Home ಜಿಲ್ಲೆ ಕಲಬುರಗಿ ಜಿಮ್ಸ್ ಆಸ್ಪತ್ರೆಯಲ್ಲಿ ನಾಡಪ್ರಭು ಕೆಂಪೇಗೌಡರ ಜಯಂತಿ

ಜಿಮ್ಸ್ ಆಸ್ಪತ್ರೆಯಲ್ಲಿ ನಾಡಪ್ರಭು ಕೆಂಪೇಗೌಡರ ಜಯಂತಿ

ಕಲಬುರಗಿ ಜೂ 27. ನಗರ ದ ಜಿಮ್ಸ್ ಆಸ್ಪತ್ರೆಯ ಶಸ್ತ್ರಜ್ಞರು ಹಾಗೂ ಅಧಿಕ್ಷಕರ ಕಚೇರಿಯಲ್ಲಿ ನಾಡಪ್ರಭು ಕೆಂಪೇಗೌಡರ ಜಯಂತಿಯ ವಿಶೇಷವಾಗಿ. ಭಾವಚಿತ್ರಕ್ಕೆ ಮಾಲಾರ್ಪಣೆ ಮತ್ತು ಪೂಜೆ ಸಲ್ಲಿಸುವ ಮೂಲಕ ಮಾತನಾಡಿದ ಪ್ರಭಾರ ಶಸ್ತ್ರಜ್ಞರು ಹಾಗೂ ಅಧಿಕ್ಷಕರು ಡಾ ಓಂ ಪ್ರಕಾಶ್ ಆಬೂರೆ, ಕರ್ನಾಟಕದ ಹೆಮ್ಮೆಯ ನಿರ್ಮಾತೃ, ದೂರದೃಷ್ಟಿಯ ನಾಯಕ ಹಾಗೂ ಆಧುನಿಕ ಬೆಂಗಳೂರಿನ ಸಂಸ್ಥಾಪಕರಾದ ನಾಡಪ್ರಭು ಕೆಂಪೇಗೌಡ ಅವರ ಜಯಂತಿಯಂದು ಅವರಿಗೆ ಗೌರವಪೂರ್ವಕ ನಮನಗಳು ಸಲ್ಲಿಸಿ.ಜನಸೇವೆಯ ಆದರ್ಶ, ಉತ್ತಮ ಆಡಳಿತ ಮತ್ತು ಅಭಿವೃದ್ಧಿಯ ಕನಸನ್ನು ನನಸಾಗಿಸಿದ ಅವರ ಕೊಡುಗೆಗಳು ಸದಾ ಸ್ಮರಣೀಯ.ದೂರದೃಷ್ಟಿ, ಶ್ರಮ ಮತ್ತು ಜನಪರ ಆಡಳಿತದ ಪ್ರತೀಕ – ನಾಡಪ್ರಭು ಕೆಂಪೇಗೌಡರು ಅವರ ಆದರ್ಶಗಳು ನಮ್ಮೆಲ್ಲರಿಗೂ ಸ್ಫೂರ್ತಿಯಾಗಲಿ.ಎಂದು ಹೇಳಿದರು
ಪ್ರಮುಖರಾದ ಓ ಪಿ ಡಿ ಸರ್ಜನ್ ಡಾ. ಶಾಲಾನಿ ಸಜ್ಜನಶೆಟ್ಟಿ . ಡಾ ಜಯ ಎಸ್ ಗಣಜಲಖೇಡ್. ಜಿಲ್ಲಾ ಸೈಕ್ಯಾಟ್ರಿಕ್ ಕೌನ್ಸಿಲರ್ ಮಂಜುನಾಥ ಕಂಬಾಳಿಮಠ. ಗಣಕ ಯಂತ್ರ ಸಹಾಯಕರು ಸುರೇಖಾ ದಿವಾಟಾಗಿ. ಪಾರ್ವತಿ. ಮತ್ತು ಕೈಲಾಶ್. ಮರ್ಗೆ. ಕಾಶೀನಾಥ್ ಹಾಗೂ ಇತರರು ಇದ್ದರು.