
ಚನ್ನಮ್ಮನ ಕಿತ್ತೂರು, ಮೇ21: ಕ್ಷೇತ್ರದಲ್ಲಿರುವ ರಸ್ತೆಗಳನ್ನು ಡಾಂಬರೀಕರಿಸಿದರೆ ಅದು ನಾಲ್ಕು ವರ್ಷ ಬಾಳಿಕೆಯಾಗುತ್ತದೆ. ಆದರೆ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ ಮಕ್ಕಳ ಭವಿಷ್ಯದ ಜೀವನದುದ್ದಕ್ಕೂ ಶಾಶ್ವತವಾಗಿ ಉಳಿಯುತ್ತದೆ ಎಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.
ಜಿಪಂ ಬೆಳಗಾವಿ, ಶಾಲಾ ಶಿಕ್ಷಣ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ/ ಕ್ಷೇತ್ರ ಸಮನ್ವಯ ಅಧಿಕಾರಿಗಳ ಕ.ರಾ.ಪ್ರೌ.ಸ.ಶಿ. ಸಂಘ ಬೆಂಗಳೂರ, ತಾಲೂಕ ಘಟಕ ಚ. ಕಿತ್ತೂರು-ಬೈಲಹೊಂಗಲ ಇವರುಗಳ ಸಂಯುಕ್ತ ಆಶ್ರಯದಲ್ಲಿ ನೇಗಿನಹಾಳ ಗ್ರಾಮದ ಶಾಸಕರ ಸ್ವಗೃಹ ಅಂಗಳದಲ್ಲಿ ಕ್ಷೇತ್ರದ ಎಸ್‍ಎಸ್‍ಎಲ್‍ಸಿ 2026ರ 100ರಷ್ಟು ಫಲಿತಾಂಶ ಪಡೆದ ಪ್ರೌಢ ಶಾಲೆಗಳ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭ ಕಾರ್ಯಕ್ರಮದಲ್ಲಿ ಸಸಿಗೆ ನೀರುಣಿಸಿ ಅವರು ಮಾತನಾಡಿದರು.
ನಾನು ಶಾಸಕನಾಗಿ ಆಯ್ಕೆ ಆದಾಗ ನನ್ನದೊಂದು ಗುರಿಯಿತ್ತು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವುದು ಅದು ಇಂದು ಈಡೇರಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ವೈ ತುಬಾಕದ ಅಥತಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕ ನುಡಿಯನ್ನಾಡಿದರು.
ಪ್ರಾಸ್ತಾವಿಕವಾಗಿ ತಹಶೀಲ್ದರ ಕಲ್ಲನಗೌಡ ಪಾಟೀಲ, ಕೆಪಿಸಿಸಿ ಸದಸ್ಯ ರೋಹಿನಿತಾಯಿ ಪಾಟೀಲ, ಡೈಟ್ ಪ್ರಾಚಾರ್ಯ ಅಶೋಕ ಸಿಂದಗಿ, ಪತ್ರಕರ್ತ ಈಶ್ವರ ಹುಟಿ, ಮಹಾಂತೇಶ ತಿಲಗರ್ ಮಾತನಾಡಿದರು. 100ಕ್ಕೆ 100ರಷ್ಟು ಅಂಕ ಪಡೆದ ವಿದ್ಯಾರ್ಥಿಗಳನ್ನು, ಅತಿಥಿಗಳನ್ನು ಸತ್ಕರಿಸಲಾಯಿತು.
ಸಭೆಯಲ್ಲಿ ಡಿಸಿಸಿ ಬ್ಯಾಂಕ ನಿರ್ದೇಶಕ ನಾನಾಸಾಹೇಬ ಪಾಟೀಲ, ಶಂಕರ ಹೊಳಿ, ಇಓ ನಿಂಗಪ್ಪ ಮಸಳಿ, ಗಾಯತ್ರಿ ಅಜ್ಜನವರ, ಪಪಂ ಅಧ್ಯಕ್ಷ ಜೈಸಿದ್ರಾಮ ಮಾರಿಹಾಳ, ಸಿ.ಬಿ. ಪಾಟೀಲ, ಸನೀಲ್ ಘೀವಾರಿ, ಅಶಪಾಕ್ ಹವಾಲ್ದಾರ, ಕೃಷ್ಣಾ ಬಾಳೆಕುಂದ್ರಿ, ಎಮ್.ಎಫ್.ಜಕಾತಿ, ಶಾಸಕರ ಆಪ್ತ ಸಹಾಯಕ, ಅನ್ವರ್, ಸಂಜೀವ ಜುನ್ನೂರು, ಮಲ್ಲಿಕಾರ್ಜುನ ಕದಂ, ಸ್ನೇಹಲ್ ಪೂಜೆರ, ನಿರೂಪಿಸಿದರು, ಹಣ್ಣಿಕೇರಿ ಜಗದೀಶಗೌಡ ಪಾಟೀಲ, ಸಂಗನಗೌಡ ಪಾಟೀಲ, ಸಲೀಂ ಕಾಶೀಮನವರ, ಮುಖ್ಯೋಪಾಧ್ಯಯ ಶ್ರೀಶೈಲ ಅಂಗಡಿ, ಸಿಪಿಐ ಶಿವಾನಂದ ಗುಡಗನಟ್ಟಿ, ಬೈಲಹೊಂಗಲ ಬಿಇಓ ಸರ್, ಬಿಇಓ, ಶಿಕ್ಷಣ ಇಲಾಖೆ ಸಿಬ್ಬಂದಿ ಇತರರಿದ್ದರು.




















