Home ಜಿಲ್ಲೆ ಕಲಬುರಗಿ ಚಿಂಚೋಳಿ ತಾಲೂಕಿನಲ್ಲಿ ಭಾವೈಕ್ಯತೆಯ ಸಂಕೇತವಾಗಿ ಮೊಹರಂ

ಚಿಂಚೋಳಿ ತಾಲೂಕಿನಲ್ಲಿ ಭಾವೈಕ್ಯತೆಯ ಸಂಕೇತವಾಗಿ ಮೊಹರಂ

ಚಿಂಚೋಳಿ: ಜೂ.27:ತಾಲೂಕಿನಾದ್ಯಂತ ಮುಸ್ಲಿಂ ಬಾಂಧವರು ಹಾಗೂ ಹಿಂದೂ ಸೋದರರು ಒಗೂಡಿ ಭಾವೈಕ್ಯತೆಯ ಸಂಕೇತವಾಗಿ ಮೊಹರಂ (ಪೀರ ಹಬ್ಬ) ಹಬ್ಬವನ್ನು ಅತ್ಯಂತ ಶ್ರದ್ಧಾಭಕ್ತಿ ಹಾಗೂ ಸಡಗರ-ಸಂಭ್ರಮದಿಂದ ಆಚರಿಸಿದರು.ತಾಲೂಕಿನ ನಗರ ಪ್ರದೇಶ ಸೇರಿದಂತೆ ಗ್ರಾಮೀಣ ಭಾಗಗಳಾದ ಐನಾಪುರ, ಕರಕಮುಕಲಿ, ಕುಂಚಾವರಂ, ಸುಲೇಪೇಟ್, ಕೊಡ್ಲಿ, ನಿಡಗುಂದ ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಮೊಹರಂ ನಿಮಿತ್ತ ಸ್ಥಾಪಿಸಲಾಗಿದ್ದ ಪೀರ ದೇವರಿಗೆ ಸಾರ್ವಜನಿಕರು ವಿಶೇಷ ಪೂಜೆ, ನೈವೇದ್ಯ ಹಾಗೂ ಧೂಪ-ದೀಪಗಳನ್ನು ಬೆಳಗಿ ಭಕ್ತಿ ಸಮರ್ಪಿಸಿದರು ಚಿಂಚೋಳಿ ತಾಲೂಕಿನ ಮೊಹರಂ ಹಬ್ಬದ ವಿಶೇಷತೆಯೆಂದರೆ ಇಲ್ಲಿ ಮುಸ್ಲಿಂ ಬಾಂಧವರಿಗಿಂತಲೂ ಹೆಚ್ಚಾಗಿ ಹಿಂದೂ ಧರ್ಮದವರು ಪೀರ ದೇವರಿಗೆ ಹರಕೆ ಹೊತ್ತು, ಭಕ್ತಿಯಿಂದ ನಡೆದುಕೊಳ್ಳುವುದು ಜಾತಿ, ಮತ, ಬೇಧ-ಭಾವ ಮರೆತು ಎಲ್ಲರೂ ಒಂದಾಗಿ ಆಚರಿಸುವ ಮೂಲಕ ತಾಲೂಕಿನಲ್ಲಿ ಸೌಹಾರ್ದತೆಯ ವಾತಾವರಣ ಮನೆಮಾಡಿತ್ತು
ಹಬ್ಬದ ಅಂಗವಾಗಿ ರಾತ್ರಿ ಜಾಗರಣೆ ನಡೆಸಿ, ಕೆಂಡದ ಹೊಂಡದ (ಆಲಾವಿ) ಸುತ್ತಲೂ ಯುವಕರು ಮತ್ತು ಹಿರಿಯರು ಡೋಲಿನ ನಾದಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಾ ‘ಹುಸೇನ್ ದೂಲಾ ಎಂದು ಜಯಘೋಷ ಕೂಗುತ್ತಾ ಆಲಾವಿ ಕುಣಿತ ಪ್ರದರ್ಶಿಸಿದ್ದು ನೆರೆದಿದ್ದ ಸಾರ್ವಜನಿಕರ ಗಮನ ಸೆಳೆಯಿತು ಹಬ್ಬದ ಕೊನೆಯ ದಿನವಾದ ಇಂದು ಸಂಜೆ ಸಕಲ ವಾದ್ಯ-ಮೇಳಗಳೊಂದಿಗೆ ಪೀರ ದೇವಸ್ಥಾನಗಳಿಂದ ಮೂರ್ತಿಗಳನ್ನು ಭವ್ಯ ಮೆರವಣಿಗೆಯ ಮೂಲಕ ತಾಲೂಕಿನ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ, ನಂತರ ಹತ್ತಿರದ ಜಲಮೂಲಗಳಲ್ಲಿ (ಬಾವಿ ಅಥವಾ ಕೆರೆಗಳಲ್ಲಿ) ವಿಸರ್ಜನೆ ಮಾಡುವುದರೊಂದಿಗೆ ಮೊಹರಂ ಹಬ್ಬಕ್ಕೆ ತೆರೆ ಬಿಡಲಾಯಿತು ತಾಲೂಕಿನಾದ್ಯಂತ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೆÇೀಲಿಸ್ ಇಲಾಖೆ ಸಿಪಾಯಿಗಳಾದ ಕಪಿಲದೇವ ಮತ್ತು ಪಿಎಸ್‍ಐ ಗಂಗಮ್ಮ ಅವರ ನೇತೃತ್ವದಲ್ಲಿ ಬಿಗಿ ಪೆÇೀಲಿಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು ಈ ಸಂಧರ್ಭದಲ್ಲಿ ಬಡಿದರ್ಗಾದ ಸಜ್ಜದೆ ನಶೀನ್ ಸೈಯದ್ ಶಾಹ ಅಕ್ಬರ್ ಹುಸೈನಿ,ಹಿರಿಯ ಮುಖಂಡ ಕೆ ಎಂ ಬಾರಿ, ಗೋಪಾಲರಾವ ಕಟೀಮನಿ, ಗೌತಮ್ ಪಾಟೀಲ್, ಎಸ್ ಕೆ ಮುತ್ತಾರ್,ಮೊಖದುಮ್ ಖಾನ್, ಮಂಜಲೆ, ಅಬದುಲ ಹಾದಿ, ಬಸವರಾಜ ವಾಡಿ, ಶ್ರೀಕಾಂತ್ ಭೋವಿ, ಸಲೀಮ್ ಸೌಧಗರ, ನರಸಪ್ಪ, ಅಯೂಬ್ ಖಾನ್, ಹಾಸನ ಹಾಶ್ಮಿ, ಸೇರಿದಂತೆ ತಾಲೂಕಿನ ಸುತ್ತಮುತ್ತ ಹಳ್ಳಿಯ ಭಕ್ತರು ಸಾವಿರಾರು ಜನಸಂಖ್ಯೆಯಲ್ಲಿ ಸಾಕ್ಷಿಯಾದರು