Home ಜಿಲ್ಲೆ ಕಲಬುರಗಿ ಅಮೋಘ ನಗರದಲ್ಲಿ 40 ಲಕ್ಷ ರೂ. ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಶಾಸಕ ಅಲ್ಲಮಪ್ರಭು ಪಾಟೀಲ್...

ಅಮೋಘ ನಗರದಲ್ಲಿ 40 ಲಕ್ಷ ರೂ. ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಶಾಸಕ ಅಲ್ಲಮಪ್ರಭು ಪಾಟೀಲ್ ಚಾಲನೆ

ಕಲಬುರಗಿ:ಜೂ.27: ನಗರದ ಉದನೂರ ರಸ್ತೆಯಲ್ಲಿರುವ ಅಮೋಘ ನಗರದಲ್ಲಿ ಮುಖ್ಯಮಂತ್ರಿ ವಿಶೇಷ ಅನುದಾನದ ಅಡಿಯಲ್ಲಿ 40 ಲಕ್ಷ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿರುವ 10ನೇ ವಾರ್ಡ್‍ನ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ಗುದ್ದಲಿ ಪೂಜೆ ನೆರವೇರಿಸಿ ಅಧಿಕೃತವಾಗಿ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಶಾಸಕ ಅಲ್ಲಂಪ್ರಭು ಪಾಟೀಲ್, ನಗರದ ಬಡಾವಣೆಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ರಾಜ್ಯ ಸರ್ಕಾರ ವಿಶೇಷ ಆದ್ಯತೆ ನೀಡುತ್ತಿದೆ. ಗುಣಮಟ್ಟದ ರಸ್ತೆ, ಚರಂಡಿ ಹಾಗೂ ಇತರ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ನಿರಂತರವಾಗಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಅಮೋಘ ನಗರದ ರಸ್ತೆ ಕಾಮಗಾರಿ ಪೂರ್ಣಗೊಂಡ ಬಳಿಕ ಸ್ಥಳೀಯರ ಸಂಚಾರ ಸುಗಮವಾಗಲಿದ್ದು, ಹಲವು ವರ್ಷಗಳ ಬೇಡಿಕೆ ಈಡೇರಿದಂತಾಗಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ದಕ್ಷಿಣ ಮತಕ್ಷೇತ್ರದ ಓಬಿಸಿ ಅಧ್ಯಕ್ಷ ಧರ್ಮರಾಜ್ ಹೇರೂರ, ಪ್ರಥಮ ದರ್ಜೆ ಗುತ್ತಿಗೆದಾರ ಸಂಜಯ್ ಆರ್.ಕೆ., ಎ ಇ ಶಾಂತಕುಮಾರ್ ನಂದೂರ್, ಅಮೋಘ ನಗರ ಅಭಿವೃದ್ಧಿ ಸಂಘದ ಗೌರವಾಧ್ಯಕ್ಷ ಭರಮಶೆಟ್ಟಿ ಜಗಶೆಟ್ಟಿ, ಅಧ್ಯಕ್ಷ ಗುರುರಾಜ್ ಶಂಕರ ಕುಲಕರ್ಣಿ, ಹನುಮಂತರಾವ್ ಪಾಟೀಲ್ ಕಪ್ನೂರ, ಮುದುಕಪ್ಪ (ನ್ಯಾಯವಾದಿ), ಶಿವಯೋಗಿ, ಆಕಾಶ್ ಜೋಶಿ, ವಿನಾಯಕ ಕುಲಕರ್ಣಿ, ವೆಂಕಟೇಶ್ ದೇಶಪಾಂಡೆ, ಸಿದ್ದಣ್ಣ ಅಲ್ಮಲ್ಕರ್, ಶಿಮಜಿ ದೇವ್ಕರ್, ವನಿತಾ ಜಾದವ್, ಗೋಪಾಲ್ ಭಟ್, ರೇಣುಕಾ ಮೈದರ್ಗಿ, ಉಮೇಶ್ ಗದ್ವಾಲ್, ಬಿಸಣ್ಣ ಗದ್ವಾಲ್, ಶಾರದಾ ಓಗಿ, ಮಹೇಶ್ ಕುಲಕರ್ಣಿ, ಶ್ರೀಕಾಂತ ಬಿರಾದಾರ್, ಸರಸ್ವತಿ ಠಾಕೂರ್, ಉಷಾ ಚವಾಣ್, ಸಿದ್ದಲಿಂಗ ಚಿಂಚೋಳಿ, ಮಹೇಶ್ ಕುಮಾರ್ ಜೋಶಿ, ಗುರು ಶಾಂತಪ್ಪ ಮಾವನೂರ, ಶ್ರೀನಿವಾಸ್ ಗುಡಿದೂರ್, ಶಿವಮೂರ್ತಿ ಬಡಿಗೇರ್, ಬಸಪ್ಪ ಮನಿ, ಬಸವರಾಜ ಮರತೂರ, ಕೃಷ್ಣ ಸಿಂಧೆ, ಸಂಗಯ್ಯ ಸ್ವಾಮಿ, ವಿದ್ಯಾಸಾಗರ, ಶಾಂತು ಪಾಟೀಲ್, ಶಿವಾನಂದ್ ಸೇರಿದಂತೆ ಬಡಾವಣೆಯ ಅನೇಕ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.