Home ಜಿಲ್ಲೆ ಅಧಿಕಾರಿಗಳ ಸಭೆ

ಅಧಿಕಾರಿಗಳ ಸಭೆ

ಹಾನಗಲ್,ಜು೮: ಜನ ಸಮಸ್ಯೆ ಹೇಳಿಕೊಂಡು ನನ್ನ ಬಳಿ ಬಂದರೆ ಅದು ಸ್ಥಳೀಯ ಹಂತದ ಅಧಿಕಾರಿಗಳ ವೈಫಲ್ಯ ಎಂದು ಭಾವಿಸಬೇಕಾಗುತ್ತದೆ. ಸಾರ್ವಜನಿಕರ ದೂರು, ದುಮ್ಮಾನಗಳಿಗೆ ಅಧಿಕಾರಿಗಳು ಸ್ಪಂದಿಸಬೇಕು. ಸಮಸ್ಯೆಗೆ ಪರಿಹಾರ ದೊರಕಿಸುವುದು ಕಷ್ಟಸಾಧ್ಯವಾದರೆ ಸೂಕ್ತ ಹಿಂಬರಹ ನೀಡಿ. ಪದೇಪದೆ ಅಲೆದಾಡಿಸಬೇಡಿ. ಸಾರ್ವಜನಿಕರ ದೂರುಗಳಿಗೆ ಸಂಬAಧಿಸಿದAತೆ ಪ್ರತಿ ತಿಂಗಳು ಕೈಗೊಂಡ ಕ್ರಮಗಳ ವಿವರಣೆಯೊಂದಿಗೆ ತಾಪಂ ಇಒ ಅವರಿಗೆ ವರದಿ ಸಲ್ಲಿಸಿ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.


ಇಲ್ಲಿನ ತಾಪಂ ಸಭಾಂಗಣದಲ್ಲಿ ಗ್ರಾಮ ಪಂಚಾಯಿತಿ ಆಡಳಿತ ಅಧಿಕಾರಿಗಳು ಮತ್ತು ಅಭಿವೃದ್ಧಿ ಅಧಿಕಾರಿಗಳ ಸಭೆ ನಡೆಸಿ ಅವರು ಮಾತನಾಡಿದರು. ಇನ್ನು ಮುಂದೆ ನೀವು ನೀಡುವ ವರದಿ ಬಗ್ಗೆ ತಿಳಿದುಕೊಳ್ಳಲು ತಾಪಂ ಇಒ ಅವರೊಂದಿಗೆ ಸಭೆ ನಡೆಸಲಾಗುವುದು. ಸಾರ್ವಜನಿಕರು ಸಮಸ್ಯೆ ಹೇಳಿಕೊಂಡು ನನ್ನ ಬಳಿ ಬಂದಾಗ ಸೂಕ್ತ ಉತ್ತರ ನೀಡಲು ನನಗೂ ಸಹ ಅನುಕೂಲವಾಗಲಿದೆ. ಅಲ್ಲದೇ ನಿಮ್ಮ ಮೇಲಿನ ಒತ್ತಡ ಸಹ ಕಡಿಮೆಯಾಗಿ ಉತ್ತಮ ಆಡಳಿತ ನೀಡಲು ಅನುಕೂಲವಾಗಲಿದೆ. ಅಲ್ಲದೇ ಸಾರ್ವಜನಿಕರ ಅನಗತ್ಯ ಓಡಾಟಕ್ಕೂ ಬ್ರೇಕ್ ಬೀಳಲಿದೆ ಎಂದರು.