Home ಜಿಲ್ಲೆ ರಾಷ್ಟಿçÃಯ ಪೋಷಣ ಅಭಿಯಾನ ಕಾರ್ಯಕ್ರಮ

ರಾಷ್ಟಿçÃಯ ಪೋಷಣ ಅಭಿಯಾನ ಕಾರ್ಯಕ್ರಮ

ಚನ್ನಮ್ಮನ ಕಿತ್ತೂರು,ಸೆ೨ : ಕೇವಲ ಸರ್ಕಾರದಿಂದ ದೇಶವನ್ನು ಅಪೌಷ್ಟಿಕತೆಯಿಂದ ಮುಕ್ತಗೊಳಿಸಲು ಸಾಧ್ಯವಿಲ್ಲ. ಇದಕ್ಕೆ ನಮ್ಮೆಲ್ಲರ ಸಹಕಾರ ಅಗತ್ಯವಿದೆ ಎಂದು ಜೆಎಂಎಫ್‌ಸಿ ನ್ಯಾಯಾಧೀಶ ಮೊಹಮ್ಮದಲಿ ನಾಯಕ ಅಭಿಪ್ರಾಯಪಟ್ಟರು.


ಸ್ಥಳೀಯ ಗುರುಭವನದಲ್ಲಿ ಕಾನುನೂ ಅರಿವು-ನೇರವು ಹಾಗೂ ಶಿಶು ಅಭಿವೃದ್ದಿ ಯೋಜನೆ ಮತ್ತು ಆರೋಗ್ಯ ಇಲಾಖೆ, ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯ ಇವರುಗಳ ಸಂಯುಕ್ತಾಶ್ರಯದಲ್ಲಿ ರಾಷ್ಟಿçÃಯ ಪೋಷಣ ಅಭಿಯಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ದೀಪ ಬೆಳಗಿಸಿ ಮಾತನಾಡಿದರು. ನಾವು ಜಂಕ್ ಫುಡ್‌ಗಳನ್ನು (ಕರಿದ, ಸಂಸ್ಕರಿಸಿದ ಆಹಾರಗಳು) ತ್ಯಜಿಸಿ, ನಮ್ಮ ದಿನನಿತ್ಯದ ಆಹಾರದಲ್ಲಿ ತರಕಾರಿ, ಹಣ್ಣು, ಧಾನ್ಯಗಳು ಮತ್ತು ಹಾಲು ಬಳಸಬೇಕು. ಮಕ್ಕಳಿಗೆ, ಬಾಣಂತಿಯರಿಗೆ ಪೌಷ್ಠಿಕ ಆಹಾರ ನೀಡಬೇಕು. ಅಂದಾಗ ತಾಯಿ-ಮಗು ಬೆಳೆಯಲು ಸಹಕಾರಿಯಾಗುತ್ತದೆ. ಸದೃಢ ದೇಹದಲ್ಲಿ ಸದೃಢ ಮನಸ್ಸಿರುತ್ತದೆ. ಆರೋಗ್ಯವಂತ ಮಕ್ಕಳೇ ಈ ದೇಶದ ಭವಿಷ್ಯ. ನಾವೆಲ್ಲರೂ ಸೇರಿ ಪೌಷ್ಟಿಕ ಆಹಾರವನ್ನು ಸೇವಿಸುವ ಮತ್ತು ಆರೋಗ್ಯ ಭಾರತವನ್ನು ನಿರ್ಮಿಸುವ ಸಂಕಲ್ಪ ಮಾಡೋಣ. ಎಂದು ತಾಯಂದಿರಿಗೆ-ಮಕ್ಕಳಿಗೆ ಕಿವಿಮಾತು ಹೇಳಿದರು.


ತಾಲೂಕಾ ಶಿಶು ಅಭಿವೃದ್ದಿ ಯೋಜನಾಧಿಕಾರಿ ಅರುಣಕುಮಾರ ಮಾತನಾಡಿ ಸೆ. ೧ ರಂದು ಉತ್ತರಪ್ರದೇಶ ವಾರಣಾಸಿಯಲ್ಲಿ ಈ ಅಭಿಯಾನ ಪ್ರಾರಂಭವಾಗಿದ್ದು ದೇಶಾಧ್ಯಂತ ಆಚರಿಸುತ್ತಾರೆ. ತಾಯಿ ಗರ್ಭಿಣಿಯಾದ ತಕ್ಷಣ ಪೌಷ್ಠಿಕ ಆಹಾರ ನೀಡಬೇಕು. ಇದರಿಂದ ಮಗುವಿನ ಒಳ್ಳೆಯ ಬೆಳವಣಿಗೆಯಾಗುತ್ತದೆ. ಮಗು ಉತ್ತಮ ಆರೋಗ್ಯವಂತನಾಗಬೇಕಾದರೆ ಉತ್ತಮ ಆಹಾರ ಸೇವಿಸಬೇಕು. ಆದ್ದರಿಂದ ಸರ್ಕಾರ ಶಾಲೆಗಳಲ್ಲಿ ಒಳ್ಳೋಳ್ಳೆಯ ಪೌಷ್ಠಿಕ ಆಹಾರ ನೀಡುತ್ತಿದ್ದು ಅದರ ಸದುಪಯೋಗವಾಗಬೇಕು. ಸ್ತಿçÃಯರು ಬೆಳೆಯುವ ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿವಹಿಸಬೇಕೆಂದು ಸಲಹೆ ನೀಡಿದರು.


ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಶ್ರೀಮತಿ ಆಶಾ ಮಾತನಾಡಿ ಪೌಷ್ಟಿಕ ಆಹಾರ ಉಪಯೋಗಿಸಿ ಗರ್ಭಿಣಿಯರು ನಿಮ್ಮ ಶರೀರದ ಕಾಳಜಿವಹಿಸಿಕೊಳ್ಳಬೇಕು. ಹುಟ್ಟುವ ಮಗು ಸದೃಢವಾಗಿ ಹುಟ್ಟುತ್ತದೆ. ಸರ್ಕಾರದಿಂದ ಒಳ್ಳೋಳ್ಳೆಯ ಔಷಧಿಯೊಂದಿಗೆ ಪೌಷ್ಟಿಕ ಆಹಾರ ದೊರೆಯುತ್ತಿದ್ದು ಅದರ ಲಾಭ ಪಡೆದುಕೊಳ್ಳಿ. ಪೋಷಣೆ ಪ್ರತಿಯೊಬ್ಬರ ಹಕ್ಕು. ಆರೋಗ್ಯ ಪ್ರತಿಯೊಂದು ಕುಟುಂಬದ ಸಂಪತ್ತು. ಈ ಸಂದೇಶವನ್ನು ಸಮಾಜಕ್ಕೆ ತಲುಪಿಸುವ ನಮ್ಮೇಲ್ಲರ ಜವಾಬ್ದಾರಿಯಾಗಿದೆ. ಪೋಷಣೆಯ ಮಹತ್ವ ಅರಿಯೋಣ. ಆರೋಗ್ಯವಂತ ಪಿಳಿಗೆ ನಿರ್ಮಿಸೋಣ. ಸಮೃದ್ದ ಭಾರತ ನಿರ್ಮಾಣಕ್ಕೆ ಕೈಜೋಡಿಸೋಣ ಎಂದರು.
ನ್ಯಾಯವಾದಿ ಶಿವಾನಂದ ಬೋಗೂರ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು. ಸರ್ಕಾರಿ ಪದವಿಪೂರ್ವ ಮಹಾವಿದ್ಯಾಲಯ ಪ್ರೌಶುಂಪಾಲ ಹಾಗೂ ಮಾಜಿ ಸೈನಿಕ ಸೋಮಪ್ಪ ಪೆಟೆಂದ, ಬೆಳಗಾವಿ ಉಪನಿರ್ದೇಶಕರ ಕಛೇರಿ ಲೆಕ್ಕಪರಿಶೋಧಕಿ ಜಯಶ್ರೀ ಚಚಡಿ, ನ್ಯಾಯವಾದಿ ತಳವಾರ ರಾಷ್ಟಿçÃಯ ಪೋಷಣ ಅಭಿಯಾನ ಕುರಿತು ಮಾತನಾಡಿದರು.


ಹಿರಿಯ ನ್ಯಾಯವಾದಿ ಜಗದೀಶ ಬಿಕ್ಕಣ್ಣವರ, ಕ್ಷೇತ್ರ ಸಮನ್ವಯ ಅಧಿಖಾರಿ ಎಸ್.ಎಸ್.ಪಾಟೀಲ, ತಾಪಂ ಸಹಾಯಕ ಅಧಿಖಾರಿ ಶ್ರೀಗಿರೀಶ, ಸ್ವಾತಿ ಕುರಬರ, ತಾಲೂಕ ಶಿಶು ಅಭಿವೃದ್ದಿ ಯೋಜನೆ ಸಹಾಯಕ ಅಧಿಕಾರಿ ಶ್ರೀದೇವಿ ಕುಂತೋಜಿ ನಿರೂಪಿಸಿ ಮಾತನಾಡಿದರು. ಶಿಕ್ಷಕಿ ಹಾಲಪ್ಪನವರ ಸ್ವಾಗತಿಸಿದರು. ಸುರಗಿಮಠ, ವಿದ್ಯಾರ್ಥಿಯಿಂದ ಪ್ರಾರ್ಥನೆ ನೇರವೇರಿತು. ಪೋಲಿಸ್ ಇಲಾಖೆ, ಆಶಾ-ಅಂಗನವಾಡಿ, ಗರ್ಭಿಣಿಯರು, ಮಕ್ಕಳಿದ್ದರು.