Home ಜಿಲ್ಲೆ ಕಲಬುರಗಿ ಚಿಗರಹಳ್ಳಿ ಕ್ರಾಸಿನಲ್ಲಿ ವ್ಯಕ್ತಿಯ ಮೇಲೆ ಹಲ್ಲೆ

ಚಿಗರಹಳ್ಳಿ ಕ್ರಾಸಿನಲ್ಲಿ ವ್ಯಕ್ತಿಯ ಮೇಲೆ ಹಲ್ಲೆ

ಜೇವರಗಿ,ಜೂ.16: ಚಿಗರಹಳ್ಳಿ ಕ್ರಾಸಿನಲ್ಲಿ ಸಂಗಪ್ಪ ಚಂದಪ್ಪ ಹಲ್ಕಟ್ಟಿ ಯಾಳವಾರ ಎಂಬ ವ್ಯಕ್ತಿಯ ಮೇಲೆ
ಮಾರಣಾಂತಿಕ ಹಲ್ಲೆ ನಡೆದಿದೆ.
ಯಾಳವಾರ ಗ್ರಾಮದ ಜೆಟ್ಟೆಪ್ಪ ನರಬೋಳ ಎಂಬ ವ್ಯಕ್ತಿ ಬೀರ್ ಬಾಟಲಿನಿಂದ ಹೊಡೆದು 15000 ರೂ ಕಸಿದುಕೊಂಡು ಹೋಗಿದ್ದಾನೆ. ಯಾರೋ ದಾರಿಹೋಕರು ಅಂಬುಲೆನ್ಸ್ ಗೆ ಫೆÇೀನ್ ಮಾಡಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಕಲ್ಬುರ್ಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ. ಈ ಕುರಿತು ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೂಡಲೆ ಆರೋಪಿಗಳನ್ನು ಬಂಧಿಸಬೇಕು ಇಲ್ಲವಾದರೆ ಪೆÇಲೀಸ್ ಠಾಣೆ ಎದುರುಗಡೆ ಕುಟುಂಬ ಸಮೇತ ಪ್ರತಿಭಟನೆ ಮಾಡಲಾಗುವುದೆಂದು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಚಂದ್ರಶೇಖರ್ ಹರನಾಳ ಹೇಳಿದ್ದಾರೆ. ಈ ಸಂದರ್ಭದಲ್ಲಿ ಹಲ್ಲೆಗೊಳಗಾದ ವ್ಯಕ್ತಿಯ ಕುಟುಂಬದ ಸಿದ್ದಪ್ಪ ಮಾನಂದ ಮಾಪಣ್ಣ, ನಾಗಮ್ಮ ಇದ್ದರು