Home ಜಿಲ್ಲೆ ಕುಡಿಯುವ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಲು ಖಡಕ್ ಎಚ್ಚರಿಕೆ ನೀಡಿದ ಸಚಿವ ಶಿವಾನಂದ್ ಪಾಟೀಲ್

ಕುಡಿಯುವ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಲು ಖಡಕ್ ಎಚ್ಚರಿಕೆ ನೀಡಿದ ಸಚಿವ ಶಿವಾನಂದ್ ಪಾಟೀಲ್

ಬಸವನ ಬಾಗೇವಾಡಿ:ಮೇ.20: ಜಲಧಾರೆ ಯೋಜನೆಯಡಿ ಕುಡಿಯುವ ನೀರು ಸರಬರಾಜು ಯೋಜನೆಗೆ ಸಂಬಂಧಿಸಿದಂತೆ ಗುತ್ತಿಗೆದಾರರು ಹಾಗೂ ಅಧಿಕಾರಿಗಳು ಬರುವ ನವಂಬರ್ ತಿಂಗಳು ಒಳಗಾಗಿ ಕಾಮಗಾರಿ ಪೂರ್ಣಗೊಳಿಸಿ ಆಯಾ ಪ್ರದೇಶದ ಜನರಿಗೆ ಕುಡಿಯುವ ನೀರು ಸರಬರಾಜ ಮಾಡಬೇಕೆಂದು ಸಚಿವ ಶಿವಾನಂದ ಪಾಟೀಲ್ ಸಭೆಯಲ್ಲಿ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು ಪಟ್ಟಣದ ಪುರಸಭೆ ಸಭಾಭವನದಲ್ಲಿ ಸೋಮವಾರ ಮುಂಬರುವ ದಿನಗಳಲ್ಲಿ ಹಾಗೂ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಕರೆಯಲಾದ ಸಭೆಯ ಅಧ್ಯಕ್ಷ ಸ್ಥಾನ ವಹಿಸಿ ಅವರು ಮಾತನಾಡಿದರು ಜಲಧಾರೆ ಯೋಜನೆ ಅಡಿ ವಿಜಯಪುರ ಬಸವನಬಾಗೇವಾಡಿ ಇಂಡಿ ತಾಲೂಕಿನ ಎಲ್ಲಾ ಗ್ರಾಮೀಣ ಪ್ರದೇಶಗಳಿಗೆ ಇಂಡಿ ಪಟ್ಟಣಕ್ಕೆ ಹಾಗೂ 4 ಸ್ಥಳೀಯ ಸಂಸ್ಥೆಗಳಾದ ಚಡಚಣ ಕೋಲಾರ ನಿಡುಗುಂದಿ ಮನಗೂಳಿ ಪಟ್ಟಣಗಳಿಗೆ ಕುಡಿಯುವ ನೀರಿನ ಯೋಜನೆ 2022 ಸಪ್ಟಂಬರ್ 9ರಂದು ಕಾಮಗಾರಿ ಮಂಜುರಾಗಿ 2025 ಮಾರ್ಚ್ 29ಕ್ಕೆ ಕಾಮಗಾರಿ ಮುಕ್ತಾಯವಾದರೂ ಗುತ್ತಿಗೆದಾರರು ಇದುವರೆಗೆ ಕುಡಿಯುವ ನೀರನ್ನು ಸರಬರಾಜು ಮಾಡಿಲ್ಲ ಈ ಯೋಜನೆ ಅಡಿ ಗುತ್ತಿಗೆದಾರರು ಜಿಎಸ್ಟಿ ಸೇರಿದಂತೆ ರೂ 1,300 ಕೋಟಿ ಅನುದಾನವನ್ನು ಬಳಕೆ ಮಾಡಿದ್ದಾರೆ ಇಷ್ಟೊಂದು ಹಣವನ್ನು ಯಾವ ಯಾವುದಕ್ಕೆ ಖರ್ಚು ಮಾಡಿದ್ದಾರೆಂದು ಗುತ್ತಿಗೆದಾರರನ್ನು ಸಚಿವರು ಪ್ರಶ್ನಿಸಿ ಅಸಮಧಾನವನ್ನು ವ್ಯಕ್ತಪಡಿಸಿದರು ಜಲಧಾರೆ ಯೋಜನೆ ಅಡಿ ಶ್ರೀನಿವಾಸ್ ಕನ್ಸ್ಟ್ರಕ್ಷನ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಇಲ್ಲಿವರೆಗೆ ಶೇಕಡಾ 81% ರಷ್ಟು ಕಾಮಗಾರಿ ಪೂರ್ಣಗೊಳಿಸಿರುವ ಎಂಬ ಮಾಹಿತಿ ನೀಡಿದೆ ಅಧಿಕಾರಿಗಳು ಯೋಜನೆಯ ಕುರಿತು ಸರಿಯಾಗಿ ನೋಡದೆ ಇರುವುದರಿಂದ ಕಾಮಗಾರಿ ಕುಂಠಿತವಾಗಿದೆ ಗುತ್ತಿಗೆದಾರರು ಇಲ್ಲಿಯವರೆಗೆ ಒಂದು ಸಾವಿರ ಕೋಟಿಯಷ್ಟು ಹಣವನ್ನು ತೆಗೆದುಕೊಂಡಿದ್ದಾರೆ ಇಂಥ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಏಕೆ ಸೇರಿಸಬಾರದು ಸಭೆಯಲ್ಲಿ ಹಾಜರಿದ್ದ ಗುತ್ತಿಗೆದಾರ ಕಂಪನಿಯ ಪ್ರಾಜೆಕ್ಟ್ ಮ್ಯಾನೇಜರ್ ಮಲ್ಲಿಕಾರ್ಜುನ ಅವರನ್ನು ಸಚಿವರು ತರಾಟೆಗೆ ತೆಗೆದುಕೊಂಡರು ಜಿಲ್ಲಾಧಿಕಾರಿ ಕೆ ಆನಂದ ಜಿಲ್ಲಾ ಪಂಚಾಯಿತಿ ಸಿಇಓ ರಿಷಿ ಆನಂದ ಈ ಕಾಮಗಾರಿ ಕುರಿತು ಸಭೆ ನಡೆಸಿ ಬೇಗನೆ ಕಾಮಗಾರಿ ಪೂರ್ಣಗೊಳ್ಳುವಂತೆ ನೋಡಿಕೊಳ್ಳಬೇಕೆಂದು ಸೂಚಿಸಿದರು ತಾಲೂಕಿನ ಕೂಡಗಿ ಗ್ರಾಮದ 101 ಕೆರೆಯ ಜಾಗದಲ್ಲಿ ಅಕ್ರಮವಾಗಿ ಮನೆಗಳನ್ನು ಕಟ್ಟಿಕೊಳ್ಳುತ್ತಿದ್ದಾರೆ ಪಿಡಿಒ ಕೆರೆಯ ಹದ್ದು ಬಸ್ತು ಅಳತೆ ಮಾಡಿ ಅಕ್ರಮವಾಗದಂತೆ ನೋಡಿಕೊಂಡು ಕೆರೆ ಸುರಕ್ಷಿತಗೊಳ್ಳಬೇಕು ಸಭೆ ಆರಂಭಕ್ಕೆ ಮೊದಲು ಅಧಿಕಾರಿಗಳ ಫೆÇೀನ್ ರಿಂಗ್ ಆಗುವುದನ್ನು ಗಮನಿಸಿ ಫೆÇೀನ್ ಹೊರಗಡೆ ಇಟ್ಟು ಬರಲು ತಿಳಿಸಿದರು ಫೆÇೀನ್ ಬಂದರೆ ಹೊರಗಡೆ ಹೋಗಿ ಮಾತನಾಡಬೇಕು ಎಂದರು ಸಭೆಯಲ್ಲಿ ಕೋಲಾರ ನಿಡಗುಂದಿ ಬಸವನ ಬಾಗೇವಾಡಿ ತಾಲೂಕಿನ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಂದ ಕುಡಿಯುವ ನೀರಿನ ಬಗ್ಗೆ ಕೇಳಿದಾಗ ಪಿಡಿಒ ಗಳು ನೀರಿನ ಸಮಸ್ಯೆ ಇಲ್ಲ ಎಂದು ಕೆಲವರು ಹೇಳಿದರೆ ಕೆಲವರು ಎರಡು ದಿನಕ್ಕೊಮ್ಮೆ ಮೂರು ದಿನಕ್ಕೊಮ್ಮೆ ನೀರು ಸರಬರಾಜು ಮಾಡುವುದಾಗಿ ತಿಳಿಸಿದರು ಉಕ್ಕಲಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದರೂ ಗ್ರಾಮದ ಪಿಡಿಒ ಯಾವುದೇ ಸಮಸ್ಯೆ ಇಲ್ಲವೆಂದು ಹೇಳುತ್ತಾರೆ ಈ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ ಪಿಡಿಒ ಸರಿಯಾಗಿ ಗಮನಿಸಿಲ್ಲ ಈ ಗ್ರಾಮಕ್ಕೆ ಎರಡು ಕಡೆಯಿಂದ ಕುಡಿಯುವ ನೀರು ಪೂರೈಕೆ ಆಗುತ್ತದೆ ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆ ಎ ಇ ಇ ಶ್ರೀ ವಿ ಬಿ ಗೊಂಗಡಿ ಅವರಿಗೆ ಎರಡು ಕಡೆಯಿಂದ ಗ್ರಾಮಕ್ಕೆ ನೀರು ಸರಬರಾಜು ಆಗುವಂತೆ ನೋಡಿಕೊಳ್ಳಲು ತಿಳಿಸಿದರು ಮಸಬಿನಾಳ ಗ್ರಾಮದ ಮಧ್ಯದಲ್ಲಿರುವ ಭಾವಿಯನ್ನು ಸ್ವಚ್ಛಗೊಳಿಸಿ ನೀರು ಸರಬರಾಜು ಆಗುವಂತೆ ಪಿಡಿಒ ಅವರಿಗೆ ಸೂಚಿಸಿದರು ನಿನ್ನೆ ಡೋಣೂರು ಗ್ರಾಮದ ಜಾತ್ರೆಗೆ ಹೋದ ಸಂದರ್ಭದಲ್ಲಿ ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತಿದ್ದು ಮತ್ತು ಡಿಡಿಟಿ ಸಿಂಪರಣೆ ಮಾಡದೇ ಇದ್ದಿದ್ದು ಕಂಡುಬಂದಿತು ಜಾತ್ರೆಗೆ ನೂರಾರು ಶ್ರೀಗಳು ಸಾವಿರಾರು ಭಕ್ತರು ಆಗಮಿಸಿರುವ ಪ್ರಯುಕ್ತ ಪಿಡಿಒ ಅವರು ಗ್ರಾಮವನ್ನು ಸ್ವಚ್ಛ ಇಡದ ಪ್ರಯುಕ್ತ ತರಾಟೆಗೆ ತೆಗೆದುಕೊಂಡರು ಮಲಗಾನ ಗ್ರಾಮದಲ್ಲಿ ಮಹಿಳೆಯರು ರಸ್ತೆ ಬದಿಯಲ್ಲಿ ಬಹಿರ್ದೆಸೆ ಮಾಡುವುದು ಕಂಡು ಬಂದಿದೆ ಸರಕಾರ ಇವರಿಗೆ ಸಹಾಯಧನ ಕೊಟ್ಟರು ಏನು ಪ್ರಯೋಜನವಾಗಿಲ್ಲ ಪಿಡಿಒ ಗ್ರಾಮದ ಜನರಿಗೆ ತಿಳುವಳಿಕೆ ನೀಡಿ ಶೌಚಾಲಯ ನಿರ್ಮಾಣ ಮಾಡಿಕೊಳ್ಳಲು ತಿಳಿಸಬೇಕು ಈ ಪಿಡಿಒನ ಮೇಲೆ ಪ್ರಕರಣ ದಾಖಲೆ ಮಾಡಲು ಕೋಲಾರ ತಾಲೂಕ ಪಂಚಾಯಿತಿ ಅಧಿಕಾರಿಗೆ ಸೂಚಿಸಿದರು ಮನಗೂಳಿ ಪಟ್ಟಣದ ಯಾವ ರಸ್ತೆಗೆ ಹೋದರು ಪ್ಲಾಟ್ ಹಾಕಿರುವುದು ಕಂಡು ಬರುತ್ತದೆ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಕೇಳಿದರೆ ಒಂದೇ ಒಂದು ಲೇಔಟ್ ಇದೆ ಎಂದು ನಿಖಿಲ್ ಪಾಟೀಲ್ ಹೇಳಿದರು ನೀನು ಸರಿಯಾಗಿ ನೋಡಿಲ್ಲ ಕತ್ತೆ ಕಾಯುತ್ತಿದ್ದೀಯಾ ಎಂದು ತರಾಟೆಗೆ ತೆಗೆದುಕೊಂಡರು ಸಭೆಯಲ್ಲಿದ್ದ ನಗರ ಯೋಜನಾಧಿಕಾರಿ ಶ್ರೀ ಬಿ ಎ ಸೌದಾಗರ್ ಮನಗೂಳಿ ಪಟ್ಟಣದಲ್ಲಿ ಎಷ್ಟು ಅನಧಿಕೃತ ಲೇಔಟ್ಗಳಿವೆ ನನಗೆ ಮಾಹಿತಿ ಕೊಡಬೇಕೆಂದು ಸೂಚಿಸಿದರು ಟಕ್ಕಳಿಕಿ ಸೆಮಿಪೀರುವ ಪಾಲಿಟೆಕ್ನಿಕ್ ಕಾಲೇಜ್ ಹಾಗೂ ಐಟಿಐ ಕಾಲೇಜುಗಳಿಗೆ ಸಮರ್ಪಕವಾಗಿ ನೀರು ಪೂರೈಕೆ ಮಾಡಲು ಪಿಡಿಒ ಅವರಿಗೆ ಸೂಚಿಸಿದರು ಬಸವನ ಬಾಗೇವಾಡಿ ಪಟ್ಟಣಕ್ಕೆ ನೀರು ಪೂರೈಕೆ ಮಾಹಿತಿ ಕೇಳಿದಾಗ ಬಸವನಬಾಗೇವಾಡಿಯಲ್ಲಿ ವಿದ್ಯುತ್ ಪೂರೈಕೆಯಿಂದ ಸಮಸ್ಯೆಯಾಗಿದೆ ಬೇಗನೆ ಪರಿಹರಿಸಲಾಗುವುದೆಂದು ಪುರಸಭೆಯ ಮುಖ್ಯ ಅಧಿಕಾರಿ ರುದ್ರೇಶ್ ಚಿತ್ತರಗಿ ಅವರು ತಿಳಿಸಿದರು ಆಯಾ ತಾಲೂಕಿನ ತಸಿಲ್ದಾರ್ ಅವರು ಟಾಸ್ಕ್ ಫೆÇೀರ್ಸ್ ಸಭೆಯನ್ನು ನಡೆಸಿ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಲು ಸೂಚಿಸಿದರು ಸಭೆಯಲ್ಲಿ ಜಿಲ್ಲಾಧಿಕಾರಿಗಳಾದ ಡಾ ಕೆ ಆನಂದ ಜಿಲ್ಲಾ ಪಂಚಾಯಿತಿಯ ಮುಖ್ಯ ಅಧಿಕಾರಿಗಳಾದ ರಿಷಿ ಆನಂದ್ ಉಪ ವಿಭಾಗ ಅಧಿಕಾರಿಗಳಾದ ಗುರುನಾಥ ದಡ್ಡಿ ಬಸವನ ಬಾಗೇವಾಡಿಯ ತಹಸೀಲ್ದಾರ್ ವೈ ಎಸ್ ಸೋಮನಕಟ್ಟಿ ಕೋಲಾರ ತಾಲೂಕಿನ ತಹಸೀಲ್ದಾರ್ ಸಂತೋಷ್ ಮ್ಯಾಗೇರಿ ಬಸನಬಾಗೇವಾಡಿಯ ತಾಲೂಕು ಪಂಚಾಯಿತಿ ಅಧಿಕಾರಿ ವೆಂಕಟೇಶ್ ವಂದಾಲ್ ಕೋಲಾರ ತಾಲೂಕ ಪಂಚಾಯಿತಿ ಅಧಿಕಾರಿ ಸುನಿಲ್ ಮದ್ದಿನ ನಿಡಗುಂದಿ ಮತ್ತು ಮನಗೂಳಿ ಪಟ್ಟಣ ಪಂಚಾಯಿತಿ ಅಧ್ಯಕ್ಷರು ಸಭೆಯಲ್ಲಿದ್ದರು ತಾಲೂಕ ಜಿಲ್ಲಾಮಟ್ಟದ ಅಧಿಕಾರಿಗಳು ಅಖಂಡ ತಾಲೂಕಿನ ಪಿಡಿಒಗಳು ಇದ್ದರು ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಆಗಲಿಲ್ಲ ಕೇವಲ ಕುಡಿಯುವ ನೀರಿನ ಬಗ್ಗೆ ಚರ್ಚೆ ನಡೆಯಿತು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ತಾಲೂಕಿಗೆ ಪ್ರಥಮ ಬಂಧ ವಿದ್ಯಾರ್ಥಿಗಳನ್ನು ಸಚಿವರ ಸನ್ಮಾನಿಸಿದರು