Home ಜಿಲ್ಲೆ 21ರಂದು ದ ಸಂ ಸ ವತಿಯಿಂದ ಬೀದರನಲ್ಲಿ ಬೃಹತ್ ಪ್ರತಿಭಟನೆ

21ರಂದು ದ ಸಂ ಸ ವತಿಯಿಂದ ಬೀದರನಲ್ಲಿ ಬೃಹತ್ ಪ್ರತಿಭಟನೆ

ಹುಮನಾಬಾದ್:ಉತ್ತರಾಖಂಡದ ಹಲ್ವಾನಿಯ ರಾಮಲೀಲಾ ಮೈದಾನದಲ್ಲಿ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ರಾಜ್ಯಸಭೆಯ ವಿರೋಧ ಪಕ್ಷದ ನಾಯಕರು ಹಾಗೂ ನಾಡಿನ ಹಿರಿಯ ಮುತ್ಸದ್ದಿ ರಾಜಕಾರಣಿ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿ ತೆರಳಿದ ಬಳಿಕ, ಕೆಲ ಪಟ್ಟಭದ್ರ ಹಿತಾಸಕ್ತಿಗಳು ಆ ಸ್ಥಳವನ್ನು ಶುದ್ದೀಕರಿಸಿದರೆಂಬ ಘಟನೆ ಅತ್ಯಂತ ನೋವು ಮತ್ತು ಆತಂಕವನ್ನು ಉಂಟುಮಾಡಿದೆ ಎಂದು ತಾಲೂಕ ಪಂಚಾಯತ್ ಮಾಜಿ ಅಧ್ಯಕ್ಷ ಬಾಬು ಟೈಗರ್ ಖಂಡಿಸಿದರು. ನಗರದ ಪ್ರವಾಸಿ ಮಂದಿರದಲ್ಲಿ ಕರೆದ ಪತ್ರಿಕೆಗೋಷ್ಠಿಯಲ್ಲಿ ಹೇಳಿಕೆ ನೀಡಿರುವ

ಅವರು, ಸ್ವಾತಂತ್ರ್ಯ ಪಡೆದು ಎಂಟು ದಶಕಗಳ ಹೊಸ್ತಿಲಲ್ಲಿರುವ ಭಾರತದಲ್ಲಿ ಇಂತಹ ಘಟನೆಗಳು ನಡೆಯುತ್ತಿರುವುದು ನಿಜಕ್ಕೂ ದುರದೃಷ್ಟಕರ. ಜಾತಿ, ಧರ್ಮ, ವರ್ಗ, ಲಿಂಗ ಅಥವಾ ಯಾವುದೇ ಸಾಮಾಜಿಕ ಗುರುತಿನ ಆಧಾರದ ಮೇಲೆ ಮನುಷ್ಯನನ್ನು ಮೇಲು-ಕೀಳು ಎಂದು ವಿಭಜಿಸುವ ಮನೋಭಾವವನ್ನು ನಮ್ಮ ಸಂವಿಧಾನ ಸ್ಪಷ್ಟವಾಗಿ ತಿರಸ್ಕರಿಸಿದೆ. ಪ್ರತಿಯೊಬ್ಬ ಪ್ರಜೆಗೂ ಸಮಾನ ಗೌರವ, ಸಮಾನ ಹಕ್ಕು ಮತ್ತು ಸಮಾನ ಅವಕಾಶವನ್ನು ಸಂವಿಧಾನ ಖಾತರಿಪಡಿಸಿದೆ ಎಂದು ಬಾಬು ಟೈಗರ್ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ವೈಜಿನಾಥ ಸಿಂಧೆ, ಲೋಕೇಶ್ ಮೇತ್ರೆ,ಸಿದ್ಧಾರ್ಥ ಡಾಂಗೆ, ಧರ್ಮರಾಜ ರತ್ನಾಕರ, ಸುಶೀಲಕುಮಾರ್ ಭೋಲಾ, ಸಿದ್ದಾರ್ಥ ಜಾನ್ವೀರ್, ಸಿದ್ದಾರ್ಥ ಕಾಂಬಳೆ ಸೇರಿರುತ್ತೆ ಇನ್ನಿತರು ಉಪಸ್ಥಿತರಿದ್ದರು.