Home ಜಿಲ್ಲೆ ಕಲಬುರಗಿ ಮಿರ್ಜಾ ಫೇರೂಜ ಇಮ್ರಾನ್‍ಗೆ ಪ್ರಶಂಸನಾ ಪತ್ರ

ಮಿರ್ಜಾ ಫೇರೂಜ ಇಮ್ರಾನ್‍ಗೆ ಪ್ರಶಂಸನಾ ಪತ್ರ

ಕಲಬುರಗಿ,ಮೇ 2: ಶೈಕ್ಷಣಿಕ ಕ್ಷೇತ್ರದಲ್ಲಿನ ನಿರಂತರ ಸೇವೆಯನ್ನು ಗುರುತಿಸಿ, ಹಬೀಬ್ ಎಜುಕೇಶನ್ ಸೊಸೈಟಿಯ ಅಧ್ಯಕ್ಷ ಮಿರ್ಜಾ ಫೇರೂಜ ಇಮ್ರಾನ್‍ರಿಗೆ ಡಾ. ಮೊಹಮ್ಮದ್ ಅಸಗರ ಚುಲಬುಲ್ ಅವರು ವಿಶೇಷ ಪ್ರಶಂಸನಾ ಪತ್ರವನ್ನು ನೀಡಿ ಗೌರವಿಸಿದರು.
ತಯ್ಯಬತ್ ಇಂಗ್ಲಿಷ್ ಮೀಡಿಯಂ ಶಾಲೆಯ ವತಿಯಿಂದ ಕಳೆದ ಏಳು ವರ್ಷಗಳಿಂದ ಸೀರತ್-ಉನ್-ನಬಿ ಸ್ಪರ್ಧೆಗಳ ಆಯೋಜನೆ ಮತ್ತು ಅದಕ್ಕೆ ನೀಡಿದ ಸಹಕಾರಕ್ಕಾಗಿ ಈ ಗೌರವವನ್ನು ನೀಡಲಾಗಿದೆ.ಈ ಸಮಾರಂಭವು ತಯ್ಯಬತ್ ಗಲ್ರ್ಸ್ ಶಾಲೆಯಲ್ಲಿ ಎಸ್‍ಎಸ್‍ಎಲ್‍ಸಿಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿನಿಯರ ಸನ್ಮಾನ ಸಮಾರಂಭದ ಸಂದರ್ಭದಲ್ಲಿ ಜರುಗಿತು.
ಈ ಸಂದರ್ಭದಲ್ಲಿ ಮೌಲಾನಾ ಸೈಯದ್ ಖಾಸಿಂ ಬುಖಾರಿ ಖಾದ್ರಿ , ಇಕ್ಬಾಲ್ ಅಲಿ, ಮೊಹಮ್ಮದ್ ರಫೀಕ್ ಅಹ್ಮದ್ , ಡಾ. ಫಾರೂಕ್ ಮುನವರ್ ಮತ್ತು ಮುಖಂಡರು ಉಪಸ್ಥಿತರಿದ್ದರು.