Home ಜಿಲ್ಲೆ ಆಭಿಪ್ರೇರಣಾ ಕಾರ್ಯಕ್ರಮ

ಆಭಿಪ್ರೇರಣಾ ಕಾರ್ಯಕ್ರಮ


ಚನ್ನಮ್ಮನ ಕಿತ್ತೂರು.ಆ.೧೨: ಶಿಕ್ಷಣದಿಂದ ಉತ್ತಮ ಭವಿಷ್ಯ ನಿರ್ಮಿಸಿಕೊಳ್ಳಲು ಸಾಧ್ಯ. ಹೀಗಾಗಿ ಓದಿ ಹೆಚ್ಚು ಅಂಕ ಗಳಿಸಿ ತಂದೆ-ತಾಯಿ ಹಾಗೂ ಸ್ವಗ್ರಾಮ, ತಾಲೂಕು, ಜಿಲ್ಲೆ, ರಾಜ್ಯಕ್ಕೆ ಕೀರ್ತಿ ತರಬೇಕೆಂದು ವಿದ್ಯಾರ್ಥಿಗಳಿಗೆ ಶಾಸಕ ಬಾಬಾಸಾಹೇಬ ಪಾಟೀಲ ಕರೆನೀಡಿದರು.


ಬೆಳಗಾವಿ ಜಿಲ್ಲಾ, ಜಿಪಂ ಬೆಳಗಾವಿ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಸಮನ್ವಯಾಧಿಕಾರಿಗಳ ಇವರ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಪಟ್ಟಣದ ರಾಣಿಚನ್ನಮ್ಮ ಸ್ಮಾರಕ ಭವನದಲ್ಲಿ ಪರೀಕ್ಷೆಗೆ ಸಿದ್ದ-ಗೆಲುವಿಗೆ ಬದ್ದ ಅಭಿಪ್ರೇರಣಾ ಕಾರ್ಯಕ್ರಮ ಉದ್ಘಾಟಿಸಿ ಅಧ್ಯಕ್ಷ ಸ್ಥಾನವಹಿಸಿಕೊಂಡು ಮಾತನಾಡಿದರು.


ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ವೈ.ತುಬಾಕಿ ಮಾತನಾಡಿ ವಿದ್ಯಾರ್ಥಿಗಳು ವಿಭಿನ್ನ ರೀತಿಯಲ್ಲಿ ಅಭ್ಯಸಿಸಿದಾಗ ಹೆಚ್ಚು ಅಂಕ ಗಳಿಸಲು ಪ್ರೇರಣೆಯಾಗುತ್ತದೆ. ಕ್ಷೇತ್ರದಲ್ಲಿ ಶಿಕ್ಷಣದ ಹೊಸ ಕ್ರಾಂತಿಯಾಗಿದ್ದು ಈ ಬಾರಿಯು ಸಹ ನಮ್ಮ ತಾಲೂಕು ಹ್ಯಾಟ್ರಿಕ್ ಗೆಲವು ಸಾಧಿಸುವ ವಿಶ್ವಾಸ ನನಗಿದೆ. ಅದಕ್ಕೆ ಪಾಲಕರ ಹಾಗೂ ವಿದ್ಯಾರ್ಥಿ, ಶಿಕ್ಷಕರ ಸಹಕಾರ ಮುಖ್ಯವಾಗಿದೆ. ಈಗಾಗಲೇ ಕಿತ್ತೂರಟೀಂ ತಯಾರಾಗಿದ್ದು ಎಲ್ಲರೂ ಶ್ರಮಿಸಿ ಶತಕದತ್ತ ಮತ್ತೇ ಹೆಜ್ಜೆ ಇಡೋಣ ಎಂದರು.


ಸಾನಿಧ್ಯವಹಿಸಿ ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗಿಂದ್ರ ಸ್ವಾಮಿಜೀ ಆಶೀರ್ವಚನ ನೀಡಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕ ಶಿಕ್ಷಣ ತಜ್ಞ ಮಹೇಶ ಮಾಸಾಳ ವಿದ್ಯಾರ್ಥಿಗಳನ್ನು ಕುರಿತು ಉಪನ್ಯಾಸ ನೀಡಿದರು. ಕೆಪಿಸಿಸಿ ಸದಸ್ಯೆ ರೋಹಿನಿ ಪಾಟೀಲ, ಕ್ಷೇತ್ರ ಸಮನ್ವಯ ಅಧಿಕಾರಿ ಗಾಯತ್ರಿ ಅಜ್ಜನ್ನವರ, ಅಕ್ಷರ ದಾಸೋಹ ನಿರ್ದೇಶಕಿ ಮಹಾದೇವಿ ಕುಡೋಕ್ಕಲಿಗ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶೇಖರ ಹಲಸಗಿ, ಸಿಪಿಐ ಶಿವಾನಂದ ಗುಡಗನಟ್ಟಿ, ಶಿಕ್ಷಣ ಸಮಿತಿ ಅಧ್ಯಕ್ಷ ರಾಜಶೇಖರ ಇನಾಮದಾರ, ಎಲ್ಲ ಶಿಕ್ಷಕರು, ವಿದ್ಯಾರ್ಥಿಗಳು ಬಿಇಓ ಕಚೇರಿ ಸಿಬ್ದಂದಿ, ಇತರಿದ್ದರು.