
ಕುಂದಗೋಳ ಆ೧೧: ಬಣಜಿಗ ಸಮಾಜವು ಎಲ್ಲರೊಂದಿಗೆ ಸೌಹಾರ್ದತವಾಗಿರುವ ಜತೆಗೆ ವಿದ್ಯಾರ್ಥಿಗಳು-ಸಾಧಕರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಾಗುತ್ತಿರುವುದು ಹೆಮ್ಮೆಯ ಸಂಗತಿ ಎಂದು ಮಾಜಿ ಸಿಎಂ, ಸಂಸದ ಜಗದೀಶ ಶೆಟ್ಟರ್ ಹೇಳಿದರು.
ಸಂಶಿ ಫಕೀರೇಶ್ವರ ಮಠದಲ್ಲಿ ತಾಲೂಕು ಬಣಜಿಗ ಸಮಾಜ ಕ್ಷೇಮಾಭಿವೃದ್ಧಿ ಘಟಕ ಹಮ್ಮಿಕೊಂಡ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರ ಸಂಗಮ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ವೀರಶೈವ, ಲಿಂಗಾಯತ ಸಮಾಜವನ್ನು ಒಗ್ಗೂಡಿಸಿಕೊಂಡು, ಹಿಂದುಳಿದ ಮೀಸಲಾತಿ ಪಡೆಯಲು ಒಗ್ಗಟ್ಟಿನಿಂದ ಬಾಳಬೇಕು. ವಿನೂತನ ಯೋಜನೆ ರೂಪಿಸಿ, ಸಮಾಜದ ಏಳ್ಗೆಗೆ ಪ್ರಯತ್ನಿಸೋಣ ಎಂದರು.
ಶಾಸಕ ಎಂ.ಆರ್. ಪಾಟೀಲ ಮಾತನಾಡಿ ಈ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಆಸಕ್ತಿ ಹೆಚ್ಚಿಸುವ ಜತೆಗೆ ಸಾಮಾಜವನ್ನು ಗಟ್ಟಿಗೊಳಿಸುತ್ತದೆ ಎಂದರು
ಶಿರಹಟ್ಟಿ ಫಕ್ಕೀರಸಿದ್ಧರಾಮ ಶ್ರೀಗಳು ಹಾಗೂ ವಿರಕ್ತಮಠದ ಚನ್ನಬಸವ ದೇವರು ಸಾನಿಧ್ಯ ವಹಿಸಿದ್ದರು. ಫಕೀರೇಶ ಕೋರಿ ಅಧ್ಯಕ್ಷತೆ ವಹಿಸಿದ್ದರು. ಸಮಾಜದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ರೂಡಗಿ, ಅಂದಪ್ಪ ಜವಳಿ, ಶಿವಾನಂದ ಬಿದರಿ, ವೀರಣ್ಣ ಮಳಗಿ, ವಿಜಯಕುಮಾರ ಬಿಸನಳ್ಳಿ, ಶೇಖರ ಕವಳಿ, ವಿರೂಪಾಕ್ಷಪ್ಪ ಬೀಸರಳ್ಳಿ, ಆನಂದ ಉಪ್ಪಿನ, ಗುರುಪಾದಪ್ಪ ಶಿರೂರ, ಲಿಂಗರಾಜ ಅಂಗಡಿ, ಐ.ಎಂ.ಕೋರಿ, ಎಂ.ಪಿ.ಕೋರಿ, ಪಂಚಪ್ಪ ಕೋರಿ ಸೇರಿದಂತೆ ಸಮಾಜದ ಮುಖಂಡರು ಹಾಗೂ ಸಮಾಜ ಬಾಂಧವರು ಉಪಸ್ಥಿತರಿದ್ದರು. ಮುಖಂಡ ಎ.ಬಿ.ಉಪ್ಪಿನ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಪ್ರೋ.ಅಶೋಕ ಹಂಚಲಿ ಉಪನ್ಯಾಸ ನೀಡಿದರು. ಶೋಭಾ ಜಾಬೀನ ಪ್ರಾರ್ಥಿಸಿದರು. ಮಹೇಶ ಅಂಗಡಿ ನಿರೂಪಿಸಿದರು.




























