Home ಜಿಲ್ಲೆ ಬೆಂಗಳೂರು ಎಂಸಿಎಯಿಂದ ಮಂತ್ರ ಫಾರ್ ಅಬಂಡನ್ಸ್

ಎಂಸಿಎಯಿಂದ ಮಂತ್ರ ಫಾರ್ ಅಬಂಡನ್ಸ್

ಬೆಂಗಳೂರು, ಜೂ. ೨೬-ಕರ್ನಾಟಕ ಸರ್ಕಾರದ ಅಧೀನದಲ್ಲಿರುವ ಏಕೈಕ ಜಾಹೀರಾತು ಸಂಸ್ಥೆಯಾದ ಕರ್ನಾಟಕ ಸ್ಟೇಟ್ ಮಾರ್ಕೆಟಿಂಗ್ ಕಮ್ಯುನಿಕೇಷನ್ ಅಂಡ್ ಅಡ್ವರ್ಟೈಸಿಂಗ್ ಲಿಮಿಟೆಡ್ ವತಿಯಿಂದ “ಸಂಪತ್ತಿ” ಯ ಮಂತ್ರ ಫಾರ್ ಅಬಂಡನ್ಸ್” ಎಂಬ ಸಮಗ್ರ ವ್ಯವಹಾರ ಪರಿಸರದ ಪೈಲಟ್ ಕಾರ್ಯಕ್ರಮ ಬೆಂಗಳೂರಿನ ತಾಜ್ ವೆಸ್ಟ್ ಎಂಡ್‌ನ ಐಐಎಂಬಿಎಎ ಬೆಂಗಳೂರು ಅಲ್ಯೂಮ್ನಿ ಕ್ಲಬ್‌ನಲ್ಲಿ ನಡೆಯಿತು.


ಈ ಸಂದರ್ಭದಲ್ಲಿ ಸತೀಶ ಕೃಷ್ಣ ಸೈಲ್, ಅಧ್ಯಕ್ಷರು ಹಾಗೂ ಕಾರವಾರ ಕ್ಷೇತ್ರದ ಶಾಸಕರು, ಸಂಪತ್ತಿಯ ಮುಖ್ಯ ಸಲಹೆಗಾರರಾದ ಎಂ.ಕೆ.ಎಚ್.ಎಚ್. ಜಿಲಾನಿ, ಫೆಮಿನಾ ಮಿಸ್ ಇಂಡಿಯಾ ೨೦೨೬ರಾದ ಕುಮಾರಿ ಸಾಧ್ವಿ ಸೈಲ್, ಬ್ರಿಕ್ಸ್ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿಯ ಅಧ್ಯಕ್ಷರಾದ ಸಮೀಪ್ ಶಾಸ್ತ್ರಿ, ವ್ಯವಸ್ಥಾಪಕ ನಿರ್ದೇಶಕರಾದ ಬಿ. ಆನಂದ್, ಪೇಯು ಸಂಸ್ಥೆಯ ನಿರ್ದೇಶಕರಾದ ಪ್ರೀತಂ ಪ್ರಜಾಪತಿ ಉಪಸ್ಥಿತರಿದ್ದರು