ಕಲಬುರಗಿ: ನಗರದ ಡಾ ಎಸ್.ಎಂ ಪಂಡಿತರಂಗ ಮಂದಿರದಲ್ಲಿಂದು ಪರಿವರ್ತನಾ ಪ್ರತಿಷ್ಠಾನ ಮತ್ತು ವಿಶ್ವ ಸಾಮರಸ್ಯ ವೇದಿಕೆವತಿಯಿಂದ ವಿಶ್ವಗುರು ಬಸವಣ್ಣನವರ ಜಯಂತ್ಯುತ್ಸವ ಹಮ್ಮಿಕೊಳ್ಳಲಾಯಿತು. ಉದ್ಘಾಟನಾ ಸಮಾರಂಭದ ವೇದಿಕೆಯಲ್ಲಿ ಪೂಜ್ಯ ಡಾ.ಸಿದ್ಧರಾಮ ಬೆಲ್ದಾಳ ಶರಣರು,ಪೂಜ್ಯ ಮಲ್ಲಣ್ಣಪ್ಪ ಮಹಾಸ್ವಾಮಿಗಳು,ಗುರುಮಾತಾ ನಂದಾತಾಯಿ,ಹಜರತ್ ಸೈಯದ್ ಶಾಹಾ ಮುಸ್ತಾಫ್ ಖಾದ್ರಿ,ಮೊಹ್ಮದ್ ಮೌಲಾಲಿ ಮುತ್ತ್ಯಾ,ಅರ್ಜುನ ಹತ್ತಿ,ಡಾ.ವಿಶ್ವನಾಥ ಅವರು ಸೇರಿದಂತೆ ಹಲವರು ಉಪಸ್ಥಿತರಿದ್ದರು.