Home ಕ್ರೈಂ ಸುದ್ದಿಗಳು ಯಾದಗಿರಿಯಲ್ಲಿ ನಿಲ್ಲದ ಅನ್ನಭಾಗ್ಯ ಅಕ್ಕಿ ಕಳ್ಳರ ಕಾಟ!ಗಂಜ್ ಪ್ರದೇಶದ ಗೋಡೌನ್ ಮೇಲೆ ಪೊಲೀಸರ ದಿಢೀರ್ ದಾಳಿ;...

ಯಾದಗಿರಿಯಲ್ಲಿ ನಿಲ್ಲದ ಅನ್ನಭಾಗ್ಯ ಅಕ್ಕಿ ಕಳ್ಳರ ಕಾಟ!ಗಂಜ್ ಪ್ರದೇಶದ ಗೋಡೌನ್ ಮೇಲೆ ಪೊಲೀಸರ ದಿಢೀರ್ ದಾಳಿ; ನಾಲ್ಕು ವಾಹನಗಳಿಗೆ ಅಕ್ಕಿ ಲೋಡ್ ಮಾಡುವಾಗಲೇ ಎಂಟ್ರಿ!

ಯಾದಗಿರಿ: ಬಡವರ ಹಸಿವು ನೀಗಿಸಲು ಸರ್ಕಾರ ಜಾರಿಗೆ ತಂದಿರುವ ಅನ್ನಭಾಗ್ಯ ಯೋಜನೆಯ ಪಡಿತರ ಅಕ್ಕಿ ಅಕ್ರಮವಾಗಿ ಸಂಗ್ರಹಿಸಿ ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂಬ ಶಂಕೆ ಯಾದಗಿರಿ ನಗರದಲ್ಲಿ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ನಗರದ ಗಂಜ್ ಪ್ರದೇಶದಲ್ಲಿರುವ ಗೋಡೌನ್‍ವೊಂದರ ಮೇಲೆ ಪೆÇಲೀಸರು ದಿಢೀರ್ ಕಾರ್ಯಾಚರಣೆ ನಡೆಸಿದ್ದು, ಭಾರಿ ಪ್ರಮಾಣದ ಅಕ್ಕಿ ದಾಸ್ತಾನು ಪತ್ತೆಯಾಗಿದೆ.

ಗೋಡೌನ್‍ನಲ್ಲಿ ಸಂಗ್ರಹಿಸಲಾಗಿದ್ದ ಅಕ್ಕಿಯನ್ನು ನಾಲ್ಕು ವಾಹನಗಳಿಗೆ ಲೋಡ್ ಮಾಡುತ್ತಿದ್ದ ಸಂದರ್ಭದಲ್ಲಿ ಯಾದಗಿರಿ ಪೆÇಲೀಸರ 112 ತಂಡ ಕಾರ್ಯಾಚರಣೆ ನಡೆಸಿದೆ ಎನ್ನಲಾಗಿದೆ. ಈ ವೇಳೆ ಸರ್ಕಾರಿ ಪಡಿತರ ಚೀಲಗಳಲ್ಲಿದ್ದ ಅಕ್ಕಿ ಪತ್ತೆಯಾಗಿದ್ದು, ಅಕ್ಕಿಯ ಮೂಲ ಹಾಗೂ ಅದರ ಸಂಗ್ರಹದ ಹಿಂದಿರುವವರ ಕುರಿತು ತನಿಖೆ ನಡೆಸುವ ಅಗತ್ಯ ಎದುರಾಗಿದೆ.

600ರಿಂದ 700 ಚೀಲ ಅಕ್ಕಿ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆಯೇ?

ಗೋಡೌನ್‍ನಲ್ಲಿ ಸುಮಾರು 600ರಿಂದ 700 ಚೀಲಗಳಷ್ಟು ಅಕ್ಕಿ ಸಂಗ್ರಹಿಸಿ ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಆಹಾರ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ಸಂಬಂಧಿತ ಅಂಗಡಿ ಅಥವಾ ದಾಸ್ತಾನು ಸ್ಥಳದ ಕಾರ್ಯಚಟುವಟಿಕೆಗಳನ್ನು ನಿಬರ್ಂಧಿಸಲಾಗಿದೆ ಎಂದು ತಿಳಿದುಬಂದಿದೆ.

