
ಸಂಜೆವಾಣಿ ವಾರ್ತೆ,
ವಿಜಯಪುರ, ಜೂ. ೧೮:ಶ್ರೀ ಮಹಾರಾಣ ಪ್ರತಾಪ್ ಸಿಂಹಜಿ ಅವರ ೪೮೬ ನೇ ಜಯಂತೋತ್ಸವವನ್ನು ವಿಜಯಪುರದ ನಗರ ಅಭಿವೃದ್ಧಿ ಪ್ರಾಧಿಕಾರದ ಹತ್ತಿರವಿರುವ ಮಹಾರಾಣಾ ಪ್ರತಾಪ್ ಸಿಂಹ ಸರ್ಕಲ್ ದಲ್ಲಿ ಬುಧವಾರ ಆಚರಿಸಲಾಯಿತು.
ಮಹಾರಾಣಾ ಪ್ರತಾಪ್ ಸಿಂಹಜಿ ಅವರ ೪೮೬ನೇ ಜಯಂತೋತ್ಸವದ ಧ್ವಜಾರೋಹಣವನ್ನು ರಜಪೂತ್ ಸಮಾಜದ ಅಧ್ಯಕ್ಷ ಪರಶುರಾಮ್ ಸಿಂಗ್ ರಜಪೂತ್ ರಜಪೂತ ಅವರು ಧ್ವಜಾರೋಹಣ ನೆರವೇರಿಸಿದರು.
ಈ ಸಂದರ್ಭದಲ್ಲಿ ಸಂತೋಷ ಹಲವಾಯಿ ಮಾತನಾಡಿ, ಉತ್ತರ ಭಾರತದಲ್ಲಿ ಕ್ರಿಸ್ತಶಕ ೧೫೧೬ ರಲ್ಲಿ ಜನಿಸಿದ ವೀರ ಮಹಾರಾಣಾ ಪ್ರತಾಪ್ ಸಿಂಹAಜೆ ಹಾಗೂ ದಕ್ಷಿಣ ಭಾರತದಲ್ಲಿ ಶ್ರೀ ಛತ್ರಪತಿ ಶಿವಾಜಿ ಮಹಾರಾಜರು ಜನಿಸಿದರಿಂದ ಹಿಂದುತ್ವವು ಉಳಿಯಲು ಸಾಧ್ಯವಾಯಿತು ಮತ್ತು ಹಳದಿ ಘಾಟ್ ಯುದ್ಧದಲ್ಲಿ ಸೈನ್ಯವನ್ನು ಹಲವು ಬಾರಿ ಸೋಲಿಸಲಾಯಿತು ಮತ್ತು ಕ್ಷತ್ರಿಯ ಧರ್ಮ ಹಿಂದುತ್ವವಾಗಿದ್ದರಿAದ ಭಾರತ ದೇಶವನ್ನು ಹಿಂದೂ ದೇಶ ಎಂದು ಕರೆಯಲು ಮೂಲಕಾರಣೆಭೂತರು ರಜಪೂತರು ಹಾಗೂ ಮರಾಠ ಕ್ಷತ್ರಿಯ ಸಮಾಜದ ಪಾತ್ರ ಬಹುಮುಖ್ಯವಾದದ್ದುಎಂದರು.
ನಮ್ಮ ಭಾರತ ಪ್ರಜಾಸತ್ತಾತ್ಮಕ ರಾಷ್ಟ್ರವಾಗಿರುವುದರಿಂದ ನಾವೆಲ್ಲರೂ ಸರ್ವ ಜನಾಂಗದ ಶಾಂತಿಯ ತೋಟದಲ್ಲಿ ಇರುವವರು. ಅಭಿವೃದ್ಧಿಯೇ ನಮ್ಮ ಮಂತ್ರ. ಅದಕ್ಕಾಗಿ ನಮ್ಮ ಸಮಾಜದ ಎಲ್ಲಾ ಹೆಣ್ಣು ಗಂಡು ಮಕ್ಕಳು ವಿದ್ಯಾವಂತರಾ ಗಿ ಬಲಿಷ್ಠ ಸಮಾಜವನ್ನಾಗಿ ಮಾಡಬೇಕಾಗಿ ಕರೆ ಕೊಟ್ಟರು.
ಈ ಸಂದರ್ಭದಲ್ಲಿ ಆರ್.ಎನ್. ಹಜೇರಿ, ಸಂತೋಷ ಹಲವಾಯಿ, ಪ್ರಕಾಶ ರಜಪೂತ, ಮೋಹನ್ ಸಿಂಗ್ ರಜಪೂತ, ಅರುಣ ಠಾಕೂರ್, ಪ್ರಕಾಶ ಠಾಕೂರ್, ಸಿದ್ದು ಸಿಂಗ್, ಶರತ್, ಪ್ರಕಾಶ ತೇಲಿ, ವಿಠ್ಠಲ್ ಸಿಂಗ್ ರಜಪೂತ ಸಿದ್ದಾಪುರ ಹಾಗೂ ದೊಂಡು ಸಿಂಗ್ ಹಜೇರಿ, ಅಮರ ಸಿಂಗ್ ಬನಿಷಿ, ಪ್ರತಾಪ್ ಹಜೇರಿ ಇನ್ನು ಅನೇಕ ಸಮಾಜದ ಮುಖಂಡರು ಪಾಲ್ಗೊಂಡಿದ್ದರು.


























