Home ಕ್ರೈಂ ಸುದ್ದಿಗಳು ಜೀರಗ್ಯಾಳದಲ್ಲಿ ಮೇಕೆ ಮೇಯಿಸಿದ ವಿಚಾರಕ್ಕೆ ಕೊಲೆ: 4 ಆರೋಪಿಗಳ ಬಂಧನ

ಜೀರಗ್ಯಾಳದಲ್ಲಿ ಮೇಕೆ ಮೇಯಿಸಿದ ವಿಚಾರಕ್ಕೆ ಕೊಲೆ: 4 ಆರೋಪಿಗಳ ಬಂಧನ

ಬೀದರ್: ಭಾಲ್ಕಿ ತಾಲ್ಲೂಕಿನ ಜೀರಗ್ಯಾಳ ಗ್ರಾಮದ ಹೊಲದಲ್ಲಿನ ಬೆಳೆಯನ್ನುಮೇಕೆಗಳು ಮೇಯ್ದಿರುವ ವಿಷಯಕ್ಕೆ ನಡೆದ ರಾಜಕುಮಾರ ಶಿಂಧೆಯ ಕೊಲೆಯ 4 ಜನ ಆರೋಪಿತರನ್ನು ಪೆÇಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೊಲೆಗೆ ಕಾರಣ: ನಾಲ್ಕೈದು ದಿನಗಳ ಹಿಂದೆ ಕೊಲೆಯಾದ ರಾಜಕುಮಾರ ಅವರಿಗೆ ಸೇರಿದ ಮೇಕೆಗಳು ಪ್ರದೀಪ್ ಲಾಧೆ ಅವರ ಹೊಲಕ್ಕೆ ನುಗ್ಗಿ ಬೆಳೆ ಹಾಳು ಮಾಡಿವೆ ಎಂದು ಆರೋಪಿಸಿ ಪ್ರದೀಪ್ ರಾಜಕುಮಾರಗೆ ಬೈದಿರುತ್ತಾರೆ.

ನಂತರ ಕುಡಿದು ಬಂದ ರಾಜಕುಮಾರ ಪ್ರದೀಪನೊಂದಿಗೆ ತಕರಾರು ಮಾಡಿರುತ್ತಾರೆ. ಆಗಸ್ಟ್ 13ರಂದು ಮೇಕೆಗಳನ್ನು ಮೇಯಿಸಿಕೊಂಡು ಬರಲು ಮೃತ ವ್ಯಕ್ತಿಯು ಅಂಗದ ದಾದಾರಾವ್ ಅವರ ಹೊಲಕ್ಕೆ ತೆರಳಿದ್ದಾಗ ಆರೋಪಿ ಪ್ರದೀಪ್ ತನ್ನ ಕೈಯಲ್ಲಿದ್ದ ಕೊಡಲಿಯಿಂದ ರಾಜಕುಮಾರ ಶಿಂಧೆ ತಲೆಗೆ ಹೊಡೆದ ಪರಿಣಾಮ ರಕ್ತಸ್ರಾವವಾಗಿ ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾರೆ ಎಂದು ಮೃತ ವ್ಯಕ್ತಿಯ ತಾಯಿ ಸುಶೀಲಾ ವಿಠಲರಾವ್ ಶಿಂಧೆ ನೀಡಿರುವ ದೂರಿನ ಮೇರೆಗೆ ಮೇಹಕರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣದಲ್ಲಿನ ಆರೋಪಿತರ ಪತ್ತೆಗೆ ಸಿಪಿಐ ಹಣಮರೆಡ್ಡೆಪ್ಪಾ ನೇತೃತ್ವದಲ್ಲಿ ಮೇಹಕರ ಪಿಎಸ್‍ಐ ಸುದರ್ಶನ ರೆಡ್ಡಿ ಹಾಗೂ ಠಾಣೆಯ ಸಿಬ್ಬಂದಿಯ 2 ತಂಡಗಳನ್ನು ನೇಮಿಸಲಾಗಿತ್ತು. ಸದರಿ ಪ್ರಕರಣವು ಹೊಲದಲ್ಲಿನ ಬೆಳೆಯನ್ನು ಕುರಿಗಳು ಮೇಯ್ದಿರುವ ಕ್ಷುಲಕ್ಕ ಕಾರಣಕ್ಕೆ ಕೊಲೆಯಾಗಿದ್ದು, ಜಿಲ್ಲೆಯಲ್ಲಿನ ಸಾರ್ವಜನಿಕರು ಸದರಿ ಘಟನೆಯ ಬಗ್ಗೆ ಯಾವುದೇ ತಪ್ಪು ವದಂತಿಗೆ ಕಿವಿಗೊಡಬಾರದು ಎಂದು ಎಸ್‍ಪಿ ಪ್ರದೀಪ್ ಗುಂಟಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.