಗಳ ಕುರಿತು ಪ್ರಾಯೋಗಿಕ ಜ್ಞಾನವನ್ನು ಪಡೆಯಬಹುದು.
ಈ ಕಾರ್ಯಾಗಾರವು ಉದ್ಯಮದ ಪರಿಣಿತರೊಂದಿಗೆ ನೇರ ಸಂವಾದ ನಡೆಸಲು, ನಿಕಾನ್‌ನ ಇತ್ತೀಚಿನ ಮಿರರ್‌ಲೆಸ್ ಕ್ಯಾಮೆರಾಗಳನ್ನು ಅನುಭವಿಸಲು ಹಾಗೂ ಡಿಜಿಟಲ್ ಛಾಯಾಗ್ರಹಣ ಮತ್ತು ದೃಶ್ಯ ಕಥನ (ಗಿisuಚಿಟ Sಣoಡಿಥಿಣeಟಟiಟಿg) ಕ್ಷೇತ್ರದಲ್ಲಿನ ಹೊಸ ಪ್ರವೃತ್ತಿಗಳನ್ನು ತಿಳಿದುಕೊಳ್ಳಲು ಅಪರೂಪದ ಅವಕಾಶವನ್ನು ಒದಗಿಸುತ್ತದೆ.
ಆಸಕ್ತ ವಿದ್ಯಾರ್ಥಿಗಳು, ಛಾಯಾಗ್ರಹಣ ಪ್ರೇಮಿಗಳು ಹಾಗೂ ಸೃಜನಶೀಲ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವವರು ಭಾಗವಹಿಸಬಹುದು. ಪ್ರವೇಶ ಉಚಿತವಿದ್ದು ಹೆಸರನ್ನು ನೋಂದಾಯಿಸಲು ಡಾ|| ಮುರುಗೇಶ ಪಟ್ಟಣಶೆಟ್ಟಿ, ಮೋ:೯೭೩೯೩೧೭೪೦೮ ಇವರನ್ನು ಸಂಪರ್ಕಿಸಬಹುದು.