ಪಡಿತರ ಅಂಗಡಿಗಳಿಂದಲೇ ಅಕ್ಕಿಯನ್ನು ಸಂಗ್ರಹಿಸಲಾಗುತ್ತಿದೆಯೇ ಅಥವಾ ಬೇರೆ ಮೂಲಗಳಿಂದ ತರಲಾಗುತ್ತಿದೆಯೇ ಎಂಬ ಅನುಮಾನಗಳು ವ್ಯಕ್ತವಾಗಿವೆ. ಆದರೆ, ಅಕ್ಕಿಯ ಮೂಲ, ದಾಸ್ತಾನಿನ ಪ್ರಮಾಣ ಮತ್ತು ಅಕ್ರಮ ಮಾರಾಟದ ಕುರಿತು ಅಧಿಕೃತ ತನಿಖೆಯಿಂದಲೇ ಸಂಪೂರ್ಣ ಮಾಹಿತಿ ಹೊರಬರಬೇಕಿದೆ.

ಬಡವರ ಅನ್ನಕ್ಕೆ ಕನ್ನ ಹಾಕಿದವರಾರು?

ಸರ್ಕಾರದ ಅನ್ನಭಾಗ್ಯ ಯೋಜನೆಯಡಿ ಬಡ ಕುಟುಂಬಗಳಿಗೆ ತಲುಪಬೇಕಾದ ಅಕ್ಕಿ ಅಕ್ರಮವಾಗಿ ಸಂಗ್ರಹಿಸಿ ಮಾರಾಟವಾಗುತ್ತಿದ್ದರೆ, ಅದು ಸಾರ್ವಜನಿಕ ವಿತರಣಾ ವ್ಯವಸ್ಥೆಯ ಗಂಭೀರ ದುರುಪಯೋಗವಾಗಲಿದೆ. ಇಂತಹ ಅಕ್ರಮಗಳ ಹಿಂದೆ ಯಾರಿದ್ದಾರೆ? ಪಡಿತರ ಅಕ್ಕಿ ಗೋಡೌನ್‍ಗೆ ಹೇಗೆ ತಲುಪಿತು? ಎಷ್ಟು ದಿನಗಳಿಂದ ಈ ವ್ಯವಹಾರ ನಡೆಯುತ್ತಿದೆ? ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಮೂಡಿವೆ.

ಪೆÇಲೀಸರ ದಿಢೀರ್ ಕಾರ್ಯಾಚರಣೆಯಿಂದ ಅಕ್ಕಿ ದಾಸ್ತಾನು ಪ್ರಕರಣ ಬೆಳಕಿಗೆ ಬಂದಿದ್ದು, ಅಕ್ಕಿ ಕಾಳಸಂತೆ ಜಾಲದ ಹಿಂದೆ ಇರುವವರ ಪತ್ತೆಗಾಗಿ ಸಮಗ್ರ ತನಿಖೆ ನಡೆಸಬೇಕೆಂಬ ಒತ್ತಾಯ ಕೇಳಿಬಂದಿದೆ.

ತಾಸಿಲ್ದಾರ್ ಸುರೇಶ್ ಅಂಕಲಗಿ ಭೇಟಿ ನೀಡಿ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆಯನ್ನು ನೀಡಿ ಸದ್ಯದಲ್ಲೇ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದರೆ.

ಕಾರ್ಯಾಚರಣೆ ವೇಳೆ ಆಹಾರ ಇಲಾಖೆಯ ಅಧಿಕಾರಿ ರಾಜೇಶ್ವರಿ, ಆಹಾರ ನಿರೀಕ್ಷಕ ವಿಟ್ಟಲ್ ಬಂಧಳ್, ಸಿಪಿಐ ನಾನಾಗೌಡ, ಗ್ರಾಮೀಣ ಪೆÇಲೀಸ್ ಠಾಣೆಯ ಪಿಎಸ್‍ಐ ವೀರೇಶ್ ಸೇರಿದಂತೆ ಪೆÇಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು ಎಂದು ತಿಳಿದುಬಂದಿದೆ.

ಅನ್ನಭಾಗ್ಯ ಅಕ್ಕಿಯ ಅಕ್ರಮ ದಾಸ್ತಾನು ಮತ್ತು ಮಾರಾಟದ ಶಂಕೆಗೆ ಸಂಬಂಧಿಸಿದಂತೆ ಅಕ್ಕಿಯ ಮೂಲ, ಸಾಗಣೆ ಮಾರ್ಗ ಹಾಗೂ ಸಂಬಂಧಪಟ್ಟವರ ಪಾತ್ರದ ಕುರಿತು ಅಧಿಕಾರಿಗಳು ಸಮಗ್ರ ತನಿಖೆ ನಡೆಸಿ ಸತ್ಯಾಂಶ ಬಹಿರಂಗಪಡಿಸಬೇಕಿದೆ.