
ಮುದ್ದೇಬಿಹಾಳ : ಧ್ವೆöÊತಸಿದ್ದಾಂತದ ಪ್ರತಿಪಾದಕರಾದ ಶ್ರೀ ಮದ್ವಾಚಾರ್ಯರು ಭಾರತೀಯ ಆಧ್ಯಾತ್ಮಿಕ ಪರಂಪರೆ ಹಾಗೂ ತತ್ವಶಾಸ್ತçಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ ಉಡುಪಿಯಲ್ಲಿ ಜಗತ್ಪ್ರಸಿದ್ಧ ಶ್ರೀಕೃಷ್ಣನ ವಿಗ್ರಹವನ್ನು ಪ್ರತಿಷ್ಠಾಪಿಸಿ, ಕೃಷ್ಣ ಭಕ್ತಿಯ ಪ್ರಸಾರಕ್ಕೆ ಮಹತ್ವದ ಕೊಡುಗೆ ನೀಡಿದ ಕೀರ್ತಿ ಮದ್ವಾಚಾರ್ಯರಿಗೆ ಸಲ್ಲುತ್ತದೆ ಎಂದು ವಿಪ್ರ ಸಮಾಜದ ಮುಖಂಡ ಶ್ರೀನಿವಾಸ ಗಜೇಂದ್ರಗಡ ಹೇಳಿದರು.
ಬುಧವಾರರಂದು ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ತಾಲ್ಲೂಕು ಆಡಳಿತದಿಂದ ಏರ್ಪಡಿಸಿದ್ದ ಮಧ್ವಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು ಕೃಷ್ಣನ ಪೂಜಾ ಕೈಂಕರ್ಯಗಳಿಗಾಗಿ ಅಷ್ಟ ಮಠಗಳನ್ನು ಸ್ಥಾಪಿಸಿದ ಕೀರ್ತಿ ಮಧ್ವಾಚಾರ್ಯರರಿಗೆ ಸಲ್ಲುತ್ತದೆ ಇವರು ಒಟ್ಟು ೩೭ ಸರ್ವಮೂಲ ಗ್ರಂಥಗಳನ್ನು ರಚಿಸಿದ್ದಾರೆ ಎಂದರು.
ಇನ್ನೊರ್ವ ಮುಖಂಡ ರಾಮಚಂದ್ರರಾವ ಗಜೇಂದ್ರಗಡ ಮಾತನಾಡಿ, ಭಕ್ತಿ ಪರಂಪರೆಯಲ್ಲಿ ಇವರನ್ನು ಹನುಮಂತ ಮತ್ತು ಭೀಮಸೇನನ ನಂತರದ ವಾಯುದೇವರ ಮೂರನೇ ಅವತಾರ ಎಂದು ನಂಬಲಾಗುತ್ತದೆ. ಹಿಂದೂ ಧರ್ಮದ ಪ್ರಮುಖ ತತ್ತ್ವಗಳಲ್ಲಿ ಒಂದಾದ ದ್ವೈತ ಸಿದ್ದಾಂತವನ್ನು ಪ್ರತಿಪಾದಿಸಿ ಭಾರತೀಯ ಆದ್ಯಾತ್ಮಿಕ ಪರಂಪರೆಗೆ ಮಹತ್ವದ ಕೊಡುಗೆಯನ್ನು ನೀಡಿದ್ದಾರೆ ಶ್ರೀ ಹರಿಯೇ ಸರ್ವೋತ್ತಮ ಸಕಲ ಜಗತ್ತಿನ ಸೃಷ್ಠಿ, ಸ್ಥಿತಿ ಮತ್ತು ಲಯಕ್ಕೆ ಆತನೇ ಮೂಲಾಧಾರ ಭಕ್ತಿಯೇ ಮುಕ್ತಿಗೆ ಮಾರ್ಗ ಮತ್ತು ಜಗತ್ತು ಸತ್ಯ ಎಂಬುದು ಇವರ ಸಿದ್ಧಾಂತದ ಮೂಲ ತತ್ತ್ವವಾಗಿದೆ ಎಂದರು.
ಈ ಸಮಯದಲ್ಲಿ ಶ್ರೀ ರಾಘವೇಂದ್ರ ಮಠದ ಕಮೀಟಿ ಅಧ್ಯಕ್ಷರಾದ ಎಸ್.ಆರ್.ಕುಲಕರ್ಣಿ, ವಿ.ಜಿ.ಪಾಟೀಲ, ಜಿ.ಆರ್.ದೊಡ್ಡಿಹಾಳ, ಎ.ಬಿ.ಕುಲಕರ್ಣಿ, ಆರ್.ಬಿ.ಕುಲಕರ್ಣಿ, ಎನ್.ಜಿ.ಕುಲಕರ್ಣಿ, ಎ.ಕೆ.ಹುನಗುಂದ, ಆರ್.ಕೆ.ಕುಲಕರ್ಣಿ, ಬಿ.ಎಚ್.ಕುಲಕರ್ಣಿ, ಸುಬಾಸ ಇಟಗಿ, ಬಾಳು ಗಿಂಡಿ, ರವಿ ಕುಲಕರ್ಣಿ, ಯಮ, ಎಂ.ಎನ್. ರತ್ನಾಕರ, ಶಿರಸ್ತೇದಾರ ಎಂ.ಎಸ್.ಬಾಗೇವಾಡಿ, ಸಿಬ್ಬಂದಿ ಬಸವರಾಜ, ಜಿ.ಎನ್.ಕಟ್ಟಿ, ಮುದ್ದೇಬಿಹಾಳ ಮೊದಲಾದವರು ಉಪಸ್ತಿತರಿದ್ದರು.























