
ಕೋಲಾರ, ಆ. ೨ – ಕೋಲಾರ ನಗರಸಭೆ ವ್ಯಾಪ್ತಿಯ ಮುಖ್ಯ ರಸ್ತೆಗಳು, ಚರಂಡಿಗಳು, ಪಾದಚಾರಿ ಮಾರ್ಗಗಳು, ರಾಜಕಾಲುವೆಗಳು, ಕಲ್ಲುಮನೆಗಳು, ಉದ್ಯಾನವನಗಳು, ಬಯಲು ಪ್ರದೇಶಗಳು, ಸರ್ಕಾರಿ ಆಸ್ತಿಗಳು ಮತ್ತು ಇತರೆ ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತ ನಿರ್ಮಾಣಗಳು ಬೆಳಕಿಗೆ ಬಂದಿದೆ.
ಇಂತಹ ಬೆಳವಣಿಗೆಯಿಂದಾಗಿ ಪಾದಚಾರಿಗಳು ಮತ್ತು ವಾಹನಗಳ ಸುಗಮ ಸಂಚಾರ ಕಷ್ಟಕರವಾಗಿದ್ದು, ಅಪಘಾತಗಳ ಸಂಭವ ಹೆಚ್ಚಾಗಿದೆ. ಇದು ಸಾರ್ವಜನಿಕರ ಮತ್ತು ಪಾದಚಾರಿಗಳ ಹಿತದೃಷ್ಟಿಯಿಂದ, ವಾಹನಗಳ ಸುಗಮ ಸಂಚಾರದ ಹಿತವನ್ನು ಗಮನದಲ್ಲಿ ಇಟ್ಟು, ಈ ಸಾರ್ವಜನಿಕ ಪ್ರಕಟಣೆಯ ದಿನಾಂಕದಿಂದ ೭ (ಏಳು) ದಿನಗಳಲ್ಲಿ ಇಂತಹ ಅನಧಿಕೃತ ಒತ್ತುವರಿಗಳನ್ನು ತಾವೇ ತೆರವುಗೊಳಿಸುವಂತೆ ಸೂಚಿಸಲಾಗಿದೆ.
ನಗರಸಭೆಯಿಂದಲೇ ಇಲ್ಲಿ ತೆರವುಗೊಳಿಸಲಾಗುವುದು, ಮತ್ತು ತಗಲುವ ವೆಚ್ಚವನ್ನು ಒತ್ತುವರಿದಾರರಿಂದ ಅಥವಾ ಸಂಬಂಧಿಸಿದವರಿಂದಲೇ ದಂಡದ ರೂಪದಲ್ಲಿ ವಸೂಲಿ ಮಾಡಲಾಗುವುದು. ಈ ರೀತಿಯ ತೆರವು ಕಾರ್ಯಾಚರಣೆಯಲ್ಲಿ ಉಂಟಾಗುವ ಯಾವುದೇ ಆಸ್ತಿ ಅಥವಾ ಇತರೆ ಹಾನಿಗಳಿಗೆ ನಗರಸಭೆ ಜವಾಬ್ದಾರವಾಗಿರುವುದಿಲ್ಲ ಎಂದು ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


























