
ಮಧುಗಿರಿ, ಜೂ. ೧೩- ಮಾಸ್ತಿ ಕನ್ನಡದ ಆಸ್ತಿ. ಕನ್ನಡದ ಸಣ್ಣ ಕತೆಗಳ ಜನಕ, ಕನ್ನಡದ ಕೀರ್ತಿ ಕಳಶ ಎಂದು ಸಾಹಿತಿ ಮ.ಲ.ನ ಮೂರ್ತಿ ಬಣ್ಣಿಸಿದರು.
ಪಟ್ಟಣದ ಟಿವಿವಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಮಾಸ್ತಿ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದವರು.
ಜನರಿಗೆ ಪರಿಚಿತರಾದ ಮಾಸ್ತಿ ವೆಂಕಟೇಶ ಅಯ್ಯಂಗಾರ್, ಕತೆ, ಕಾದಂಬರಿ, ಕವನ, ನಾಟಕ, ವಿಮರ್ಶೆ ಹೀಗೆ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ತಮ್ಮ ಕೃತಿಗಳನ್ನು ರಚಿಸಿದ್ದಾರೆ. ೧೯೮೩ರಲ್ಲಿ ಕನ್ನಡದ ಜ್ಞಾನಪೀಠ ಪ್ರಶಸ್ತಿ ಪಡೆದ ಅವರು ಉಪವಿಭಾಗಾಧಿಕಾರಿಗಳಾಗಿದ್ದಾಗ ಮದ್ಗರಿಯನ್ನು ಮಧುಗಿರಿ ಎಂದು ಪುನರ್ ನಾಮಕರಣ ಮಾಡಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂದರು.
ಮನೆ ಮಾತು ತಮಿಳು, ಕಲಿತಿದ್ದು ಇಂಗ್ಲೀಷ್ ಎಂ.ಎ,. ಬರೆದದ್ದು ಕನ್ನಡದಲ್ಲಿ, ’ಅವರ ಆತ್ಶಚರಿತ್ರೆ ಇಂದು ಮಾಸ್ತಿಯವರ ಹೆಸರಿನಲ್ಲಿ ನಾಡಿನ ಹಿರಿಯ ಲೇಖಕರಿಗೆ ಪ್ರಶಸ್ತಿ ನೀಡುತ್ತಾ ಬಂದಿದೆ ಎಂದು ತಿಳಿಸಿದರು.
ಗ್ರಂಥಪಾಲಕ ಜಿ.ಎಸ್ ನಾಗಭೂಷಣ ಮಾತನಾಡಿ, ಸಂಪಾದಿಸಿದ ಕರ್ನಾಟಕ ಭಾರತ ಕಥಾ ಮಂಜರಿ ಜನ ಮೆಚ್ಚುಗೆ ಪಡೆದಿದೆ. ಭಾರತ ತೀರ್ಥ ಆದಿಕವಿ ವಾಲ್ಶೀಕಿ ಕೃತಿಗಳು ಸಾಹಿತ್ಯಾಸಕ್ತರ ಆಸಕ್ತಿಯನ್ನು ಸೆಳೆದಿವೆ. ಜೂನ್ ೬ ರಂದು ಜನಿಸಿ, ತಮ್ಮ ಹುಟ್ಟುಹಬ್ಬದಂದೇ ನಿಧನರಾದ್ದು ವಿಶೇಷ ಎಂದರು.
ಉಪನ್ಶಾಸಕ ಮಂಜುಪ್ರಸಾದ್. ಮಾತನಾಡಿ, ವಿಶ್ವ ಪ್ರಸಿದ್ಧ ನಾಟಕಕಾರ ಷೇಕ್ಸ್ ಪಿಯರ್‌ನ ಹ್ಶಾಮ್ಲೆಟ್, ಟೆಂಪೆಸ್ಟ್, ಕಿಂಗ್ಲಿಯರ್, ದ್ವಾದಶರಾತ್ರಿ, ಟ್ಶಾಗೊರರ ಚಿತ್ರಾಂಗದ ಕೃತಿಯನ್ನು ಕನ್ನಡಕ್ಕೆ ತಂದು ಸಾಹಿತ್ಯದ ವ್ಶಾಪ್ತಿಯನ್ನು ವಿಸ್ತರಿಸಿದ್ದಾರೆ ಎಂದರು.
ಉಪನ್ಶಾಸಕ ಗೋಪಾಲ್ ಮಾತನಾಡಿ, ಐ.ಸಿ.ಎಸ್ ಅಧಿಕಾರಿಯಾಗಿ, ಕೆಲವು ದಿನ ಉಪನ್ಶಾಸಕರಾಗಿ ಕಾರ್ಯನಿರ್ವಹಿಸಿ ಅವರು ಕರ್ನಾಟಕ ಜನ ಮನ ಸೂರೆಗೊಂಡಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಪದವಿ ಪೂರ್ವ ಕಾಲೇಜಿನ ವಿದ್ಶಾರ್ಥಿಗಳು, ಬಳಗದ ಸದಸ್ಶರು ಭಾಗವಹಿಸಿದ್ದರು.
ಪಲ್ಲವಿ ಪ್ರಾರ್ಥಿಸಿದರು. ಕಾವ್ಯ ಸ್ವಾಗತಿಸಿದರು. ಪ್ರಿಯಕಾರ್ಯಕ್ರಮ ನಿರೂಪಿಸಿದರು, ಮಮತಾ ವಂದಿಸಿದರು.





























