
ಲಕ್ಷೆ÷್ಮÃಶ್ವರ,ಆ೮: ಗಣೇಶ ಚತುರ್ಥಿ ಇನ್ನೇನು ಒಂದು ತಿಂಗಳು ಬಾಕಿ ಇರುವಂತೆಯೇ ಪಟ್ಟಣ ಸೇರಿದಂತೆ ಅಲ್ಲಲ್ಲಿ ಗಣೇಶ ಮೂರ್ತಿಗಳ ನಿರ್ಮಾಣ ಕಾರ್ಯದಲ್ಲಿ ಕಲಾವಿದರು ನಿರತರಾಗಿದ್ದಾರೆ.
ಪಟ್ಟಣದಲ್ಲಿ ಪಂಪ ವೃತ್ತದ ಸಮೀಪ ಕಲಾವಿದ ಆದಿತ್ಯ ತೋರಗಲ್ ಅವರು ಬೃಹತ್ ಗಾತ್ರದ ಗಣೇಶನ ಮೂರ್ತಿಗಳನ್ನು ಕಳೆದ ಒಂದು ತಿಂಗಳಿನಿAದ ನಿರ್ಮಿಸುತ್ತಿದ್ದು ಅವುಗಳಿಗೆ ಅಂತಿಮ ಸ್ಪರ್ಶ ನೀಡಲು ಕುಂಚದ ಕೈಚಳಕವನ್ನು ಕಲಾವಿದ ಮಾಡುತ್ತಿದ್ದಾರೆ.
ಭಾರಿ ಗಾತ್ರದ ಶುದ್ಧ ಪರಿಸರಸ್ನೇಹಿ ಗಣಪತಿಯ ಮೂರ್ತಿಗಳನ್ನು ನಿರ್ಮಿಸಿದ್ದು ಕಳೆದ ಒಂದು ತಿಂಗಳಿನಿAದ ಹಗಲು ರಾತ್ರಿ ಸಹ ಕಲಾವಿದರೊಂದಿಗೆ ಮೂರ್ತಿ ನಿರ್ಮಾಣ ಕಾರ್ಯದಲ್ಲಿ ನಿರತರಾಗಿದ್ದಾರೆ.
ಕಳೆದ ತಿಂಗಳನಿAದ ತಾವು ಸವಣೂರು ತಾಲೂಕಿನ ನಾಯಿ ಕೆರೂರಿನ ಕೆರೆಯಿಂದ ಮೃದುವಾದ ಮಣ್ಣನ್ನು ತರಿಸಿ ಅದಕ್ಕೆ ಹದ ಹಾಕಿ ನೆನೆ ಇಟ್ಟ ನಂತರ ಆ ಮಣ್ಣಿಗೆ ಮೂರ್ತ ಸ್ವರೂಪ ಬರುತ್ತದೆ ಪ್ರತಿ ಟ್ಯಾಕ್ಟರಿಗೆ ೩೦೦೦ ಇದ್ದು ಆ ಮಣ್ಣನ್ನು ಉಪಯೋಗ ಮಾಡಿ ಮೂರ್ತಿಯನ್ನು ಸಿದ್ಧಗೊಳಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.
ವಿವಿಧ ಬಣ್ಣಗಳ ಬೆಲೆ ಹೆಚ್ಚಳ ಸೇರಿದಂತೆ ಅನೇಕ ಖರ್ಚು ವೆಚ್ಚಗಳು ಬರುವುದರಿಂದ ಗಾತ್ರಕ್ಕನುಗುಣವಾಗಿ ೨೦೦೦೦ ಗಳಿಂದ ೬೦,೦೦೦ಗಳವರೆಗೆ ಗಣೇಶನ ಮೂರ್ತಿಯ ಬೆಲೆಯನ್ನು ನಿಗದಿಪಡಿಸಲಾಗಿದೆ ಎಂದರು ಗರುಡ ಸೇರಿದಂತೆ ವಿವಿಧ ದೇವಾನುದೇವತೆಗಳು ಮೂರ್ತಿ ಸಹಿತ ಗಣೇಶನ ವಿಗ್ರಹವನ್ನು ನಿರ್ಮಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.




























