
ಯಾದಗಿರಿ: ಸಮೀಪದ ಮುದ್ನಾಳ್ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2026-27ನೇ ಸಾಲಿನ ನೂತನ ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ (ಎಸ್‍ಡಿಎಂಸಿ)ಯನ್ನು ಗುರುವಾರ ರಚಿಸಲಾಯಿತು.
ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಹಾಗೂ ಪಾಲಕರ ಸಮ್ಮುಖದಲ್ಲಿ ಸಭೆ ನಡೆಸಿ, ಮಕ್ಕಳ ಸಂಖ್ಯೆಯ ಅನುಪಾತ ಹಾಗೂ ಜಾತಿವಾರು ಮೀಸಲಾತಿಯನ್ವಯ ಸಮಿತಿ ರಚನೆ ಕುರಿತು ಚರ್ಚಿಸಲಾಯಿತು. ಪಾಲಕರು ಹಾಗೂ ಪೆÇೀಷಕರ ಒಮ್ಮತದ ನಿರ್ಣಯದಂತೆ ಹನುಮಂತರೆಡ್ಡಿ ಗೌಡ ಮುದ್ನಾಳ್ ಅವರನ್ನು ಅಧ್ಯಕ್ಷರಾಗಿ ಹಾಗೂ ದಶರಥ ಅವರ ಪತ್ನಿ ಇಂದಿರಾಬಾಯಿ ಅವರನ್ನು ಉಪಾಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು.
ನಂತರ ಸದಸ್ಯರನ್ನು ಆಯ್ಕೆ ಮಾಡಿ ನೂತನ ಎಸ್‍ಡಿಎಂಸಿ ಸಮಿತಿಯನ್ನು ಅಂತಿಮಗೊಳಿಸಲಾಯಿತು. ಸಭೆಯಲ್ಲಿ ಶಾಲೆಯ ಮೂಲಭೂತ ಸೌಕರ್ಯಗಳ ಸುಧಾರಣೆ, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಹಾಗೂ ಶಾಲೆಯ ಸಮಗ್ರ ಅಭಿವೃದ್ಧಿಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯಶಿಕ್ಷಕಿ ಲಲಿತಾಪರಮೇಶ್ವರಿ, ಸಹ ಶಿಕ್ಷಕರು, ಪ್ರೌಢಶಾಲೆಯ ಪ್ರಭಾರಿ ಮುಖ್ಯಶಿಕ್ಷಕ ಜ್ಞಾನಪ್ಪ, ಪ್ರೌಢಶಾಲಾ ಎಸ್‍ಡಿಎಂಸಿ ಅಧ್ಯಕ್ಷ ಸಾಯಿಬಣ್ಣ ಪೂಜಾರಿ, ನೂತನ ಸಮಿತಿ ಸದಸ್ಯರಾದ ಸಂಜು ತಂದೆ ಪಾಂಡು, ರಾಜು ತಂದೆ ಭೀಮಸಿಂಗ್, ಹನುಮಂತ ತಂದೆ ಯಲ್ಲಪ್ಪ, ಭೀಮರಾಯ ತಂದೆ ಹನುಮಂತ, ಗಣೇಶ್ ತಂದೆ ಕಾಶಿನಾಥ, ಜ್ಯೋತಿ ತಂದೆ ಬಸವರಾಜ್, ವೆಂಕಮ್ಮ ತಂದೆ ವೆಂಕಟೇಶ್, ಕಮಲಮ್ಮ ತಂದೆ ಹನುಮಂತ, ಶರಣಪ್ಪ ತಂದೆ ಹನುಮಂತ, ಲಕ್ಷ್ಮಣ ತಂದೆ ತಿಮ್ಮಣ್ಣ, ಶರಣಮ್ಮ ಗಂಡ ಶರಣಪ್ಪ, ಮಹೇಶ್ವರಿ ಗಂಡ ಮಹೇಶ್, ಸಾಬರೆಡ್ಡಿ ತಂದೆ ಶರಣಪ್ಪ, ಪಾರ್ವತಿ ಗಂಡ ವೆಂಕಟೇಶ್, ಸೋಫಿಯಾಬಿ ಗಂಡ ಕಾಶಿಮ್ ಅಲಿ ಹಾಗೂ ಗ್ರಾಮದ ಹಿರಿಯ ಮುಖಂಡರಾದ ದಂಡಪ್ಪ, ಶರಣಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕೈಲಾಸಪತಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.





























