
ಬೀದರ: ಜೂ.18:ಮಹಾರಾಣ ಪ್ರತಾಪ ಅವರು ಒಬ್ಬ ಸ್ವಾಭಿಮಾನಿ ಹೋರಾಟಗಾರರಾಗಿದ್ದರು. ಹಿಂದೂ ಧರ್ಮದ ರಕ್ಷಕರಾಗಿ, ಭಾರತದ ಸ್ವಾಭಿಮಾನಿಯಾಗಿ ಬದುಕಿ ಮೊಘಲರ ವಿರುದ್ಧ ಹೋರಾಟ ಮಾಡಿದ್ದರು ಎಂದು ರಾಜಪುತÀ ಕ್ಷತ್ರಿಯ ಸಮಾಜದ ಅಧ್ಯಕ್ಷರಾದ ಪ್ರಫುಲಕುಮಾರ ಪಾಂಡೆ ತಿಳಿಸಿದರು.
ವೀರಶಿರೋಮಣಿ ಮಹಾರಾಣಾ ಪ್ರತಾಪ ಅವರ 486ನೇ ವರ್ಷದ ಜಯಂತಿ ಉತ್ಸವವನ್ನು ಬೀದರನ ಪ್ರತಾಪನಗರದಲ್ಲಿ ಆಯೋಜಿಸಲಾಗಿತ್ತು. ಈ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಹಾರಾಣ ಪ್ರತಾಪ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಪಾಂಡೆಯವರು ಮಹಾರಾಣ ಪ್ರತಾಪ ಅವರು ಒಬ್ಬ ಸ್ವಾಭಿಮಾನಿ ಹೋರಾಟಗಾರರಾಗಿದ್ದರು. ಹಿಂದೂ ಧರ್ಮದ ರಕ್ಷಕರಾಗಿ, ಭಾರತದ ಸ್ವಾಭಿಮಾನಿಯಾಗಿ ಬದುಕಿ ಮೊಘಲರ ವಿರುದ್ಧ ಹೋರಾಟ ಮಾಡಿದ್ದರು ಎಂದು ತಿಳಿಸಿದರು.
ಭಾರತದ ಸಂರಕ್ಷಣೆಗೆ ರಾಜಪುತ ಸಮಾಜದ ಕೊಡುಗೆ ಅಪಾರವಾಗಿದೆ ಎಂದು ಪ್ರತಿಪಾದಿಸಿದರು. ಈ ನಿಟ್ಟಿನಲ್ಲಿ ಮಹಾರಾಣ ಅವರ ಧೈರ್ಯ ಸ್ಥೈರ್ಯ ಮತ್ತು ಸಾಹಸ ಪ್ರವೃತ್ತಿಯನ್ನು ಯುವಕರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅವರ ಸಾಹಸಿ ಪ್ರವೃತ್ತಿಯನ್ನು ಮೈಗೂಡಿಸಿಕೊಂಡು ವೀರರಾಗಿ ಬದುಕಿ ಹಿಂದೂ ಧರ್ಮವನ್ನು ಉಳಿಸಿ ಬೆಳೆಸಬೇಕೆಂದು ಹೇಳಿದರು.
ಬೆಳಿಗ್ಗೆ ಸಂದರ್ಭದಲ್ಲಿ ಪ್ರತಾಪನಗರದಲ್ಲಿರುವ ಮಹಾರಾಣ ಪ್ರತಾಪ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಜೈಕಾರಗಳನ್ನು ಕೂಗುತ್ತ ರಾಜಪುತ ಕ್ಷತ್ರಿಯ ಸಮಾಜದ ಯುವಕರು, ಹಿರಿಯರು ಗೌರವ ವಂದನೆ ಸಲ್ಲಿಸಿದರು. ರಾಜಪುತ ಸಮಾಜದ ವತಿಯಿಂದ ಭಾರತದ ಸಂಸ್ಕøತಿ, ಆಚಾರ ವಿಚಾರಗಳನ್ನು ಮೊಘಲರ ದಬ್ಬಾಳಿಕೆಯಿಂದ ಉಳಿಸಿ ಬೆಳೆಸುವಲ್ಲಿ ಪ್ರತಾಪರ ಕೊಡುಗೆ ಅಪಾರವಾಗಿದೆ. ಶಿವಾಜಿ ಮಹಾರಾಜರಂತೆ ಶೌರ್ಯದಿಂದ ಬದುಕಿ ತೋರಿಸಿದ್ದಾರೆ ಎಂದು ಪ್ರತಾಪರ ಜೀವನದ ಮೇಲೆ ಹಲವರು ಬೆಳಕು ಚೆಲ್ಲಿದರು.
ಇದೇ ವೇಳೆ ಸಮಾರಂಭದಲ್ಲಿ ರಾಜಪುತ ಕ್ಷತ್ರಿಯ ಸಮಾಜದ ಉಪಾಧ್ಯಕ್ಷರಾದ ಸಂಜಯಸಿಂಗ್ ಪವಾರ್, ಗೌರವಾಧ್ಯಕ್ಷರಾದ ಉದಯಪ್ರತಾಪ ಸಿಂಹ ಠಾಕೂರ್, ಪ್ರದಾನ ಕಾರ್ಯದರ್ಶಿ ಮೋತಿಲಾಲ್ ಸಿಂಗ ಪವಾರ್, ಕಾರ್ಯದರ್ಶಿ ಮಹೇಶಸಿಂಹ ಠಾಕೂರ್, ಹಿರಿಯ ಸಲಹೆಗಾರರಾದ ಡಾ. ಚುನ್ನುಲಾಲ್ ಠಾಕೂರ್ ಮಹಾರಾಜ್, ಪೃಥ್ವಿಸಿಂಗ್ ಠಾಕೂರ್, ಅನೀಲ ಶರ್ಮಾ ಹಾಗೂ ಇನ್ನಿತರರು ಗಣ್ಯವ್ಯಕ್ತಿಗಳು ಹಾಗೂ ರಾಜಪುತ ಸಮಾಜದ ಬಂಧುಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


























