Home ಜಿಲ್ಲೆ ಕಲಬುರಗಿ ಸಂಗೀತದಿಂದ ಮನಸ್ಸಿಗೆ ನೆಮ್ಮದಿ,ಭಾವನಾತ್ಮಕತೆ

ಸಂಗೀತದಿಂದ ಮನಸ್ಸಿಗೆ ನೆಮ್ಮದಿ,ಭಾವನಾತ್ಮಕತೆ

ಕಲಬುರಗಿ :ಜೂ.18: ಸಂಗೀತವು ಕೇವಲ ಮನೋರಂಜನೆಯ ಮಾಧ್ಯಮವಲ್ಲ, ಇದು ಮನಸಿಗೆ ನೆಮ್ಮದಿ ನೀಡುವುದರ ಜೊತೆಗೆ ಭಾವನಾತ್ಮಕವಾಗಿ ಜನರನ್ನು ಬೆಸೆಯುವ ಕೊಂಡಿಯಾಗಿದೆ ಎಂದು ಕರ್ನಾಟಕ ನವ ನಿರ್ಮಾಣ ಸೇನೆ ಅಧ್ಯಕ್ಷರು ಹಾಗೂ ಕರ್ನಾಟಕ ಪೊಲೀಸ್ ಮಹಾಸಂಘ ಕಲಬುಗಿ ಅಧ್ಯಕ್ಷರಾದ ರವಿ ಎನ್. ದೇಗಾಂವ ಹೇಳಿದರು.
ಗುರುಬಸವ ನಗರದ ಶ್ರೀ ಶಿವ ಮಂದಿರ ದೇವಸ್ಥಾನದಲ್ಲಿ ರವಿವಾರ ನಡೆದ ಜಯ ಭುವನೇಶ್ವರಿ ಸಾಂಸ್ಕøತಿಕ ಕಲಾ ಸಂಸ್ಥೆ ಭೀಮಳ್ಳಿ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ನಡೆದ ಸಾಂಸ್ಕøತಿಕ ಸೌರಭ ಸಾಂಸ್ಕøತಿಕ ಕಾರ್ಯಕ್ರವನ್ನು ಉದ್ಘಾಟಿಸಿ ಮಾತನಾಡಿದರು. ಸಂಗೀತವು ಸಮಾಜದ ಆರೋಗ್ಯವನ್ನು ಉತ್ತಮಗೊಳಿಸುತ್ತದೆ. ಮಾನಸಿಕ ಒತ್ತಡ ಕಡಿಮೆ ಮಾಡಲು ಮತ್ತು ಖಿನ್ನತೆಯಿಂದ ಹೊರ ಬರಲು ಅತ್ಯುತ್ತಮ ಔಷಧಿಯಾಗಿದೆ. ಸಂಗೀತಕ್ಕೆ ಯಾವುದೇ ಭಾಷೆ, ಜಾತಿ ಮತ್ತು ಧರ್ಮದ ಎಲ್ಲೆಗಳಿಲ್ಲ. ಜನರ ನಡುವಿನ ಭಿನ್ನಾಭಿಪ್ರಾಯಗಳನ್ನು ಮರೆಸಿ, ಎಲ್ಲರನ್ನೂ ಭಾವನಾತ್ಮಕವಾಗಿ ಬೆಸೆಯುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಮುಖಂಡರಾದ ವೇ.ಮೂ. ವೀರಯ್ಯಸ್ವಾಮಿ ಬೀದಿಮನಿ, ಕರ್ನಾಟಕ ನವ ನಿರ್ಮಾಣ ಸೇನೆಯ ಉಪಾಧ್ಯಕ್ಷ ಪ್ರಶಾಂತ ವಿ.ಮಠಪತಿ, ಹಿರಿಯ ಮುಖಂಡ ಗುರಣ್ಣ ಚಿಣಮಗೇರಿ, ಲಿಂಗಣ್ಣ ರೆಡ್ಡಿ, ಅಮೃತರಾವ ಅತನೂರ, ಬಾಬುರಾವ ಸಗರಗುಂಟೆ ಮತ್ತು ಶರಣಗೌಡ ಪೋಲಿಸ್ ಪಾಟೀಲ ವೇದಿಕೆ ಮೇಲಿದ್ದರು.
ಕಲಾವಿದರಾದ ಹಣಮಂತರಾವ ಕುಲಕರ್ಣಿ ಮಳ್ಳಿ, ಅಣ್ಣಾರಾವ ಶಳ್ಳಗಿ ಮತ್ತಿಮೂಡ, ಸೈದಪ್ಪ ಸಪ್ಪನಗೋಳ ಚೌಡಾಪೂರ, ಪವಿತ್ರಾ ವಿ. ರಾಜನಾಳ, ಚೇತನ ಬೀದಿಮನಿ, ಗುರುಶಾಂತಯ್ಯ ಸ್ಥಾವರಮಠ, ಆನಂದ ಚಿಣಮಗೇರಿ, ರೇವಣಸಿದ್ದ ದೇ.ಕಲ್ಲೂರ, ವೀರಭದ್ರಯ್ಯ ಜಿ.ಎಸ್. ಇವರಿಂದ ವಿಶೇಷ ಸಂಗೀತ ಕಾರ್ಯಕ್ರಮ ಜರುಗಿತು.
ತೋಟಯ್ಯ ಶಾಸ್ತ್ರೀ ನಿರೂಪಿಸಿದರು, ಸಂಸ್ಥೆಯ ಕಾರ್ಯದರ್ಶಿ ಉದಯಕುಮಾರ ಮಠಪತಿ ಸ್ವಾಗಿತಿಸಿದರೆ, ಅಧ್ಯಕ್ಷೆ ವನಿತಾ ಮಠಪತಿ ವಂದಿಸಿದರು.