
ನವಲಗುAದ,ಜು.೧೨: “ಪ್ರಜಾಪ್ರಭುತ್ವದ ಅಡಿಪಾಯವೇ ನಿಖರ ಮತ್ತು ಸಮಗ್ರ ಮತದಾರರ ಪಟ್ಟಿಯಾಗಿದೆ. ಹೀಗಾಗಿ ಪ್ರತಿಯೊಬ್ಬ ಅರ್ಹ ನಾಗರಿಕರ ಹೆಸರು ಮತದಾರರ ಪಟ್ಟಿಯಲ್ಲಿ ಕಡ್ಡಾಯವಾಗಿ ನೋಂದಣಿಯಾಗಿರುವುದನ್ನು ಖಚಿತಪಡಿಸಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ” ಎಂದು ಶಾಸಕ ಎನ್. ಎಚ್. ಕೋನರಡ್ಡಿ ತಿಳಿಸಿದರು.
ತಾಲೂಕಿನ ಹಣಸಿ, ಶಿರಕೋಳ, ಮೊರಬ ಗ್ರಾಮಗಳಿಗೆ ಭೇಟಿ ನೀಡಿದ ಅವರು, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIಖ) ಪ್ರಕ್ರಿಯೆಯ ಅಂಗವಾಗಿ ಬೂತ್ ಮಟ್ಟದ ಅಧಿಕಾರಿಗಳ ಸಮ್ಮುಖದಲ್ಲಿ ಎಸ್‌ಐಆರ್ ನಮೂನೆಯನ್ನು ಭರ್ತಿ ಮಾಡಿ ಸಲ್ಲಿಸಿದರು. ನಂತರ ಸಾರ್ವಜನಿಕರನ್ನುದ್ದೇಶಿಸಿ ಅವರು ಮಾತನಾಡಿದರು.
“ಈ ವಿಶೇಷ ಪರಿಷ್ಕರಣೆ ಅಭಿಯಾನದಲ್ಲಿ ಕಾಂಗ್ರೆಸ್ ಪಕ್ಷದ ಎಲ್ಲಾ ಕಾರ್ಯಕರ್ತರು ಸಕ್ರಿಯವಾಗಿ ಭಾಗವಹಿಸಬೇಕು. ಅರ್ಹ ಮತದಾರರಿಗೆ ಅಗತ್ಯ ನೆರವು ನೀಡಿ, ಯಾವುದೇ ಒಬ್ಬ ಅರ್ಹ ವ್ಯಕ್ತಿಯ ಹೆಸರು ಕೂಡ ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ಜಾಗೃತಿ ಮೂಡಿಸಬೇಕು. ಆ ಮೂಲಕ ಪ್ರಜಾಪ್ರಭುತ್ವವನ್ನು ಬಲಪಡಿಸೋಣ ಮತ್ತು ಪ್ರತಿಯೊಬ್ಬ ಅರ್ಹ ಮತದಾರನ ಹಕ್ಕನ್ನು ಸಂರಕ್ಷಿಸೋಣ” ಎಂದು ಕರೆ ನೀಡಿದರು.
ಬ್ಲಾಕ್ ಅಧ್ಯಕ್ಷ ವರ್ಧಮಾನ ಹಿರೇಗೌಡ್ರ, ?ಸದುಗೌಡ ಪಾಟೀಲ, ಎಮ್. ಎಸ್. ರೋಣದ, ಶಾಂತವ್ವ ಗುಜ್ಜಳ, ಸೋಮಲಿಂಗಪ್ಪ ಬಳಿಗೇರ, ದಾವಲಸಾಬ್ ಖುದ್ಧನವರ, ಸಂತೋಷ್ ಗುಜ್ಜಳ, ಈರಪ್ಪ ಮಾಳವಡ್, ಮೌಲಾಸಬ್ ಮುತ್ತೋಜಿ, ಎಮ್. ಎಮ್. ಕಳ್ಳಿಮನಿ, ಗಡಿಗೆಪ್ಪ ಪಾಟೀಲ್, ರಾಮಣ್ಣ ನಾಯ್ಕರ, ಶಿವಲೀಲಾ ಬೋರಶೆಟ್ಟರ, ಸುರೇಶ ಯಕ್ಕುಂಡಿ, ಬಸವರಾಜ ಗಾಣಿಗೇರ, ಕಲ್ಲಪ್ಪ ಬಸಿದೋಣಿ, ಪರಮೇಶ್ವರ ಹೊಸವಾಳ, ಸುರೇಶ ಬೆಟಸೂರ್,ಸೇರಿದಂತೆ ಹಣಸಿ, ಶಿರಕೋಳ ಮೊರಬ ಗ್ರಾಮದ ಗ್ರಾಮಸ್ಥರು,ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.































